ಕಲಬುರಗಿಗೆ ಬಂದ ಸಿಂಹ, ಮೃಗಾಲಯ ಉದ್ಘಾಟನೆ

Kalaburagi zoo inougration
Kalaburagi zoo inougration
Published on

ಪ್ರಮುಖ ಮುಖ್ಯಾಂಶಗಳು

  • 43 ಎಕರೆಯಲ್ಲಿ ಬೃಹತ್ ಮೃಗಾಲಯ ಸಜ್ಜು
  • ಪ್ರತಿ ಮಂಗಳವಾರ ರಜೆ, ಹಂತ ಹಂತವಾಗಿ ಬರಲಿವೆ ಪ್ರಾಣಿಗಳು
ಕಲಬುರಗಿ: ಚಿತ್ತಾಪುರ ತಾಲೂಕಿ‌ನ ಮುಡಬೂಳ ಗ್ರಾಮದ ಬಳಿ 43 ಎಕರೆ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾದ ಮೃಗಾಲಯ ಹಾಗೂ ಮಕ್ಕಳ ಉದ್ಯಾನವನ‌ಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ, ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟನೆ ಮಾಡಿದರು.
ಕಾಳಗಿ ತಾಲೂಕಿನ ಮಡಬೂಳ ಗ್ರಾಮದಲ್ಲಿ 42 ಏಕರೆ 38 ಗುಂಟೆ ಜಾಗದಲ್ಲಿ ಮೃಗಾಲಯ ಸ್ಥಾಪಿಸಲಾಗಿದೆ.
ಎಲ್ಲ ಸಂಸ್ಥೆಗಳಿಂದ ಅನುಮತಿ ಪಡೆಯಲಾಗಿದೆ. ಸಕಲ ಸೌಲಭ್ಯ, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಕಲ್ಪಿಸಲಾಗಿದೆ. ಆಸ್ಪತ್ರೆ ಹಾಗೂ ಅಡುಗೆಮನೆ ಕಟ್ಟಡಗಳು ಅಗತ್ಯ ಔಷಧಿ ಮತ್ತು ಸ್ಟೆಚರ್, ಫ್ರೀಜರ್ ಮುಂತಾದ ಉಪಕರಣಗಳೊಂದಿಗೆ ಸಜ್ಜುಗೊಂಡಿವೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ಸಾರ್ವಜನಿಕ ಸೌಲಭ್ಯಗಳು - ಕುಡಿಯುವ ನೀರು, ಶೌಚಾಲಯಗಳು, ಶೆಡ್‌ಗಳು, ಬೆಂಚ್‌ಗಳು, ಉದ್ಯಾನ, ಮಕ್ಕಳ ಆಟದ ಪ್ರದೇಶ, ಸೂಚನಾ ಫಲಕಗಳು ಇತ್ಯಾದಿ ಇರಲಿವೆ ಎಂದು ಹೇಳಿದರು.
ಕಲಬುರಗಿ ಮೃಗಾಲಯದಲ್ಲಿ ಸಿಂಹ
ಮೃಗಾಲಯದಲ್ಲಿ ಒಟ್ಟು 56 ಜಾತಿಯ ಪ್ರಾಣಿಗಳಿಗೆ ಆವರಣಗಳು ನಿರ್ಮಾಣವಾಗಲಿವೆ. ನಿಶಾಚರ ಪ್ರಾಣಿಗಳು - 06, ಭಾರತೀಯ ಪಕ್ಷಿಗಳು 10, ಸಣ್ಣ ಪಕ್ಷಿಗಳು 06, ಫೀಸಂಟ್ 06, ಸಸ್ತನಿಗಳು 10, ಪ್ರೈಮೇಟ್‌ಗಳು 04, ಶಾಕಾಹಾರಿ ಪ್ರಾಣಿಗಳು 06, ಉಭಯಚರ/ಸರೀಸೃಪಗಳು 08, ಆಮೆ, ಘರಿಯಾಲ್, ಮೊಸಳೆ, ಚುಕ್ಕೆ ಜಿಂಕೆ, ಗೋಲ್ಡನ್ ಜಾಕಲ್, ಹುಲಿ, ಸಿಂಹ, ಸ್ತೋತ್ ಕರಡಿ, ಜೀಬ್ರಾ, ಬಬೂನ್, ಲಂಗೂರು ಹಾಗೂ ವಿವಿಧ ಪಕ್ಷಿಗಳಿಗಾಗಿ ಒಟ್ಟು 23 ಆವರಣಗಳು ಪೂರ್ಣಗೊಂಡಿವೆ ಎಂದು ಹೇಳಿದರು.
ಆಮೆ, ಮೊಸಳೆ, ಇಮು, ಸಿಲ್ವರ್ ಫೀಸಂಟ್, ಗಿಳಿಗಳು, ನವಿಲುಗಳು, ಜಾಕಲ್, ಕಪ್ಪು ಗಿಡುಗಗಳು, ಲಂಗೂರು, ಕಪ್ಪು ಜಿಂಕೆ ಮೃಗಾಲಯಕ್ಕೆ ಬಂದಿವೆ ಎಂದು ಹೇಳಿದರು.
1 ತಿಂಗಳಲ್ಲಿ - ಸಾಂಬರ್, ರೆಡ್ ಜಂಗಲ್ ಫೌಲ್, ಪೈಥಾನ್
3 ತಿಂಗಳಲ್ಲಿ - ಹುಲಿ, ಬಬೂನ್, ಸ್ತೋತ್ ಕರಡಿ, ಕಿಂಗ್ ಕೋಬ್ರಾ, 6 ತಿಂಗಳಲ್ಲಿ - ಜೀಬ್ರಾ, ಘರಿಯಾಲ್ ಹಾಗೂ ಇತರೆ ಪಕ್ಷಿ ಮತ್ತು ಸರೀಸೃಪ ಜಾತಿಯ ಪ್ರಾಣಿಗಳು ಬರಲಿವೆ ಎಂದು ಹೇಳಿದರು.
ಸಮಯ: ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ಇದ್ದು, ಪ್ರತಿ ಮಂಗಳವಾರ ರಜೆ ಇರಲಿದೆ.
ಪ್ರವೇಶ ಶುಲ್ಕ: 12 ವರ್ಷ ಮೇಲ್ಪಟ್ಟವರಿಗೆ- 75, 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 40 ರೂ. ಇರಲಿದೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭೇಟಿ - ₹25 ರೂ. ಇರಲಿದೆ ಎಂದು ಹೇಳಿದರು.
ವೇದಿಕೆಯ ಮೇಲೆ ಶಾಸಕರಾದ ಅಲ್ಲಮಪ್ರಭು ಪಾಟೀಲ್ , ಎಂಎಲ್ಸಿ ಬಿ.ಜಿ.ಪಾಟೀಲ್, ಜೆಸ್ಕಾಂ ಚೇರ್ ಮನ್ ಪ್ರವೀಣ್ ಹರವಾಳ, ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್, ಜಿಲ್ಲಾಧಿಕಾರಿ ಇಕ್ರಾಮುಲ್ಲಾ ಷರೀಫ್, ನಗರ ಪೊಲೀಸ್ ಕಮೀಷನ್ ಡಾ.ಶರಣಪ್ಪ ಎಸ್.ಡಿ., ಸಿಇಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಕಮೀಷನರ್ ಅವಿನಾಶ ಶಿಂಧೆ, ಸುಮಿತ್ ಪಾಟೀಲ್ ಸೇರಿದಂತೆ ಹಲವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net