ಪ್ರಖರ ಬಿಸಿಲಿನ ಕಲ್ಯಾಣನಾಡು ತತ್ತರ

rising sun heat
rising sun heat
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟಿçÃಯ ವಿಪತ್ತು ಪಟ್ಟಿಗೆ ಬಿಸಿಲು ಸೇರ್ಪಡೆಯಾಗಲಿ
  • ಮುಂಜಾಗ್ರತೆಗೆ ಮುಂದಾಗಲಿ ಜಿಲ್ಲಾಡಳಿತ
ಕಲಬುರಗಿ: ಕಲ್ಯಾಣದ ತೊಗರಿ ಕಣಜ ಸೂರ್ಯನ ಪ್ರಖರ ಝಳಕ್ಕೆ ತತ್ತರಿಸಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಗಣನೀಯವಾಗಿ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಇನ್ನೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಸಾರ್ವಜನಿಕರ ಮೇಲೆ ಈ ಹೀಟ್ ವೇವ್ಸ್ (ಬಿಸಿಗಾಳಿ) ದುಷ್ಪರಿಣಾಮ ಬೀರದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.
ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಮತ್ತು ಬೆಳಗಾವಿ ವಿಭಾಗದ ವಿಜಯಪುರ ಜಿಲ್ಲೆಗಳನ್ನು ಹೀಟ್‌ವೇವ್ಸ್ ಪರಿಣಾಮ ಬೀರುವ ಜಿಲ್ಲೆಗಳು ಎಂದು ಘೋಷಿಸಲು, ಅಗತ್ಯ ಮುಂಜಾಗ್ರತೆಗಾಗಿ ಎಸ್‌ಡಿಆರ್‌ಎಫ್ ಅಡಿ ಪ್ರತ್ಯೇಕ ಅನುದಾನ ಒದಗಿಸಲು ಸರ್ಕಾರದ ಮೇಲೆ ಒತ್ತಡ ತರಬೇಕಿದೆ.
ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಅನಗತ್ಯ ಯಾರೂ ಹೊರಗಡೆ ತಿರುಗಾಡಬಾರದು ಎಂಬುದು ಸೇರಿ ಏನು ಮಾಡಬೇಕು, ಏನು ಮಾಡಬಾರದು ಎಂಬುದಕ್ಕೆ ಸಂಬAಧಿಸಿದAತೆ ಪ್ರೆಸ್‌ನೋಟ್ ನೀಡಿ ಜಿಲ್ಲಾಡಳಿತ ಕೈತೊಳೆದುಕೊಳ್ಳುತ್ತಿದೆ. ಪ್ರಖರ ಬಿಸಿಲಿನ ಪರಿಣಾಮ ಸರ್ಕಾರಿ ಕಚೇರಿಗಳ ಅವಧಿ ಬೆಳಗ್ಗೆ ೮ರಿಂದ ಮಧ್ಯಾಹ್ನ ೧.೩೦ರವರೆಗೆ ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರಿ ನೌಕರರು, ಬ್ಯಾಂಕ್ ಸಿಬ್ಬಂದಿಗೆ ಈ ಸೌಲಭ್ಯವಿಲ್ಲ.
ದಾಖಲೆ ತಾಪಮಾನ: ಮಾರ್ಚ್ ೨ನೇ ವಾರ ಪ್ರಾರಂಭದಲ್ಲೇ ಬಿಸಿಲು ೪೦ ಡಿಗ್ರಿ ಸೆಲ್ಸಿಯಸ್ ತಲುಪಿದೆ. ನಿರಂತರ ಮೂರು ದಿನ ೪೫ ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ಇದ್ದರೆ ಅದನ್ನು ಹೀಟ್‌ವೇವ್ಸ್ ಪ್ರದೇಶ ಎಂದು ಪರಿಗಣಿಸಲಾಗುತ್ತಿದೆ. ೨೦೨೫ನೇ ಸಾಲಿನಲ್ಲಿ ಕಲಬುರಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನಿರಂತರ ಮೂರು ದಿನ ೪೦ ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಳೆದ ೨-೩ ವರ್ಷಗಳ ಹಿಂದೆ ಬಿಸಿಗಾಳಿಗೆ ಒಬ್ಬ ಮೃತಪಟ್ಟಿದ್ದ. ಕಳೆದ ವರ್ಷ ಮಾರ್ಚ್ನಲ್ಲಿ ಜಿಲ್ಲೆಯಲ್ಲಿ ೮೮ ಜನರ ಮೇಲೆ ಬಿಸಿಗಾಳಿ ಪರಿಣಾಮ ಬೀರಿದರೆ, ಏಪ್ರಿಲ್‌ನಲ್ಲಿ ೧೧೬ ಜನ, ಮೇನಲ್ಲಿ ೧೧೭೫ ಜನರ ಮೇಲೆ ಪರಿಣಾಮ ಬೀರಿದೆ. ಕಲಬುರಗಿ ನಗರ ವ್ಯಾಪ್ತಿಯಲ್ಲಿ ಮಾರ್ಚ್ನಲ್ಲಿ ೧೬ ಜನ, ಏಪ್ರಿಲ್ ೨೦, ಮೇ ೨೪ ಜನರ ಮೇಲೆ ಪರಿಣಾಮ ಉಂಟು ಮಾಡಿದೆ. ಮಾರ್ಚ್ನಲ್ಲಿ ಆಳಂದ ತಾಲೂಕಿನ ೧೪ ಜನ, ಏಪ್ರಿಲ್‌ನಲ್ಲಿ ೧೬ ಮತ್ತು ಮೇನಲ್ಲಿ ೨೯ ಜನರ ಮೇಲೆ ಪರಿಣಾಮ ಬೀರಿದೆ. ಚಿತ್ತಾಪುರ ಮಾರ್ಚ್ನಲ್ಲಿ ೧೩, ಏಪ್ರಿಲ್‌ನಲ್ಲಿ ೧೭ ಮತ್ತು ಮೇನಲ್ಲಿ ೨೦ ಜನರ ಮೇಲೆ ಪರಿಣಾಮ ಬೀರಿದೆ. ೨೦೧೮-೨೦೨೨ರ ಅವಧಿಯಲ್ಲಿ ದೇಶದಲ್ಲಿ ೧೭೯೬ ಜನ ಬಿಸಿಲಿನ ತಾಪಮಾನಕ್ಕೆ ತತ್ತರಿಸಿ ಮೃತಪಟ್ಟಿದ್ದಾರೆ.
ಪ್ರಖರ ಬಿಸಿಲಿಗೆ ಹತ್ತಾರು ಸಮಸ್ಯೆಗಳು ಕಾಡುತ್ತವೆ. ಡಿಹೈಡ್ರೇಷನ್, ಬೆವರುಸಾಲಿ, ತಲೆನೋವು, ಕೃಷಿ ಹಾನಿ, ಅರಣ್ಯಕ್ಕೆ ಬೆಂಕಿ ಹತ್ತಿಕೊಳ್ಳುವುದು ಸಾಮಾನ್ಯವಾಗಲಿದೆ. ಗರ್ಭಿಣಿಯರು, ಹಿರಿಯ ನಾಗರಿಕರು, ಮಕ್ಕಳು, ಹೊರಗಡೆ ಕೆಲಸ ಮಾಡುವವರಿಗೆ ಹೆಚ್ಚು ಪರಿಣಾಮ ಬೀರಲಿದೆ.
ರಾಷ್ಟಿçÃಯ ಆಪತ್ತು ಪಟ್ಟಿಗೆ ಸೇರಿಸಿ: ಬಿಸಿಲು, ಸಿಡಿಲು ಇವೆರಡನ್ನೂ ರಾಷ್ಟಿçÃಯ ಆಪತ್ತು ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು, ಎಸ್‌ಡಿಆರ್‌ಎಫ್ ನಿಧಿಯಲ್ಲಿ ಶೇ.೧೦ರಷ್ಟು ಅನುದಾನ ಪ್ರತ್ಯೇಕ ಮೀಸಲಿಡಲುವಂತೆ ಕೇಂದ್ರ ೧೬ನೇ ಹಣಕಾಸು ಆಯೋಗ ಶಿಫಾರಸು ಮಾಡಿದೆ.
ಬಿಸಿಲು ಹೆಚ್ಚಾದಂತೆ ಪ್ರಮುಖ ರಸ್ತೆಗಳಿಗೆ ನೀರು ಸಿಂಪರಣೆ ಮಾಡಬೇಕು, ನಗರದ ಪ್ರಮುಖ ವೃತ್ತಗಳಲ್ಲಿ ನೆರಳಿನ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕು, ಸಂಚಾರ ಹೆಚ್ಚಿರುವ ಕಡೆಗಳಲ್ಲೂ ಈ ವ್ಯವಸ್ಥೆ ಅಗತ್ಯ. ಈ ಅವಧಿಯಲ್ಲಿ ಮಧ್ಯಾಹ್ನ ಸಿಗ್ನಲ್‌ಗಳನ್ನು ಸ್ಥಗಿತಗೊಳಿಸಬೇಕು, ಸಾಧ್ಯವಿರುವ ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ರಸ್ತೆಯ ಎರಡೂ ಬದಿ ಬಿಳಿ ಪೇಂಟ್ ಹಚ್ಚಬೇಕು. ಈ ಮೂಲಕ ಪಾದಚಾರಿಗಳು ನಡೆದುಕೊಂಡು ಹೋಗಲು ಸಾಧ್ಯವಾಗಲಿದೆ. ಸಧ್ಯ ಈ ಯಾವ ವ್ಯವಸ್ಥೆಯೂ ಕಾಣುತ್ತಿಲ್ಲ. ಕೈಮೀರಿ ಹೋಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಬಿಸಿಲಿನ ಪರಿಣಾಮದಿಂದ ಸಾರ್ವಜನಿಕರ ರಕ್ಷಣೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.
"

ಅಗತ್ಯ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎರಡು ಬೆಡ್, ತಾಲೂಕು ಆಸ್ಪತ್ರೆಗಳಲ್ಲಿ ೫ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ೧೦ ಬೆಡ್ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಗತ್ಯಬಿದ್ದರೆ ಈ ಸಂಖ್ಯೆ ಇನಷ್ಟು ಹೆಚ್ಚಿಸಲು ಯೋಜಿಸಲಾಗುತ್ತಿದೆ.

| ಡಾ.ಶರಣಬಸಪ್ಪ ಕ್ಯಾತನಾಳಜಿಲ್ಲಾ ಆರೋಗ್ಯಾಧಿಕಾರಿಕಲ್ಯಾಣ ಕರ್ನಾಟಕದ

ಜಿಲ್ಲೆಗಳಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿದೆ. ಕಳೆದ ಬಾರಿಗಿಂತಲೂ ಅಧಿಕ ತಾಪಮಾನ ಇರಬಹುದೆಂದು ಹೇಳಲಾಗುತ್ತಿದೆ. ಕೆಲ ಮುಂಜಾಗ್ರತಾ ಕ್ರಮಕ್ಕಾಗಿ ಬೇಕಾಗುವ ಅನುದಾನವನ್ನು ರಾಜ್ಯ ಸರ್ಕಾರದ ಎಸ್‌ಡಿಆರ್‌ಎಫ್ ಅಡಿ ಪಡೆದುಕೊಳ್ಳಬೇಕು. ಈ ಕುರಿತು ಈಗಾಗಲೇ ಆಡಳಿತದ ಗಮನಕ್ಕೂ ತರಲಾಗಿದೆ.

| ಸಂಗೀತ ಕಟ್ಟಿಮನಿ,ಆರ್ಥಿಕ ತಜ್ಞೆ, ನೀತಿ ಆಯೋಗ ಸದಸ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net