ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಸಾಮಾಜಿಕ ಕಾರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರೊ.ಬಟ್ಟು ಸತ್ಯನಾರಾಯಣ, ಇಎಸ್‌ಐಸಿ ಸಂಯುಕ್ತ ನಿರ್ದೇಶಕ ಯುವರಾಜ್‌ಸಿಂಗ್, ಇಪಿಎಫ್‌ಒ ಪ್ರಾದೇಶಿಕ ಆಯುಕ್ತ ಎಂ.ಸುಬ್ರಹ್ಮಣ್ಯA, ಇಎಸ್‌ಐಸಿ ಉಪನಿರ್ದೇಶಕ ರಮೇಶ್ ರೈ, ಸಹಾಯಕ ಆಯುಕ್ತ ಡಾ.ಭರತ್‌ಲಾಲ್ ಮೀನಾ, ಪ್ರೊ.ಪವಿತ್ರಾ ಆಲೂರ್ ಇತರರಿದ್ದರು.
ಕಲಬುರಗಿ:ವಿಶ್ವ ಸಾಮಾಜಿಕ ಕಾರ್ಯ ದಿನವು ನಮ್ಮ ಸಮುದಾಯಗಳಲ್ಲಿ ಸಕಾರಾತ್ಮಕ ಬದಲಾವಣೆ ತರಲು ಶ್ರಮಿಸುವ ಸಾಮಾಜಿಕ ಕಾರ್ಯಕರ್ತರ ನಿರಂತರ ಪ್ರಯತ್ನ ಪರಾಮರ್ಶಿಸುವ ಕ್ಷಣ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಸಾಮಾಜಿಕ ಕಾರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಮಾಜಿಕ ಭದ್ರತಾ ಯೋಜನೆ ಜಾರಿಗೆ ತರುವಲ್ಲಿ, ಜಾಗೃತಿ ಮೂಡಿಸುವಲ್ಲಿ ಹಾಗೂ ಅತ್ಯಂತ ದುರ್ಬಲ ವರ್ಗಗಳಿಗೆ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದರು.
ಇಎಸ್‌ಐಸಿ ಮತ್ತು ಪಿಂಚಣಿಯAತಹ ಯೋಜನೆಗಳ ಕುರಿತು ಜನರಿಗೆ ತಿಳಿವಳಿಕೆ ನೀಡುವುದು, ಸೌಲಭ್ಯ ಪಡೆಯಲು ಸಹಾಯ ಮಾಡುವುದು, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳನ್ನು ಸಬಲಗೊಳಿಸುವುದು. ಸೇವೆಗಳ ಮಧ್ಯೆ ಇರುವ ಅಂತರ ತುಂಬುವುದು ಇವರ ಪ್ರಮುಖ ಕರ್ತವ್ಯಗಳಾಗಿವೆ ಎಂದು ಹೇಳಿದರು.
ಇಎಸ್‌ಐಸಿ ಸಂಯುಕ್ತ ನಿರ್ದೇಶಕ ಯುವರಾಜ್ ಸಿಂಗ್ ಮಾತನಾಡಿ, ಸಾಮಾಜಿಕ ಭದ್ರತೆಗೆ ಸಾಮಾಜಿಕ ಕಾರ್ಯ ಮತ್ತು ಇತರ ಇಲಾಖೆಗಳು ಪರಸ್ಪರ ಸಂಬAಧ ಹೊಂದಿವೆ. 1948ರಲ್ಲಿ ಸ್ಥಾಪಿತವಾದ ಇಎಸ್‌ಐಸಿ ಸಾಮಾಜಿಕ ಭದ್ರತೆ ಒದಗಿಸಲು ಆರಂಭಿಸಲಾಯಿತು. 1948ರ ಇಎಸ್‌ಐಸಿ ಕಾಯ್ದೆಯಡಿ ಆಸ್ಪತ್ರೆ, ಹೋಟೆಲ್ ಹಾಗೂ ಕಾರ್ಮಿಕರು ಒಳಪಡುತ್ತಾರೆ. ಸಂಸ್ಥೆಗಳು ಮತ್ತು ನೌಕರರಿಗೆ ನೋಂದಣಿ ಮಾಡಲಾಗುತ್ತದೆ. ಮಾತೃತ್ವ ರಜೆ ಅವಧಿಯಲ್ಲಿ ಇಎಸ್‌ಐಸಿ ನೌಕರರಿಗೆ ವೇತನ ಪಾವತಿಸುತ್ತದೆ. ಗಾಯ ಮತ್ತು ಅಪಘಾತ ಚಿಕಿತ್ಸೆ ವಿಮೆಯಡಿ ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಇಪಿಎಫ್‌ಒ ಪ್ರಾದೇಶಿಕ ಆಯುಕ್ತ ಎಂ.ಸುಬ್ರಹ್ಮಣ್ಯA ಮಾತನಾಡಿ, ಆರ್ಥಿಕ ಸ್ಥಿರತೆ ಸಾಮಾಜಿಕ ಗೌರವದ ಜೀವನಕ್ಕೆ ಅಗತ್ಯವಾಗಿದೆ ಎಂದು ಹೇಳಿದರು.
ಇಎಸ್‌ಐಸಿ ಉಪನಿರ್ದೇಶಕ ರಮೇಶ್ ರೈ, ಸಹಾಯಕ ಆಯುಕ್ತ ಡಾ.ಭರತ್‌ಲಾಲ್ ಮೀನಾ ಅಭಿಪ್ರಾಯ ಹಂಚಿಕೊAಡರು. ಪ್ರೊ. ಅಂಗಡಿ, ಪ್ರೊ.ಎಂ.ಎಸ್.ಪಾಸೋಡಿ, ಪ್ರೊ.ಪಾಂಡುರAಗ ಪತ್ತಿ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡೀನ್ ಹಾಗೂ ವಿಭಾಗ ಮುಖ್ಯಸ್ಥೆ ಪ್ರೊ.ಪವಿತ್ರ ಆಲೂರ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾ.ಹರೀಶ್ ಕುಮಾರ್ ಚೌಧರಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳು ರಾಷ್ಟçಗೀತೆ ಮತ್ತು ರಾಷ್ಟçಗಾನ ಹಾಡಿದರು. ಡಾ.ಲಕ್ಷö್ಮಣ ವಂದಿಸಿದರು.
"
ಪ್ರತಿಯೊಬ್ಬ ನಾಗರಿಕರೂ ಆರ್ಥಿಕ ಸಾಕ್ಷರತೆ, ಅದು ಸಾಮಾಜಿಕ ಭದ್ರತೆಗೆ ಹೇಗೆ ಸಂಬAಧಿಸುತ್ತದೆ ಎಂಬುದರ ಬಗ್ಗೆ ತಿಳಿದಿರಬೇಕು. ಕೇಂದ್ರ ಸರ್ಕಾರ ಇಪಿಎಫ್‌ಒ, ಕಾರ್ಮಿಕ ಸಚಿವಾಲಯದಡಿ ಉದ್ಯೋಗಿಗಳಿಗೆ ಬೆಂಬಲ ನೀಡಲು ಮೂರು ಪ್ರಮುಖ ಯೋಜನೆ ಪರಿಚಯಿಸಿದೆ. ಅದರಲ್ಲಿ ಪ್ರಧಾನಮಂತ್ರಿ ಅಭಿವೃದ್ಧಿ ಭಾರತ ಉದ್ಯೋಗ ಯೋಜನೆಯೂ ಸೇರಿದೆ.