ರAಗಭೂಮಿ ಜೀವಂತ ಸಂಸ್ಕೃತಿ

ಕಲಬುರಗಿ ಜಿಪಂ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಂಗಭೂಮಿ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ನಟಿ ಬಿ.ಜಯಶ್ರೀ ಮಾತನಾಡಿದರು. ಆರುಂಧತಿ ನಾಗ್ ಇತರರಿದ್ದರು.
ಕಲಬುರಗಿ ಜಿಪಂ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಂಗಭೂಮಿ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ನಟಿ ಬಿ.ಜಯಶ್ರೀ ಮಾತನಾಡಿದರು. ಆರುಂಧತಿ ನಾಗ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ನಟಿ ಬಿ.ಜಯಶ್ರೀ ಅನಿಸಿಕೆ
  • ಕನ್ನಡ ಕಂಪನಿ ನಾಟಕಗಳು: ಪ್ರಸ್ತುತಿ ಮತ್ತು ಪರಂಪರೆ ಸಂವಾದ
ಕಲಬುರಗಿ: ರಂಗಭೂಮಿ ಎಂಬುದು ಕೇವಲ ಒಂದು ವೇದಿಕೆಯಲ್ಲ, ಅದೊಂದು ಜೀವಂತ ಸಂಸ್ಕೃತಿ. ಕಂಪನಿ ನಾಟಕದ ಶಿಸ್ತು ಒಬ್ಬ ಕಲಾವಿದನನ್ನು ಮನುಷ್ಯನನ್ನಾಗಿ ಮಾಡುತ್ತದೆ ಎಂದು ಹಿರಿಯ ರಂಗಕರ್ಮಿ, ನಟಿ ಬಿ.ಜಯಶ್ರೀ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ಕಂಪನಿ ನಾಟಕ ಪ್ರಸ್ತುತಿ ಮತ್ತು ಪರಂಪರೆ ಕುರಿತ ರಂಗಭೂಮಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕನ್ನಡದ ಕಂಪನಿ ನಾಟಕಗಳ ಪ್ರಸಿದ್ಧ ಹಾಡುಗಳ ಪ್ರಸ್ತುತಿಯೊಂದಿಗೆ ಅದರ ಇತಿಹಾಸ ಹಾಗೂ ಹಾಡಿನ ಸುತ್ತಾ ನಡೆದ ಘಟನೆಗಳನ್ನು ಮೆಲುಕು ಹಾಕಿದ ಅವರು, ಹಳೆಯ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಕಲ್ಚರ್ ಹಾಗೂ ಅಗ್ರಿಕಲ್ಚರ್ ನಡುವಿನ ಸಂಬAಧ ಮನ ಮುಟ್ಟುವಂತೆ ವಿವರಿಸಿದರು.
ಗುಬ್ಬಿ ವೀರಣ್ಣನವರ ಕಾಲದ ರಂಗ ಸಜ್ಜಿಕೆ, ಶಿಸ್ತು ಮತ್ತು ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದ ಪರಿ ಹಾಗೂ ಹಾಡುಗಳನ್ನು ಕಟ್ಟುತ್ತಿದ್ದ ರೀತಿಯ ಕುರಿತು ವಿವರಿಸಿದ ಅವರು, ಕಂಪನಿ ನಾಟಕಗಳ ಪರಂಪರೆ ಮುಂದುವರಿಕೆ ಭಾಗವಾಗಿ ವೃತ್ತಿ ರಂಗಭೂಮಿಯ ಹಾಡುಗಾರಿಕೆ ಮತ್ತು ಅಭಿನಯದ ಶೈಲಿ ಇಂದಿನ ತಲೆಮಾರಿಗೆ ತಮ್ಮ ಸ್ಪಂದನ ತಂಡದ ಮೂಲಕ ಜೀವಂತವಾಗಿಡಲಾಗಿದೆ ಎಂದರು.
ಜಯಶ್ರೀ ಅವರ ಕಂಠಸಿರಿಯಲ್ಲಿ ಸದರಮೆ, ಕುರುಕ್ಷೇತ್ರ ಸೇರಿದಂತೆ ಅನೇಕ ನಾಟಕಗಳ ಹಾಡುಗಳು ಸಂವಾದದಲ್ಲಿ ಜನಮನ ಸೆಳೆದವು. ರಂಗಶAಕರದ ಅರುಂಧತಿ ನಾಗ್, ಸುರೇಂದ್ರನಾಥ, ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಇತರರು ಪಾಲ್ಗೊಂಡಿದ್ದರು.
"

ಕಂಪನಿ ನಾಟಕಗಳ ಪ್ರಸ್ತುತಿ ಒಂದು ವಿಶೇಷ ಕಲೆ. ಅಲ್ಲಿ ಸಂಗೀತ, ನೃತ್ಯ ಮತ್ತು ಮಾತುಗಳ ಸಮ್ಮಿಲನವಿರುತ್ತದೆ. ಹಾಡುಗಾರಿಕೆಯ ವೈಭವ ಕಂಪನಿ ನಾಟಕಗಳಲ್ಲಿ ಕಾಣಬಹುದಾಗಿದೆ. ಹಾಡುಗಳು ಕೇವಲ ಬಿಡುವಿನ ಸಂದರ್ಭವಲ್ಲ, ಅದು ಕಥೆಯನ್ನು ಮುನ್ನಡೆಸುವ ಶಕ್ತಿ ಹೊಂದಿರುತ್ತದೆ.

ಬಿ.ಜಯಶ್ರೀ,ಹಿರಿಯ ನಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net