ಅಕ್ರಮವಾಗಿ ಸಾಗಿಸುತ್ತಿದ್ದ 19 ಗೋವುಗಳ ರಕ್ಷಣೆ

cows rescued
cows rescued
Published on

ಪ್ರಮುಖ ಮುಖ್ಯಾಂಶಗಳು

  • ಬಜರಂಗದಳ ಕಾರ್ಯಕರ್ತರ ಸಾಥ್​, ಪೊಲೀಸರ ಕಾರ‍್ಯಾಚರಣೆ
ಕಲಬುರಗಿ: ಅಕ್ರಮವಾಗಿ ಸಾಗಿಸುತ್ತಿದ್ದ ೧೯ ಗೋವುಗಳನ್ನು ರಸಿದ ಟನೆ ನಗರದ ಸಬ್​ ರ‍್ಬನ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೂ.೨೩ರಂದು ಅಜಲಪುರ ರಸ್ತೆ ಮರ‍್ಗವಾಗಿ ನಗರಕ್ಕೆ ಗೋವುಗಳನ್ನು ವಾಹನದಲ್ಲಿ ಸಾಗಿಸುತ್ತಿರುವ ಮಾಹಿತಿ ಮೇರೆಗೆ ಬಜರಂಗ ದಳ ಕರ‍್ಯರ‍್ತರು ಪತ್ತೆ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕರ‍್ಯಾಚರಣೆ ನಡೆಸಿ, ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ.
ಜೂ.೨೩ರಂದು ಶರಣಸಿರಸಗಿ ಗ್ರಾಮದ ಬಳಿ ವಾಹನವನ್ನು ನಿಲ್ಲಿಸಿದ ಪೊಲೀಸರು ತಪಾಸಣೆ ನಡೆಸಿದಾಗ ಚಾಲಕ ಮಹ್ಮದ್​ನೂರ್​ ಬೇಾರಿಯನ್ನು ವಿಚಾರಿಸಿದಾಗ "ಆಳಂದ ತಾಲೂಕಿನ ಮಾದನಹಿಪ್ಪರಗಾ ಜಾನುವಾರು ಸಂತೆಯಿಂದ ಗೋವುಗಳನ್ನು ಪೋಮು ಪವಾರ ಎಂಬಾತ ಖರೀದಿಸಿ, ಕೊಟ್ಟಿದ್ದು, ಮಹಾಗಾಂವ ಗ್ರಾಮಕ್ಕೆ ಬಿಡಲು ತಿಳಿಸಿದ್ದ. ರಸೀದಿಗಳು ಅವರ ಬಳಿ ಇವೆ. ನಮ್ಮ ಬಳಿ ದಾಖಲೆ ಇಲ್ಲ ಎಂದು ತಿಳಿಸಿದ್ದಾನೆ. ನಂತರ ವಿಚಾರಿಸಿದಾಗ ಖಸಾಯಿಖಾನೆಗೆ ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ. ಜಾನುವಾರು ವಶಕ್ಕೆ ಪಡೆದು, ರ‍್ಕಾರಿ ಗೋಶಾಲೆ ಪೊಲೀಸರು ಬಿಟ್ಟಿದ್ದಾರೆ. ಜೂ.೨೪ರಂದು ದಾಖಲೆ ಹಾಜರುಪಡಿಸದ ಕಾರಣಕ್ಕೆ ಚಾಲಕ ಮಹ್ಮದ್​ ನೂರ್​, ಮಾಲಿಕ ಸಮೀರ ಬಾಬಾ ವಿರುದ್ಧ ಸಬ್​ ರ‍್ಬನ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net