೨೦೨೫ರ ಫೆಬ್ರವರಿಯಲ್ಲಿ ಆರೋಪಿ ಆಂಜನೇಯ, ಅಪ್ರಾಪ್ತ ಬಾಲಕಿಗೆ ಜೀವಬೆದರಿಕೆ ಹಾಕಿ ಬಲವಂತವಾಗಿ ಅಪಹರಿಸಿದ್ದನು. ಬಳಿಕ ಬೆಂಗಳೂರಿನ ನಿವಾಸವೊಂದರಲ್ಲಿ ಕಾನೂನುಬಾಹಿರವಾಗಿ ಬಂಧನದಲ್ಲಿಟ್ಟು, ನಿರಂತರವಾಗಿ ಅತ್ಯಾಚಾರ ಎಸಗಿದ್ದನು. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಸಿಪಿಐ ಚಂದ್ರಶೇಖರ ತಿಗಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಎಲ್.ಚವ್ಹಾಣ್ ಪೋಕ್ಸೋ ಕಾಯ್ದೆಯಡಿ ೨೦ ರ‍್ಷ ಜೈಲು ಶಿಕ್ಷೆ, ೫೫ ಸಾವಿರ ರೂ. ದಂಡ ವಿಧಿಸಿದ್ದು, ನೊಂದ ಬಾಲಕಿಗೆ ಪ್ರಾಧಿಕಾರದಿಂದ ಐದು ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ರ‍್ಕಾರದ ಪರ ವಿಶೇಷ ರ‍್ಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ವಾದ ಮಂಡಿಸಿದ್ದರು.