

ಪ್ರಮುಖ ಮುಖ್ಯಾಂಶಗಳು
ಕಲಬುರಗಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶನಿವಾರ, ಭಾನುವಾರವೂ ತರಗತಿ ನಡೆಸಲಾಗಿದೆ. ಹೆಚ್ಚುವರಿ ಪಾಠ, ಮೌಲ್ಯಮಾಪನ ಹೀಗೆ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಫಲಿತಾಂಶ ಮತ್ತಷ್ಟು ಸುಧಾರಿಸುವ ವಿಶ್ವಾಸವಿದೆ.
| ಶಂಕ್ರಮ್ಮ ಢವಳಗಿಡಿಡಿಪಿಐ ಕಲಬುರಗಿ
ಪ್ರಾಥಮಿಕ ಹಂತದಲ್ಲೇ ಮಕ್ಕಳನ್ನು ಸುಧಾರಿಸುವ ಕೆಲಸ ಆಗಬೇಕು. ಮೊದಲು ಬುನಾದಿ ಗಟ್ಟಿ ಮಾಡಬೇಕು. ಗ್ರಾಮೀಣ ಮಕ್ಕಳಿಗೆ ಒತ್ತು ನೀಡಬೇಕು, ಶಿಕ್ಷಕರಲ್ಲಿ ಬದ್ಧತೆ ಬರಬೇಕು. ಮಕ್ಕಳ ಜತೆ ಶಿಕ್ಷಕರ ಮೌಲ್ಯಮಾಪನ ನಡೆಯಬೇಕು. ಕೆಕೆಆರ್‌ಡಿಬಿ ಶಿಕ್ಷಣಕ್ಕೆ ಸಾಕಷ್ಟು ಅನುದಾನ ನೀಡಿದೆ. ಹೀಗಾಗಿ ಫಲಿತಾಂಶದಲ್ಲಿ ಸುಧಾರಣೆ ಕಾಣಬೇಕಿದೆ.
| ಶರಣು ಪಪ್ಪಾಅಧ್ಯಕ್ಷ, ಕೆಕೆಸಿಸಿಐ