ಪ್ರಶಂಸಾ ಪ್ರಮಾಣಪತ್ರ ವಿತರಣೆ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಚಿಂಚೋಳಿ-ಹೆಚ್ ಗ್ರಾಮದ ಲುಂಬಿನಿ ಸ್ವಯಂ ಚಾಲಿತ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ರೇಷ್ಮೆ ಮೇಳಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಚಾಲನೆ ನೀಡಿದರು. ಜಿಪಂ ಸಿಇಒ ಭಂವರ್‌ಸಿAಗ್ ಮೀನಾ ಇತರರಿದ್ದರು.
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಚಿಂಚೋಳಿ-ಹೆಚ್ ಗ್ರಾಮದ ಲುಂಬಿನಿ ಸ್ವಯಂ ಚಾಲಿತ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ರೇಷ್ಮೆ ಮೇಳಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಚಾಲನೆ ನೀಡಿದರು. ಜಿಪಂ ಸಿಇಒ ಭಂವರ್‌ಸಿAಗ್ ಮೀನಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೇಷ್ಮೆ ಮೇಳಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಚಾಲನೆ
ಕಲಬುರಗಿ: ಕೇಂದ್ರ ರೇಷ್ಮೆ ಮಂಡಳಿ, ರಾಜ್ಯ ರೇಷ್ಮೆ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಗುಣಮಟ್ಟದ ರೇಷ್ಮೆಗೂಡಿನಿಂದ ರೇಷ್ಮೆ ಉತ್ಪಾದನೆ ಉz್ದೆÃಶದೊಂದಿಗೆ ಕಾಳಗಿ ತಾಲೂಕಿನ ಚಿಂಚೋಳಿ-ಹೆಚ್ ಗ್ರಾಮದ ಲುಂಬಿನಿ ಸ್ವಯಂ ಚಾಲಿತ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರ ರೇಷ್ಮೆ ಮೇಳಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿAಗ್ ಮೀನಾ ರೇಷ್ಮೆ ಹಾಗೂ ತೋಟಗಾರಿಕೆ ವಸ್ತು ಪ್ರದರ್ಶನದ ಮಳಿಗೆ ಉದ್ಘಾಟಿಸಿ ಮಾತನಾಡಿದರು. ಉತ್ತಮ ರೇಷ್ಮೆ ಗೂಡು ಬೆಳೆದ ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಪ್ರಗತಿಪರ ರೇಷ್ಮೆ ಬೆಳೆಗಾರರಿಗೆ ಪ್ರಶಂಸಾ ಪ್ರಮಾಣಪತ್ರ ವಿತರಿಸಿ ಸನ್ಮಾಸಿದರು. ನಂತರ ಸ್ವಯಂ ನೂಲು ಬಿಚ್ಚಾಣಿಕೆ ಘಟಕದ ಕಾರ್ಯಚಟುವಟಿಕೆ ವೀಕ್ಷಿಸಿದರು.
ಧಾರವಾಡ ಡಿಸಿಎಸ್‌ಬಿ-ಸಿಎಸ್‌ಟಿಆರ್‌ಐ ವಿಜ್ಞಾನಿ ಡಾ.ಎಸ್.ಎಂ.ಹುಕ್ಕೇರಿ, ಕಲಬುರಗಿ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ರವಿಗೌಡ, ಆರ್‌ವಿಎಸ್ ಟ್ರೇಡಿಂಗ್ ಕಂಪನಿಯ ಸಿಇಒ ರೇಷ್ಮಾ ಎ.ಕೆ., ತೋಟಗಾರಿಕೆ ಜಂಟಿ ನಿರ್ದೇಶಕ ಸಂತೋಷ ಇನಾಮದಾರ, ಬೀದರ್ ಜಿಲ್ಲಾ ಪಂಚಾಯಿತಿ ರೇಷ್ಮೆ ಉಪನಿರ್ದೇಶಕ ರಂಗನಾಥ, ವಿಜ್ಞಾನಿ ಡಾ.ಶ್ರೀನಿವಾಸ್.ಕೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪಾ ಕ್ಯಾತನಾಳ, ಕಲಬುರಗಿ ಜಿಪಂ ಮುಖ್ಯ ಲೆಕ್ಕಾಧಿಕಾರಿ ವಿಕಾಸ ಸಜ್ಜನ, ಕಲಬುರಗಿ ವಿಭಾಗ ರೇಷ್ಮೆ ಸಹಾಯಕ ನಿರ್ದೇಶಕ ಅನಿಲ ವಾಡಿ, ೫೦೦ ಜನ ರೇಷ್ಮೆ ಬೆಳೆಗಾರರು, ಖಾಸಗಿ ಚಾಕಿ ಸಾಕಾಣಿಕಾ ಕೇಂದ್ರದ ಮಾಲೀಕರು, ರೀಲಿಂಗ್ ತರಬೇತಿ ಪಡೆದ ನವ ಉದ್ಯಮಿಗಳು ಪಾಲ್ಗೊಂಡಿದ್ದರು.
ಕಲಬುರಗಿ ರೇಷ್ಮೆ ಉಪನಿರ್ದೇಶಕ ಎಸ್.ಪ್ರಕಾಶ ಬಾಬು ಇಲಾಖಾ ಯೋಜನೆ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ವಿಜ್ಞಾನಿ ಮಂಜುನಾಥ ಆರ್.ಎನ್. ಸ್ವಾಗತಿಸಿದರು. ಕಲಬುರಗಿ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ವಿಸ್ತರಣಾಧಿಕಾರಿ ವೀಣಾ ಹಾಗೂ ಅಣವೀರಪ್ಪ ನಿರೂಪಿಸಿದರು. ಮಹೇಶ್ವರಿ ಸಜ್ಜನ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net