ಸಾಧಕರ ಗುರುತಿಸುವಿಕೆ ಅತ್ಯಂತ ಅಗತ್ಯ

ಕಲಬುರಗಿ ತಾಲೂಕು ನಾವದಗಿಯಲ್ಲಿ ಶರಣ ಸಾಹಿತ್ಯ ಪರಿಷತ್ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ  ಸಾಧಕರಿಗೆ ಚಿನ್ಮಯಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಮರನಾಥ ಪಾಟೀಲ್, ಜಯಶ್ರೀ ಮತ್ತಿಮಡು, ಶರಣಬಸಪ್ಪ ವಡ್ಡನಕೇರಿ, ರಾಜೇಂದ್ರ ಯರನಾಳೆ, ಡಾ.ತೀರ್ಥಕುಮಾರ ಬೆಳಕೋಟಾ, ಶರಣು ಹೊನ್ನಗೆಜ್ಜೆ, ಶಿವರಾಜ ಧಟ್ಟಿ, ಶಿವರಾಜ ಕಾಳಗಿ ಇತರರಿದ್ದರು.
ಕಲಬುರಗಿ ತಾಲೂಕು ನಾವದಗಿಯಲ್ಲಿ ಶರಣ ಸಾಹಿತ್ಯ ಪರಿಷತ್ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕರಿಗೆ ಚಿನ್ಮಯಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಮರನಾಥ ಪಾಟೀಲ್, ಜಯಶ್ರೀ ಮತ್ತಿಮಡು, ಶರಣಬಸಪ್ಪ ವಡ್ಡನಕೇರಿ, ರಾಜೇಂದ್ರ ಯರನಾಳೆ, ಡಾ.ತೀರ್ಥಕುಮಾರ ಬೆಳಕೋಟಾ, ಶರಣು ಹೊನ್ನಗೆಜ್ಜೆ, ಶಿವರಾಜ ಧಟ್ಟಿ, ಶಿವರಾಜ ಕಾಳಗಿ ಇತರರಿದ್ದರು.
Published on
ಕಲಬುರಗಿ: ಆಡಳಿತ, ಕಲೆ, ಸಾಹಿತ್ಯ, ಶಿP್ಷÀಣ, ಸಮಾಜ ಸೇವೆ ಕ್ಷೇತ್ರಗಳಲ್ಲಿ ಪ್ರಚಾರ ಬಯಸದೆ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಮಹನೀಯರ ಸಾಧನೆ ಮರೆಯಾಗಬಾರದು. ಅವರನ್ನು ಗುರುತಿಸುವ ಕೆಲಸ ನಿರಂತರ ನಡೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಹೇಳಿದರು.
ಕಲಬುರಗಿ ತಾಲೂಕು ನಾವದಗಿ ದೇಶಿ ಕೇಂದ್ರೀಯ ವಸತಿ ಶಾಲೆ ಸಾಂಸ್ಕೃತಿಕ ಲೋಕದಲ್ಲಿ ಶರಣ ಸಾಹಿತ್ಯ ಪರಿಷತ್ತು ಹಾಗೂ ಕಲಬುರಗಿಯ ಹಂಶಿಕಾ ಶಿP್ಷÀಣ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಚಿನ್ಮಯe್ಞÁನಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಎಲ್ಲರೂ ದೊಡ್ಡ ಸಾಧನೆ ಮಾಡಬೇಕಿಲ್ಲ. ತಾವಿದ್ದ ನೆಲ, ಸಮಾಜ, ತಮ್ಮ ವೃತ್ತಿ, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ಅದು ಕೂಡ ದೊಡ್ಡ ಸಾಧನೆ ಎಂದರು.
ಬಿಜೆಪಿ ನಾಯಕಿ ಜಯಶ್ರೀ ಬಸವರಾಜ ಮತ್ತಿಮಡು ಮಾತನಾಡಿ, ಪ್ರಶಸ್ತಿಗಳಿಂದ ಜವಾಬ್ದಾರಿ ಹೆಚ್ಚಲಿದೆ. ಸಮಾಜದಲ್ಲಿ ಗುರುತಿಸಿಕೊಂಡ ಬಳಿಕ ನಮ್ಮ ನಡೆ, ನುಡಿ ಎಲ್ಲವೂ ತತ್ವನಿಷ್ಠವಾಗಿರಬೇಕು. ತಮ್ಮದೆಯಾದ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಪಾರದರ್ಶಕ ಸೇವೆ ಒದಗಿಸುವ ಕರ್ತವ್ಯ ನಿಷ್ಠೆ ಒಂದು ದೊಡ್ಡ ಸಾಧನೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಿದ್ದಲಿಂಗ ಕೋನೆಕ್, ಡಾ.ಕರುಣಾ ಜಮದರಖಾನಿ, ಡಾ. ಪ್ರೇಮಾ ಅಪಚಂದ, ಗಂಗಾಧರ ದೇಸಾಯಿ, ಮಲ್ಲಮ್ಮ ಕಾಳಗಿ,  ರಮೇಶ ಮುರುಡ, ಗುರುಬಾಯಿ ಬಿರಾದಾರ, ಭುವನೇಶ್ವರಿ ಧಟ್ಟಿ, ಮಂಜುಳಾ ಪಾಟೀಲ, ಸಾವಿತ್ರಿ ಚಿಟ್ಟೆ ಅವರಿಗೆ ಚಿನ್ಮಯe್ಞÁನಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶರಣ ಸಾಹಿತ್ಯ ಪರಿಷತ್ ಅಧ್ಯP್ಷÀ ಶರಣಬಸಪ್ಪ ವಡ್ಡನಕೇರಿ ರಚಿಸಿದ ಎಂಟು ಪುಸ್ತಕಗಳ ಲೋಕಾರ್ಪಣೆ ಮಾಡಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯರ್ಥಿಗಳನ್ನು ಸತ್ಕರಿಸಲಾಯಿತು. ವಸತಿ ಶಾಲೆ ಅಧ್ಯP್ಷÀ ರಾಜೇಂದ್ರ ಯರನಾಳೆ, ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ.ತೀರ್ಥಕುಮಾರ ಬೆಳಕೋಟಾ, ಹಂಶಿಕಾ ಶಿP್ಷÀಣ ಸಂಸ್ಥೆ ಅಧ್ಯP್ಷÀ ಶರಣು ಹೊನ್ನಗೆಜ್ಜೆ, ವೀಣಾ ಯರನಾಳೆ, ವೀಣಾ ರಾವೂರ, ಶಿವರಾಜ ಧಟ್ಟಿ, ಶಿವರಾಜ ಕಾಳಗಿ ಇತರರಿದ್ದರು.
"

ರಾಜ್ಯ ಮಟ್ಟದ ಪ್ರಶಸ್ತಿ ನೀಡುವಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿರಂತರ ಅನ್ಯಾಯ, ತಾರತಮ್ಯ ಮುಂದುವರಿಯುತ್ತಿದೆ. ಸರ್ಕಾರಕ್ಕೆ ಬೆನ್ನು ಬೀಳುವ ಬದಲಾಗಿ ನಮ್ಮವರ ಸಾಧನೆ ನಾವೆ ಗುರುತಿಸುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ ಕೈಗೊಂಡ ಕಾರ್ಯ ಸ್ಮರಣೀಯ. 

ಅಮರನಾಥ ಪಾಟೀಲ್,ಮಾಜಿ ಸದಸ್ಯ, ವಿಧಾನ ಪರಿಷತ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net