ಕಲಬುರಗಿ: ಮೋಟರ್ ಸೈಕಲ್ನಿಂದ ಜೋರು ಶಬ್ಧ ಮಾಡುತ್ತ ಜೀವ ಹಾನಿ ಆಗುವ ರೀತಿ ವೇಗವಾಗಿ ಚಲಾಯಿಸುತ್ತಿದ್ದ ಚಾಲಕನ್ನು ಬಂಧಿಸಿ, ಆತನ ವಿರುದ್ಧ ಎಂಬಿ.ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರವಿಣ ರಾಠೋಡ್ ಬಂಧಿತ ಯುವಕ. ರಿಂಗ್ ರಸ್ತೆಯಲ್ಲಿ ಜೋರು ಶಬ್ಧದೊಂದಿಗೆ ವೇಗವಾಗಿ ಬೈಕ್ ಚಲಾಯಿಸುತ್ತಿದ್ದು, ಪೊಲೀಸರು ಪ್ರಶ್ನಿಸಿದರೂ ಉತ್ತರಿಸದೇ ಚಲಾಯಿಸಿದ್ದ. ಆದ್ದರಿಂದ ಆತನನ್ನು ತಡೆದು, ಬೈಕ್ ಜಪ್ತಿ ಮಾಡಿ, ಕೇಸ್ ದಾಖಲಿಸಲಾಗಿದೆ.