ನವೋದ್ಯಮ ಸ್ಥಾಪನೆಗೆ ಚಿಂತನೆ ನಡೆಸಿ

ಕಲಬುರಗಿ ಶರಣಬಸವ ವಿವಿ ನೂತನ ಕುಲಸಚಿವೆ ಡಾ.ಲಕ್ಷಿö್ಮÃ ಪಾಟೀಲ್ ಮಾಕಾ, ಡಾ.ಕಿರಣ್ ಮಾಕಾ ಅವರನ್ನು ವಿಶ್ವವಿದ್ಯಾಲಂiÀವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಗುರುವಾರ ಸತ್ಕರಿಸಲಾಯಿತು. ಬಸವರಾಜ ದೇಶಮುಖ, ಪ್ರೊ.ವಿ.ಡಿ.ಮೈತ್ರಿ, ಪ್ರೊ.ಅನಿಲಕುಮಾರ ಬಿಡವೆ ಇತರರಿದ್ದರು.
ಕಲಬುರಗಿ ಶರಣಬಸವ ವಿವಿ ನೂತನ ಕುಲಸಚಿವೆ ಡಾ.ಲಕ್ಷಿö್ಮÃ ಪಾಟೀಲ್ ಮಾಕಾ, ಡಾ.ಕಿರಣ್ ಮಾಕಾ ಅವರನ್ನು ವಿಶ್ವವಿದ್ಯಾಲಂiÀವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಗುರುವಾರ ಸತ್ಕರಿಸಲಾಯಿತು. ಬಸವರಾಜ ದೇಶಮುಖ, ಪ್ರೊ.ವಿ.ಡಿ.ಮೈತ್ರಿ, ಪ್ರೊ.ಅನಿಲಕುಮಾರ ಬಿಡವೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸಲಹೆ
  • ಶರಣಬಸವ ವಿವಿ ಕುಲಸಚಿವ, ಡೀನ್‌ಗೆ ಸತ್ಕಾರ
ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದ ನೂತನ ಕುಲಸಚಿವೆ ಡಾ.ಲಕ್ಷಿö್ಮÃ ಪಾಟೀಲ್ ಮಾಕಾ, ವಿಶ್ವವಿದ್ಯಾಲಯದ ನೂತನ ಡೀನ್ ಡಾ.ಶಿವಕುಮಾರ ಜವಳಗಿ ಮತ್ತು ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಸುಜಾತಾ ಮಲ್ಲಾಪುರ ಅವರನ್ನು ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಗುರುವಾರ ಸತ್ಕರಿಸಲಾಯಿತು.
ಸತ್ಕಾರದ ನಂತರ ಮಾತನಾಡಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿಶ್ವವಿದ್ಯಾಲಯದಲ್ಲಿ ಡಾ.ಲಕ್ಷಿö್ಮÃ ಪಾಟೀಲ್ ಮಾಕಾ, ಡಾ.ಜವಳಗಿ ಮತ್ತು ಡಾ.ಸುಜಾತಾ ಮಲ್ಲಾಪುರ ಶ್ರಮ ಶ್ಲಾಘನೀಯ. ಇವರ ಪರಿಶ್ರಮ ಉತ್ತಮ ಪ್ರತಿಫಲ ನೀಡಿದೆ ಎಂದು ಹೇಳಿದರು.
ವೃತ್ತಿಪರ ಮತ್ತು ಶೈಕ್ಷಣಿಕ ಪ್ರಯಾಣದಲ್ಲಿ ಅವರ ಅದ್ಭುತ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ ದೇಶಮುಖ, ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಲಿಂ.ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರು ಎರಡು ದಶಕಗಳ ಹಿಂದೆಯೇ ಈ ವಿಶ್ವವಿದ್ಯಾಲಯ ಸ್ಥಾಪಿಸುವ ದೂರದೃಷ್ಟಿ ಹೊಂದಿದ್ದರು. ಶೈಕ್ಷಣಿಕ ಯಶಸ್ಸು ಸಾಧಿಸುವ ಹಾಗೂ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾಗುವ ಹಾದಿಯಲ್ಲಿ ದೃಢವಾಗಿ ಮುನ್ನಡೆಸಿದ್ದರು ಎಂದು ಸ್ಮರಿಸಿದರು.
ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಅವಲಂಬಿಸುವ ಬದಲು ನವೋದ್ಯಮ ಸ್ಥಾಪಿಸುವ ಪ್ರಸ್ತುತ ಪ್ರವೃತ್ತಿಗೆ ತಮ್ಮ ಜ್ಞಾನ ಸಂಯೋಜಿಸಬೇಕು. ತಮ್ಮ ಸ್ವಂತ ಕಾಲುಗಳ ಮೇಲೆ ನಿಂತು ಇತರರಿಗೆ ಉದ್ಯೋಗ ಒದಗಿಸಬೇಕು ಎಂದು ಹೇಳಿದರು.
ಡಾ.ಲಕ್ಷಿö್ಮÃ ಪಾಟೀಲ್ ಮಾಕಾ ಮಾತನಾಡಿ, ಶೈಕ್ಷಣಿಕ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ಲಿಂ.ಪೂಜ್ಯ ಡಾ.ಅಪ್ಪಾಜಿಯವರು ಹೇಗೆ ಪ್ರೇರೆಪಿಸಿದರು ಎಂಬುದನ್ನು ನೆನಪಿಸಿಕೊಂಡು, ವೈದ್ಯೆಯಾಗಬೇಕೆಂದು ಬಯಸಿದ ಸಂದರ್ಭದಲ್ಲಿ ಇಂಜಿನಿಯರಿAಗ್ ಕಾಲೇಜಿಗೆ ಸೇರಲು ಸಲಹೆ ನೀಡಿದ ಡಾ.ಅಪ್ಪಾಜಿ. ನನ್ನ ಜೀವನದ ಪ್ರತಿ ಹಂತದಲ್ಲೂ ಅವರು ಪ್ರಮುಖ ಬೆಳಕಾಗಿದ್ದರು ಎಂದು ಹೇಳಿದರು. ಇಂಜಿನಿಯರಿAಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿ, ನಂತರ ಗೋದುತಾಯಿ ಮಹಿಳಾ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕಗೊಂಡು ಅಂತಿಮವಾಗಿ ಶರಣಬಸವ ವಿಶ್ವವಿದ್ಯಾಲಯದ ಪ್ರಸ್ತುತ ಕುಲಾಧಿಪತಿಗಳು ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆದ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಅವರು ಕುಲಸಚಿವ ಹುದ್ದೆಗೆ ಬಡ್ತಿ ನೀಡುವ ಮೂಲಕ ಸಂಸ್ಥೆಯಲ್ಲಿ ತಮ್ಮ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದರು.
ವಿವಿಯ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಮಾತನಾಡಿ, ಡಾ.ಮಾಕಾ ಅವರು ತಮ್ಮ ಶೈಕ್ಷಣಿಕ ಪ್ರಯಾಣದಲ್ಲಿ ಶ್ರೇಷ್ಠರಾಗಿದ್ದರು. ಕುಲಸಚಿವರಾಗುವ ಈ ಸಾಧನೆಯು ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಅವರ ಅರ್ಹತೆ ಗಮನಸಿದೆ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದರು.
ಡಾ.ಮಾಕಾ ಅವರ ಪಿಎಚ್‌ಡಿ ಸಂಶೋಧನಾ ಮಾರ್ಗದರ್ಶಕರಾಗಿದ್ದ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ.ವಿ.ಡಿ.ಮೈತ್ರಿ ಮಾತನಾಡಿ, ಡಾ.ಮಾಕಾ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಪಿಎಚ್‌ಡಿ ತೇರ್ಗಡೆಗೊಳ್ಳುವ ಮೂಲಕ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ವಿವಿಯ ಕುಲಸಚಿವ (ಮೌಲ್ಯಮಾಪನ) ಡಾ.ಎಸ್.ಎಚ್.ಹೊನ್ನಳ್ಳಿ, ಹಣಕಾಸು ಅಧಿಕಾರಿ ಡಾ.ಕಿರಣ ಮಾಕಾ ಇತರರಿದ್ದರು.
"

ಡಾ.ಅಪ್ಪಾಜಿ ಅವರು ವಿಶ್ವ ದರ್ಜೆಯ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸುವ ಕನಸು ಸಾಧಿಸುವಲ್ಲಿ, ಪ್ರತಿಯೊಬ್ಬ ಅಧ್ಯಾಪಕರು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ತಮ್ಮ ಅತ್ಯುತ್ತಮ ಸೇವೆ ಮತ್ತು ಸಹಕಾರ ನೀಡಬೇಕು. ವಿದ್ಯಾರ್ಥಿಗಳು ಉದ್ಯಮದ ಕೌಶಲ ಸುಧಾರಿಸಿಕೊಳ್ಳಬೇಕು.

ಬಸವರಾಜ ದೇಶಮುಖ,ಕಾರ್ಯದರ್ಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net