ಹಿರಿಯ ಪತ್ರಕರ್ತ ಶಿವರಾಯ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಅವಂಟಿ, ಸಂಜೀವ ರೆಡ್ಡಿ, ನಾಗನಾಥ ಯಾದಗಿರಿ ಮಾತನಾಡಿದರು. ಪ್ರಾಂತ ಪ್ರಚಾರ ಪ್ರಮುಖ ಕೃಷ್ಣಾ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್, ಮಹಾದೇವಯ್ಯ ಕರದಳ್ಳಿ, ಭರತ ಖಮಿತಕರ್ ಇತರರಿದ್ದರು. ಮುರಳಿ ಪೂಜಾರ ವೈಯಕ್ತಿಕ ಗೀತೆ ಹಾಡಿದರು.