ರೈತರು ಅಳಲು ಆಲಿಸಿದ ಅಧಿಕಾರಿಗಳು

ಅತಿವೃಷ್ಠಿ ಹಾನಿ ವೀಕ್ಷಣೆ ಮಾಡಿದ ಕೇಂದ್ರ ಅಧ್ಯಯನ ತಂಡದೊoದಿಗೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಡಿಸಿ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಿದರು. ಜಿಪಂ ಸಿಇಒ ಭಂವರ್‌ಸಿoಗ್ ಮೀನಾ, ಎಡಿಸಿ ರಾಯಪ್ಪ ಹುಣಸಗಿ ಇತರರಿದ್ದರು.
ಅತಿವೃಷ್ಠಿ ಹಾನಿ ವೀಕ್ಷಣೆ ಮಾಡಿದ ಕೇಂದ್ರ ಅಧ್ಯಯನ ತಂಡದೊoದಿಗೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಡಿಸಿ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಿದರು. ಜಿಪಂ ಸಿಇಒ ಭಂವರ್‌ಸಿoಗ್ ಮೀನಾ, ಎಡಿಸಿ ರಾಯಪ್ಪ ಹುಣಸಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅತಿವೃಷ್ಟಿ ಹಾನಿ ವೀಕ್ಷಿಸಿದ ಕೇಂದ್ರ ಅಧ್ಯಯನ ತಂಡ
  • ಕಲಬುರಗಿ ಜಿಲ್ಲೆಯ ವಿವಿಧೆಡೆ ಮಿಂಚಿನ ಸಂಚಾರ
ಕಲಬುರಗಿ: ಕಳೆದ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಭೀಕರ ಮಳೆಯಿಂದಾಗಿ ಜಿ¯್ಲೆಯಲ್ಲಿ ಆಗಿರುವ ಬೆಳೆ, ರಸ್ತೆ ಇತರ ಹಾನಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ತಂಡ ಮಂಗಳವಾರ ಕಮಲಾಪುರ ತಾಲೂಕಿನ ಕಿಣ್ಣಿಸಡಕ್, ಡೊಂಗರಗಾAವ್, ಭೀಮನಾಳ, ಕಮಲಾಪುರ ಪ್ರದೇಶದಲ್ಲಿ ಸ್ಥಿತಿಗತಿಯ ಅವಲೋಕನ ನಡೆಸಿತು.
ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಹೈದರಾಬಾದ್‌ನ ಎಣ್ಣೆ ಬೀಜ ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ.ಪೊನ್ನುಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ಅಧೀನ ಕಾರ್ಯದರ್ಶಿ ಜಯಶ್ರೀ ಕಕ್ಕರ್ ಅವರು ಬೆಳೆ ಜತೆಗೆ ಮೂಲಸೌಕರ್ಯ ಹಾನಿ ವೀಕ್ಷಿಸಿ ರೈತರ ಅಳಲು ಆಲಿಸಿದರು.
ಡೊಂಗರಗಾAವ್ ಗ್ರಾಮದ ಸರ್ವೇ ನಂ.20/3ರ ರೈತ ಅಭಿಷೇಕ ಹೊಲಕ್ಕೆ ತೆರಳಿ ಸುಮಾರು 4.32 ಎಕರೆ ತೊಗರಿ ಬೆಳೆ ನಷ್ಟಕ್ಕೀಡಾಗಿರುವುದನ್ನು ವೀಕ್ಷಿಸಿದರು. ಎಕರೆಗೆ 30 ಸಾವಿರ ರೂ. ಖರ್ಚು ಮಾಡಿ ತೊಗರಿ ಬೆಳೆದಿದ್ದು, ವಿಪರೀತ ಮಳೆಯಿಂದ ಎಲ್ಲವೂ ಹಾಳಾಗಿದೆ ಎಂದು ಕೃಷಿಕ ಗೋಳು ತೋಡಿಕೊಂಡ.
ಜಿ¯್ಲÁಧಿಕಾರಿ ಬಿ.ಫೌಜಿಯಾ ತರನ್ನುಮï ಮಾತನಾಡಿ, ಜಿ¯್ಲÉಯಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿದ್ದರಿಂದ ಅಪಾರ ಪ್ರಮಾಣದ ಬೆಳೆ ಮಾತ್ರವಲ್ಲದೆ ಶಾಲೆ, ಆರೋಗ್ಯ ಕೇಂದ್ರ, ಅಂಗನವಾಡಿ, ರಸ್ತೆ, ಸೇತುವೆಯಂತಹ ಮೂಲಸೌಕರ್ಯಗಳು ಸಹ ಹಾನಿಗೊಳಗಾಗಿವೆ. ಈಗಾಗಲೇ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ಒದಗಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯ ಸರ್ಕಾರದಿಂದ ಘೋಷಿಸಿದ್ದ ಹೆಚ್ಚುವರಿ ಪರಿಹಾರ ಸಹ ಪಾವತಿಸಲಾಗಿದೆ ಎಂದು ತಂಡದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಕಮಲಾಪುರ ಗ್ರಾಮದ ಸರ್ವೇ ನಂ.323ರಲ್ಲಿ ಮಹಾದೇವಪ್ಪ ಅವರ 6.19 ಎಕರೆಯಲ್ಲಿ ಬೆಳೆದಿದ್ದ ತೊಗರಿ ಹಾನಿ ಆಗಿರುವುದನ್ನು ತಂಡ ವೀಕ್ಷಿಸಿತು. ರೈತ ಪ್ರಶಾಂತ ಮಾತನಾಡಿ, ಮೂರಕ್ಕಿಂತ ಹೆಚ್ಚು ಎಕರೆ ಬೆಳೆ ಮಳೆಯಿಂದ ಹಾಳಾಗಿದೆ. ಎಕರೆಗೆ 25-30 ಸಾವಿರ ರೂ. ಖರ್ಚು ಮಾಡಿದ್ದು, ಮಳೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ. ನಂತರ ಕುಸಬೆ ಬೆಳೆದಿದ್ದು, ವ್ಯಾಪಕ ಮಳೆಯಿಂದ ಇದರ ಇಳುವರಿಯೂ ಬರುವುದು ಅನುಮಾನ ಎಂದು ತಂಡದ ಗಮನಕ್ಕೆ ತಂದರು.
ಜಿ¯್ಲÁ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್‌ಸಿAಗ್ ಮೀನಾ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲï, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ್, ತಹಸೀಲ್ದಾರ್ ಮೊಹಮ್ಮದ್ ಮೊಹಸೀನ್, ಸಹಾಯಕ ಕೃಷಿ ನಿರ್ದೇಶಕ ಡಾ.ಅರುಣಕುಮಾರ ಮೂಲಿಮನಿ ಇದ್ದರು. ಇದಕ್ಕೂ ಮುನ್ನ ತಂಡವು ಕಿಣ್ಣಿಸಡಕ್-ಡೋರ ಜಂಬಗಾ ನಡುವಿನ ಸೇತುವೆ, ಭೀಮನಾಳ ಗ್ರಾಮದ ರಸ್ತೆ ಹಾನಿ ವೀP್ಷÀಣೆ ಮಾಡಿತು.
"

ಕಮಲಾಪುರ ತಾಲೂಕಿನಲ್ಲಿ 7,892 ಹೆಕ್ಟೇರ್ ತೊಗರಿ ಬಿತ್ತಿದ್ದು, ಇದರಲ್ಲಿ ಶೇ.80 ಬೆಳೆ ಹಾನಿಯಾಗಿದೆ. ಮಣ್ಣಿನಲ್ಲಿ ಇನ್ನೂ ತೇವಾಂಶ ಇದ್ದು, ಎರಡನೇ ಬೆಳೆ ಬೆಳೆಯುವಂತಿಲ್ಲ. ಹೀಗಾಗಿ ರೈತರು ತೀವ್ರ ಕೆಟ್ಟ ಸ್ಥಿತಿಯಲ್ಲಿದ್ದಾರೆ.

| ಸಮದ್ ಪಟೇಲ್ಜಂಟಿ ಕೃಷಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net