ತಾಯಿ ಹೆಸರಲ್ಲಿ ಸಸಿ ನೆಟ್ಟು ರಕ್ಷಿಸಿ

environment day
environment day
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಮತ್ತಿಮಡು ಸಲಹೆ
  • ಡೊಂಗರಗಾಂವದಲ್ಲಿ ಬಿಜೆಪಿ ಪರಿಸರ ದಿನ
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ದೇಶದಲ್ಲಿ ಹಸುರೀಕರಣಕ್ಕೆ ಆದ್ಯತೆ ನೀಡಲು ದೇಶಾದ್ಯಂತ ಬಿಜೆಪಿಯಿಂದ ಅಭಿಯಾನ ನಡೆಸುತ್ತಿದ್ದು, ತಾಯಿ ಹೆಸರಿನಲ್ಲಿ ಒಂದು ಸಸಿ ನೆಟ್ಟು, ರಸಬೇಕು ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಡೊಂಗರಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಪರಿಸರ ದಿನದ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಉಸಿರಾಡುವ ಗಾಳಿ ನೀಡುವ ಹಸಿರಿನ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ಶಾಲೆ ಆವರಣದಲ್ಲಿ 100ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಪ್ರಮುಖರಾದ ನಾಗರಾಜ ಮೂಲಗೆ, ಬಸವರಾಜ ವಡ್ಡನಕೇರಿ, ವೀರು ಪಾಟೀಲ್​ ರಾಯ್ಕೋಡ, ಶರಣಗೌಡ ಪಾಟೀಲ್​ ಹರಕಂಚಿ, ಮಹೇಶ ಪಾಟೀಲ್​, ಶಾಂತು ಮೂಲಗೆ, ಚೇತನ, ಅಮರ ಪಾಟೀಲ್​, ಅಜರ್​ ಪಟೇಲ್​, ಭಾಗ್ಯವಂತ ಕವನಳ್ಳಿ, ಮಲ್ಲಿಕಾರ್ಜುನ ಮರತೂರಕರ್​, ಶಿವಾ ಟೆಂಗಳಿ, ವೀರೇಶ ಪಾಟೀಲ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net