ಗೋದುತಾಯಿ ಕಾಲೇಜಿಗೆ ರನ್ನರ್​ಅಪ್​ ಪ್ರಶಸ್ತಿ

ಅಂತರ್​ ಮಹಾವಿದ್ಯಾಲಯಗಳ ಯುವಜನೋತ್ಸವ ಶಕ್ತಿ ಸಂಭ್ರಮದಲ್ಲಿ ಕಲಬುರಗಿ ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯವು ರನ್ನರ್​ಅಪ್​ ಪ್ರಶಸ್ತಿ ಪಡೆದು ಸಂಭ್ರಮಿಸಿತು. ವೀರಭದ್ರಯ್ಯ ಸ್ಥಾವರಮಠ, ಕೃಪಾಸಾಗರ ಗೊಬ್ಬುರ್​, ಬಾಬುರಾವ ಮಡಿವಾಳ, ಪ್ರಭಾವತಿ ಎಚ್​., ಪ್ರಶಾಂತ ಗೋಲ್ಡಸ್ಮಿತ್​, ಪೂಜಾ ಮಡಿವಾಳಪ್ಪ ಇತರರಿದ್ದರು.
ಅಂತರ್​ ಮಹಾವಿದ್ಯಾಲಯಗಳ ಯುವಜನೋತ್ಸವ ಶಕ್ತಿ ಸಂಭ್ರಮದಲ್ಲಿ ಕಲಬುರಗಿ ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯವು ರನ್ನರ್​ಅಪ್​ ಪ್ರಶಸ್ತಿ ಪಡೆದು ಸಂಭ್ರಮಿಸಿತು. ವೀರಭದ್ರಯ್ಯ ಸ್ಥಾವರಮಠ, ಕೃಪಾಸಾಗರ ಗೊಬ್ಬುರ್​, ಬಾಬುರಾವ ಮಡಿವಾಳ, ಪ್ರಭಾವತಿ ಎಚ್​., ಪ್ರಶಾಂತ ಗೋಲ್ಡಸ್ಮಿತ್​, ಪೂಜಾ ಮಡಿವಾಳಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂತರ್​ ಮಹಾವಿದ್ಯಾಲಯಗಳ ಯುವಜನೋತ್ಸವ
  • ವಿದ್ಯಾರ್ಥಿನಿಯರ ಸಾಧನೆಗೆ ಅಪ್ಪ ಶ್ಲಾನೆ
ಕಲಬುರಗಿ: ಮುಧೋಳದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಬಿ.ವಿ.ವಿ. ಸಂದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ಅಂತರ್​ ಮಹಾವಿದ್ಯಾಲಯಗಳ ಯುವಜನೋತ್ಸವ 20ನೇ ಶಕ್ತಿ ಸಂಭ್ರಮದಲ್ಲಿ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯ ರನ್ನರ್​ಅಪ್​ ಪ್ರಶಸ್ತಿ$ಪಡೆದು ಸಾಧನೆ ಮೆರೆದಿದೆ.
ಸಂಗೀತ ಸ್ಪರ್ಧೆ: ವೆಸ್ಟರ್ನ್​ ಗ್ರೂಫ್​ ಸಾಂಗ್​, ಭಾವಗೀತೆ, ವೆಸ್ಟರ್ನ್​ ಇನ್​ಸ್ಟ್ರುಮೆಂಟಲ್​ ಸೋಲೊದಲ್ಲಿ ಪ್ರಥಮ, ನಾನ್​ ಕ್ಲಾಸಿಕಲ್​ ವೋಕಲ್​ ಸೋಲೊದಲ್ಲಿ ತೃತೀಯ, ಇಂಡಿಯನ್​ ಗ್ರೂಫ್​ ಸಾಂಗ್​ನಲ್ಲಿ ದ್ವೀತಿಯ. ಸಾಹಿತ್ಯ ಸ್ಪರ್ಧೆ: ವಾದವಿವಾದ ಪ್ರಥಮ, ಡಿಬೇಟ್​ ದ್ವೀತಿಯ. ಸಾಹಿತ್ಯ ಸ್ಪರ್ಧೆಯಲ್ಲಿ ವಿನ್ನರ್​, ಸಂಗೀತ ಸ್ಪರ್ಧೆಯಲ್ಲಿ ರನ್ನರ್​ ಪ್ರಶಸ್ತಿ ಪಡೆದಿದ್ದಾರೆ.
ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ವೀರಭದ್ರಯ್ಯ ಸ್ಥಾವರಮಠ, ಕೃಪಾಸಾಗರ ಗೊಬ್ಬುರ್​, ಬಾಬುರಾವ ಮಡಿವಾಳ, ಪ್ರಭಾವತಿ ಎಚ್​., ಸಹಕಲಾವಿದರಾದ ಪ್ರಶಾಂತ ಗೋಲ್ಡಸ್ಮಿತ್​, ಪೂಜಾ ಮಡಿವಾಳಪ್ಪ ನೇತೃತ್ವದಲ್ಲಿ ವಿದ್ಯಾರ್ಥಿನಿಯರಾದ ಪ್ರೀತಿ ಬಿರಾದಾರ್​, ಅಕ್ಷತಾ ಹಿರೇಮಠ, ಶಾಂಭವಿ ವಿಶ್ವನಾಥಮಠ, ಸ್ಪೂರ್ತಿ ಪಂಚಾಳ, ಸ್ನೇಹ, ಪ್ರಿಯಾಂಕಾ, ಮಹಾದೇವಿ, ಐಶ್ವರ್ಯ, ಸಾಧನ ಪವಾರ್​, ಈಶ್ವರಿ, ಲಕ್ಷಿ$್ಮ, ಬಸಮ್ಮ, ಭವಾನಿ ಪಾಟೀಲ, ಭಾಗ್ಯಶ್ರೀ, ನಾಗವೇಣಿ ಮತ್ತು ಪಲ್ಲವಿ ಭಾಗವಹಿಸಿದ್ದರು.
ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆ ಅಧ್ಯಕ್ಷೆ ಮಾತೋಶ್ರೀ ಡಾ.ದಾಾಯಿಣಿ ಎಸ್​.ಅಪ್ಪ, 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ, ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ ಹರ್ಷವ್ಯಕ್ತಪಡಿಸಿ ಆಶೀರ್ವದಿಸಿದ್ದಾರೆ. ಮಹಾವಿದ್ಯಾಲಯ ಪ್ರಾಚಾಯೆರ್ ಡಾ.ಸೀಮಾ ಪಾಟೀಲ್​ ಅಭಿನಂದಿಸಿದ್ದಾರೆ.
"

ಶರಣಬಸವವೇಶ್ವರ ವಿದ್ಯಾವರ್ಧಕ ಸಂದಡಿ ವಿದ್ಯಾ ಸಂಸ್ಥೆಗಳಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ. ಜತೆಗೆ ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಬೆಳೆಯುವುದನ್ನು ಮನನ ಮಾಡಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿನಿಯರು ಯುವಜನೋತ್ಸವದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವುದು ಸಂತಸದ ಸಂಗತಿ.

> ಬಸವರಾಜ ದೇಶಮುಖ, ಕಾರ್ಯದರ್ಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net