ವಿದ್ಯಾರ್ಥಿಗಳ ಅರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು, ಮೂವರು ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿನಿಯ ತಲೆ ಮೇಲೆ, ಇನ್ನಿಬ್ಬರಿಗೆ ಭುಜ, ಬೆನ್ನಿನ ಮೇಲೆ ಪದರು ಉದುರಿ ಬಿದಿದ್ದರಿಂದ ಗಾಯವಾಗಿದ್ದು, ಈಗಾಗಲೆ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಯಾವುದೇ ಭಯಪಡುವಂತಿದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮುನ್ನೆಚ್ಚರಿಕೆಯಾಗಿ 24 ಗಂಟೆ ಕಾಲ ಆಸ್ಪತ್ರೆಯಲ್ಲಿಯೆ ವಿದ್ಯಾರ್ಥಿಗಳನ್ನು ಇರಿಸಿಕೊಂಡು ಸೂಕ್ತ ಚಿಕಿತ್ಸೆ ಮತ್ತು ನಿಗಾ ವಹಿಸಲಾಗುತ್ತಿದೆ. ಪಾಲಕರಿಗೂ ವಿಷಯ ತಿಳಿಸಿದ್ದು, ಯಾವುದೇ ರೀತಿಯಲ್ಲಿ ಗಾಬರಿ ಪಡಬೇಕಿಲ್ಲ ಎಂದು ಅವರಿಗೆ ಅಭಯ ನೀಡಲಾಗಿದೆ ಎಂದರು. ಡಿ.ಡಿ.ಪಿ.ಯು ಸುರೇಶ ಅಕ್ಕಣ್ಣ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.