ಕಲಬುರಗಿಯಲ್ಲಿ ಮಹಿಳಾ ಸರ್ಕಾರಿ ನೌಕರರ ಸಂಘದಿAದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರನ್ನು ಸತ್ಕರಿಸಲಾಯಿತು. ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಅಪ್ಪ, ಶ್ರೀ ಸಿದ್ಧೇಶ್ವರ ಶಿವಾಚಾರ್ಯ, ಶಶೀಲ್ ನಮೋಶಿ, ನಂದಿನಿ ಸನಬಾಳ್, ಸವಿತಾ ನಾಶಿ, ಬಸವರಾಜ ಬಳೂಂಡಗಿ, ಗಿರಿಗೌಡ, ಮಲ್ಲಿಕಾರ್ಜುನ ಬಳ್ಳಾರಿ ಇತರರಿದ್ದರು.
ಕಲಬುರಗಿ:ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಈ ನಾಡಿನ ಪ್ರತಿ ಸಮಸ್ಯೆ ಪರಿಹಾರಕ್ಕೂ ಕೈಜೋಡಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಸಿ.ಎಸ್.ಷಡಾಕ್ಷರಿ ಹೇಳಿದರು.
ಡಾ.ಬಸವರಾಜಪ್ಪ ಅಪ್ಪ ಮೆಮೋರಿಯಲ್ ಹಾಲ್‌ನಲ್ಲಿ ಮಹಿಳಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಬುಧವಾರ ಆಯೋಜಿಸಿದ್ದ ಋತುಚಕ್ರ ರಜೆ, ಇತರೆ ಸೌಲಭ್ಯಕ್ಕೆ ಕಾರಣವಾದ ತಮಗೆ ಅಭಿನಂದನೆ ಹಾಗೂ ಮೇರಿ ದೇವಾಸಿಯಾ ಸೇವಾ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅನೇಕ ಸಮಸ್ಯೆ, ಸವಾಲುಗಳ ಮಧ್ಯೆಯೂ ಮಹಿಳೆ ಉತ್ತಮ ಸಮಾಜ ನಿರ್ಮಾಣ ಮಾಡಬಲ್ಲಳು. ಸಾಮಾಜಿಕ, ಶೈP್ಷÀಣಿಕ, ರಾಜಕೀಯವಾಗಿ ಮಹಿಳೆಯರಿಗೆ ಸಮಾಜ ಅವಕಾಶ ಸಿಗಬೇಕು ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಮಹಿಳೆ ನಿಜವಾದ ವಾಸ್ತುಶಿಲ್ಪಿ. ನಿಮ್ಮ ಸಮಸ್ಯೆಗಳನ್ನು ತುಂಬಾ ಹತ್ತಿರದಿಂದ ನೋಡಿz್ದೆÃನೆ. ಮಹಿಳೆಯರ ಸ್ಥಿತಿಗತಿ ಕುರಿತು ಅವಲೋಕನ ನಡೆಯಬೇಕು. ನಮ್ಮ ಮಹಿಳಾ ನೌಕರರು ಇತಿಮಿತಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಬೇಕು. ರಾಜ್ಯದಲ್ಲಿ ಶೋಷಣೆ ಪ್ರಕರಣ ಹೆಚ್ಚುತ್ತಿದ್ದು ಒಟ್ಟಾರೆ ಪ್ರಕರಣದಲ್ಲಿ ಶೇ.32 ಮಹಿಳಾ ಶೋಷಣೆ ಪ್ರಕರಣ ಸೇರಿವೆ. ಸಂಘ ಈ ನಿಟ್ಟಿನಲ್ಲಿ ನಿಯಂತ್ರಣಕ್ಕೆ ಪ್ರಮಾಣಿಕ ಪ್ರಯತ್ನ ಮಾಡಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ಮಹಿಳಾ ನೌಕರರು ಸಂಘಟಿತರಾಗಬೇಕು. ತಮ್ಮ ಕರ್ತವ್ಯ ಜತೆಗೆ ಸಮಾಜ ಸೇವೆ ಮಾಡಬೇಕು. ಕಲ್ಯಾಣ ಭಾಗದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ತುಂಬಾ ಕಡಿಮೆ ಆಗಿದೆ. ಶಿಕ್ಷಕರ ಹುದ್ದೆ ಖಾಲಿ ಇರುವ ನಿಮಿತ್ತ ಸಮಸ್ಯೆ ತಲೆದೋರಿದೆ. ಸರ್ಕಾರ ಭರ್ತಿ ಮಾಡಿದರೆ ನೌಕರರು ಶ್ರಮ ಹಾಕಿ ಕೆಲಸ ಮಾಡಿ ಉತ್ತಮ ಫಲಿತಾಂಶ ತರುತ್ತಾರೆಂಬ ವಿಶ್ವಾಸವಿದೆ. ಶಿP್ಷÀಕರ ಪ್ರತಿನಿಧಿಯಾಗಿ ಅವರ ಅನೇಕ ಸಮಸ್ಯೆ ಪರಿಹಾರಕ್ಕೆ ಸದನದ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ಮಾಡುತ್ತಿz್ದÉÃನೆ. ನಿಮ್ಮೆಲ್ಲರ ಸಹಕಾರ ಇದ್ದರೆ ಶಿP್ಷÀಕರ ಬಹುತೇಕ ಬೇಡಿಕೆಗಳಿಗೆ ಸ್ಪಂದನೆ ದೊರೆಯಲಿದೆ ಎಂದು ಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಆಳಂದನ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ಎಚ್.ಗಿರಿಗೌಡ, ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಂದಿನಿ ಸನಬಾಳ್ ಪ್ರಾಸ್ತಾವಿಕ ಮಾತನಾಡಿದರು. ಡಿಡಿಪಿಐ ಶಂಕ್ರಮ್ಮ ಢವಳಗಿ ಇತರರಿದ್ದರು. ಸವಿತಾ ನಾಶಿ ನಿರೂಪಣೆ ಮಾಡಿದರು. ಸಿದ್ದಣ್ಣ ಕುಂಬಾರ ಅವರು ಮೂಗಿನಿಂದ ಕೊಳಲು ನುಡಿಸಿ ಗಮನ ಸೆಳೆದರು. ಹಲವು ಸಾಧಕರಿಗೆ ಮೇರಿ ದೇವಾಸಿಯಾ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.
"
ಮಹಿಳಾ ನೌಕರರ ಪರ ಸಂಘದ ಅಧ್ಯಕ್ಷ ಷಡಾP್ಷÀರಿ ಅವರು ಶ್ರಮಿಸುತ್ತಿz್ದÁರೆ. ವಿಶೇಷವಾಗಿ ಋತು ಚಕ್ರ ರಜೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಮುಖಪಾತ್ರ ವಹಿಸಿz್ದÁರೆ. ಹೀಗಾಗಿ ಅಭಿನಂದನಾರ್ಹರು.
| ನಂದಿನಿ ಸನಬಾಳ್, ಜಿಲ್ಲಾಧ್ಯಕ್ಷೆ, ಮಹಿಳಾ ಸರ್ಕಾರಿ ನೌಕರರ ಸಂಘ
ಕಲ್ಯಾಣ ಭಾಗದಲ್ಲಿ ಈ ಬಾರಿಯೂ ಪ್ರಖರ ಬಿಸಿಲು ಇರಲಿದೆ ಎಂಬ ಮಾಹಿತಿ ಇದೆ. ಈ ನಿಟ್ಟಿನಲ್ಲಿ ನೌಕರರು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಿ ಕಚೇರಿ ಅವಧಿ ಬದಲಾವಣೆಗೆ ಅಧ್ಯP್ಷÀ ಷಡಾP್ಷÀರಿ ಅವರು ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಬೇಕು.