ಕಾಂಗ್ರೆಸ್ ಬ್ಯಾನರ್ ನಲ್ಲಿ ಸಿದ್ದರಾಮಯ್ಯ ಕಡೆಗಣನೆ ಗೊಂಡ ಕುರುಬ ಸಂಘ ಕಿಡಿ

Kurub community
Kurub community
Published on
ಚಿಂಚೋಳಿ : ರಾಜ್ಯ ಮತ್ತು ಜಿಲ್ಲಾ ಕಾಂಗ್ರೇಸ್ ಸಮಿತಿಗೆ ನಾಡು ಕಂಡ ಅಹಿಂದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಅವಶ್ಯಕತೆ ಮುಗಿದಂತೆ ಕಾಣುತ್ತಿದೆ ಎಂದು ಕಾಳಗಿ ತಾಲೂಕು ಗೊಂಡ ಕುರುಬ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಅಣಕಲ್ ಮಾರ್ಮಿಕವಾಗಿ ಖಂಡಿಸಿದರು.
ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೇಸ್ ಸಮಿತಿಯು ನೂತನವಾಗಿ ಆಯ್ಕೆಗೊಂಡ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ಅಭಿನಂದನಾ ಸಭೆಯ ಬ್ಯಾನರನಲ್ಲಿ ಸಿದ್ದರಾಮಯ್ಯ ನವರ ಭಾವಚಿತ್ರ ಕೈಬೀಡುವ ಮೂಲಕ ರಾಜ್ಯದ ಅಹಿಂದ ಸಮುದಾಯಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಶ್ಯಕತೆ ಮುಗಿದಿದೆ ಎಂಬ ಸಂದೇಶ ಸಾರಿರುವುದು ಅತ್ಯಂತ ಖೇದಕರ ಸಂಗತಿ ಎಂದರು.
ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಅಧಿಕಾರಕ್ಕೆ ಬರಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಡುಗೆ ಅವಿಸ್ಮರಣೀಯ. ಪ್ರಸ್ತುತ ಜಿಲ್ಲಾ ಕಾಂಗ್ರೇಸ್ ಪಕ್ಷವು ಸಿದ್ದರಾಮಯ್ಯ ಅವರನ್ನು ಮರೆತಿರುವುದು. ಅಹಿಂದ ಸಮುದಾಯಗಳಿಗೆ ಮಾಡಿದ ಅಪಮಾನವಾಗಿದೆ. ಕೂಡಲೇ ಅವರನ್ನು ಏಕೆ ? ಕೈ ಬಿಡಲಾಯಿತು. ಎಂಬುದು ಬಹಿರಂಗ ಪಡಿಸಬೇಕು. ಎಲ್ಲಾ ರಾಷ್ಟ್ರ ಮತ್ತು ರಾಜ್ಯ ನಾಯಕರ ಭಾವಚಿತ್ರ ಬಳಸಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸಿರುವುದು ಏಕೆ ? ಎಂಬುದು ಜಿಲ್ಲಾ ಸಮಿತಿ ತಿಳಿಸಲಿ ಎಂದು ಒತ್ತಾಯಿಸಿದರು.
ಒಂದು ವೇಳೆ ಅಚಾತುರ್ಯದಿಂದ ನಡೆದಿದ್ದಲ್ಲಿ ಅಹಿಂದ  ಸಮುದಾಯಕ್ಕೆ ಕ್ಷಮೆಯಾಚಿಸಬೇಕು. ಉದ್ದೇಶ ಪೂರ್ವಕವಾಗಿ ಕೈಬಿಟ್ಟಿದಲ್ಲಿ ಮುಂದಿನ ದಿನಗಳಲ್ಲಿ ಕಲಬುರ್ಗಿ ಜಿಲ್ಲಾ ಕಾಂಗ್ರೇಸ್ ಪಕ್ಷದಲ್ಲಿ ಬದಲಾವಣೆ ಬಿರುಗಾಳಿ ಬಿಸುವುದರಲ್ಲಿ ಸಂದೇಹವಿಲ್ಲ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಹಣಮಂತ ಬೆಂಕಿ, ಅರ್ಜುನ ಕಮಕನೂರ, ಕೃಷ್ಣ ಮಲಕಪೂರ,ರಾಜೇಂದ್ರ ಕನಕಪುರ, ಹಣಮಂತ ಭಂಟನಳ್ಳಿ, ಸಿದ್ದು ವಚ್ಚ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net