ಬೆಂಗಳೂರಿನ ಶಿವಾನಂದ ವೃತ್ರದ ಗಾಂಧಿ ಭವನದಲ್ಲಿ ಮಾ.22ರಂದು ಬೆಳಿಗೆ 11-30ಕ್ಕೆ ನಡೆಯುವ ಸಮಾರಂಭದಲ್ಲಿ ತಿಮ್ಮಾಪುರದ ಪ್ರವಚನಯೋಗಿ ಪೂಜ್ಯಶ್ರೀ ಮಹಾಂತ ಮಹಾಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದು, ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಮಾನ್ಯ ಶ್ರೀ ಬಿ. ಆರ್. ಪಾಟೀಲರು ಉದ್ಘಾಟಿಸಲಿದ್ದಾರೆ. ವೂಡೇ .ಪಿ .ಕೃಷ್ಣ ರವೀಂದ್ರಭಟ್ಟ, ಜಯಶ್ರೀ ವೀರಣ್ಣ ದಂಡೆ, ರಘುನಾಥ ಚ.ಹ. ರೇವಣ್ಣ ಭಾಗವತರು, ರವೀಂದ್ರನಾಥ ಸಿರಿವರ, ವೀರಶೆಟ್ಟಿ, ಗಾರಂಪಳ್ಳಿ, ಆನಂದ ಸಿದ್ದಾಮಣಿ, ರುದ್ರೇಶ್ ಅದರಂಗಿ ಮುಂತಾದವರು ಭಾಗಹವಹಿಸಲಿದ್ದಾರೆಂದು ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ತಿಳಿಸಿದ್ದಾರೆ.