ತೆಂಗಿನ ಮರದಲ್ಲಿ ಸಿಲುಕಿದ್ದ ಬೆಕ್ಕಿನ ಮರಿ ರಕ್ಷಣೆ

Kitten stuck in coconut tree rescued
Kitten stuck in coconut tree rescued
Published on
ಕಲಬುರಗಿ: ನಗರದ ಹೊಸ ಜೇವರ್ಗಿ ರಸ್ತೆಯ ಮಾಕಾ ಲೇಔಟ್​ನಲ್ಲಿ ತೆಂಗಿನ ಮರವೇರಿ, ಇಳಿಯಲು ಆಗದೇ ಕಿರುಚುತ್ತ ಕುಳಿತ್ತಿದ್ದ ಬೆಕ್ಕಿನ ಮರಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಸಿದ್ದಾರೆ. ಮಾಕಾ ಲೇಔಟ್​ನಲ್ಲಿನ ವಕೀಲೆ ರಾಜೇಶ್ವರಿ ಜಮಾದಾರ ಅವರ ಸಾಕು ಬೆಕ್ಕಿನ ಮರಿ ರಾತ್ರಿ 11ಗಂಟೆ ಸುಮಾರಿಗೆ ಸುಮಾರು 40 ಅಡಿ ಎತ್ತರದ ತೆಂಗಿನ ಮರವೇರಿ ಕುಳಿತ್ತಿದ್ದು, ಕೆಳಗೆ ಇಳಿಯಲಾಗದೆ ಚೀರುತ್ತಿತ್ತು.
ಅಗ್ನಿಶಾಮಕ ದಳದವರಿಗೆ ಕರೆ ಮಾಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಮರಿಲಿಂಗಪ್ಪ, ಅಗ್ನಿಶಾಮಕ ಚಾಲಕ ಸುಭಾಷ, ಅಗ್ನಿಶಾಮಕ ಸಿಬ್ಬಂದಿ ಸತೀಶ ಪಾಟೀಲ್​, ಶಶಿಧರ ಬಡಿಗೇರ ಹಾಗೂ ಅಮೀತ ಅವರ ತಂಡ, ಎರಡು ಗಂಟೆ ಕಾರ್ಯಾಚರಣೆ ನಡೆಸಿ, ಬೆಕ್ಕಿನ ಮರಿ ರಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net