ಕುರಿಗಾರರಿಗೆ ಉಣ್ಣೆ ಸಂಸ್ಕರಣೆ ತರಬೇತಿ

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಕಲಬುರಗಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಉಣ್ಣೆ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಯಾಂತ್ರಿಕೃತ ಉಣ್ಣೆ ಕಟಾವು ತರಬೇತಿ ಕಾರ್ಯಕ್ರಮದಲ್ಲಿ ನಿಗಮದ ಅಧ್ಯಕ್ಷ ದೇವೀಂದ್ರಪ್ಪ ಮರ್ತೂರ್ ಮಾತನಾಡಿದರು. ಡಾ.ಸಂಜಯ ರೆಡ್ಡಿ, ಡಾ.ದಯಾನಂದ ಹಕ್ಕಾಪಕ್ಕಿ, ಡಾ.ರವೀಂದ್ರನಾಥ, ಡಾ.ಶಂಕರ ಕಣ್ಣಿ ಇತರರಿದ್ದರು.

Published on
ಕಲಬುರಗಿ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಗೂ ಕೇಂದ್ರಿಯ ಉಣ್ಣೆ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಶುಕ್ರವಾರ ಐದು ದಿನಗಳ ಉಣ್ಣೆ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಯಾಂತ್ರಿಕೃತ ಉಣ್ಣೆ ಕಟಾವು ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲೆಯ ವಿವಿಧ ತಾಲೂಕುಗಳ ಸುಮಾರು ೫೦ ಜನ ಕುರಿ ಸಾಕಾಣಿಕೆದಾರರು ಈ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ತಾಂತ್ರಿಕ ಜ್ಞಾನ ಪಡೆದರು. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರ್ತೂರ ತರಬೇತಿದಾರರಿಗೆ ಪ್ರಮಾಣ ಪತ್ರ ಹಾಗೂ ವಲಸೆ ಕುರಿಗಾರರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿ, ಶೀಘ್ರದಲ್ಲೇ ಕುರಿಗಾರರಿಗೆ ಅಗತ್ಯವಿರುವ ಜಂತು ನಾಶಕ ಔಷಧಿ ಮತ್ತು ಪರಿಕರ ಕಿಟ್ ವಿತರಿಸಲಾಗುವುದು. ಕುರಿ/ಮೇಕೆ ಸಾಕಾಣಿಕೆಗಾಗಿ ಸಹಾಯಧನ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಕಲಬುರಗಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಸಂಜಯ್ ರೆಡ್ಡಿ ಮಾತನಾಡಿ, ಕುರಿ ಮತ್ತು ಮೇಕೆಗಳಿಗೆ ಕಾಲಕಾಲಕ್ಕೆ ಲಸಿಕೆ ಮತ್ತು ಚಿಕಿತ್ಸೆ ನೀಡುವ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಉಪ ನಿರ್ದೇಶಕ ಡಾ.ರವಿಂದ್ರನಾಥ ಮಾತನಾಡಿ, ಐದು ದಿನಗಳ ಈ ತರಬೇತಿಯ ಉz್ದೆÃಶ ಮತ್ತು ಅದರ ಕಾರ್ಯವಿಧಾನಗಳ ಕುರಿತು ವಿವರಿಸಿದರು.
ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದ ಉಪನಿರ್ದೇಶಕg ಡಾ.ದಯಾನಂದ ಹಕ್ಕಾಪಕ್ಕಿ ಮಾತನಾಡಿ, ಹೊಸದಾಗಿ ಕುರಿ/ಮೇಕೆ ಸಾಕಾಣಿಕೆ ಆರಂಭಿಸಲು ಆಸಕ್ತ ರೈತರು ಕಚೇರಿಗೆ ಭೇಟಿ ನಿಡಿ ಅರ್ಜಿ ಸಲ್ಲಿಸಲು ಕೋರಿದರು. ಡಾ.ಶಂಕರ ಕಣ್ಣಿ ಸ್ವಾಗತಿಸಿ, ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net