ನಗರದ ಜಗತ್ ವೃತ್ತದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಎದುರು ಸ್ಲಂ ಜನಾಂದೋಲನ ಗದಗನಲ್ಲಿ ಜೂ.20ರಂದು ನಡೆಯಲಿರುವ ರಾಜ್ಯ ಪ್ರತಿನಿಧಿಗಳ ಸಮ್ಮೇಳನದ ಭಿತ್ತಿ ಪತ್ರ, ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಸ್ಲಂ ಜನರಿಗೆ ಉದ್ಯೋಗ ಖಾತ್ರಿ ನೀಡಬೇಕು, ಪ್ರತ್ಯೇಕ ಸಚಿವಾಲಯ ಘೋಷಿಸಬೇಕು, ನಿವೇಶನ ರಹಿತರಿಗೆ ವಸತಿ ಖಾತ್ರಿಗಾಗಿ ವಸತಿ ಹಕ್ಕು ಮತ್ತು ಭೂಮಿ ಬ್ಯಾಂಕ್ ನೀತಿ ಜಾರಿಗೆ ತರಬೇಕು, ಚಿತ್ರದುರ್ಗದಲ್ಲಿ ಘೋಷಿಸಿದಂತೆ ಸ್ಲಂ ನಲ್ಲಿರುವ ಎಸ್ಸಿ, ಎಸ್ಟಿ ಕುಟುಂಬಗಳಿಗೆ ಉಚಿತ ವಸತಿ ಮತ್ತು ಸೈಟ್ ವಿತರಿಸಬೇಕು, ಭೂ ಗ್ಯಾರಂಟಿ ಯೋಜನೆ ಅಡಿ ಹಕ್ಕುಪುತ್ರ ಮತ್ತು ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿ ಮನೆಗಳನ್ನು ನೀಡಬೇಕು ಎಂದು ಕೋರಿದರು.