ಕಲಬುರಗಿ ಕೆಕೆಸಿಸಿಐ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಕ ಸ್ವಾರ್ಟ್ಅಪ್ ಪಿಚ್ ಯೂರ್ ಐಡಿಯಾ ಕಾರ್ಯಕ್ರಮದಲ್ಲಿ ಡಿಸಿ ಫೌಜಿಯಾ ತರನ್ನುಮ್, ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಪಪ್ಪ, ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ಕೃಷಿಕಲ್ಪ ಸಿಇಒ ಸಿ.ಎಂ.ಪಾಟೀಲ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಸಂಜಯ್ ಮುದಗಲ್ ಇತರರಿದ್ದರು.
ಕಲಬುರಗಿ:ಯುವಕರು ಸವಾಲು ಸ್ವೀಕರಿಸಿ ಸ್ವಾವಲಂಬಿ ಭವಿಷ್ಯ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕೃಷಿಕಲ್ಪ ಸಿಇಒ ಸಿ.ಎಂ.ಪಾಟೀಲ್ ಕರೆ ನೀಡಿದರು.
ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟಿç (ಕೆಕೆಸಿಸಿಐ) ವತಿಯಿಂದ ಬುಧವಾರ ಆಯೋಜಿಸಿದ್ದ ಪಿಚ್ ಯೂರ್ ಐಡಿಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರದೇಶದ ಅಭಿವೃದ್ಧಿಗೆ ಉದ್ಯಮಶೀಲತೆ ಮೂಲಕ ಉತ್ತೇಜನ ನೀಡುವ ಸಂಸ್ಥೆಯ ಧ್ಯೇಯ ವಿವರಿಸಿ, ಕೃಷಿಕಲ್ಪದ ಸೆಂಟರ್ ಆಫ್ ಎಕ್ಸಲೆನ್ಸ್ ಅಡಿ ನಡೆಯುತ್ತಿರುವ ಯೋಜನೆಗಳು, ಸ್ಟಾರ್ಟ್ಅಪ್‌ಗಳಿಗೆ ನೀಡುತ್ತಿರುವ ಬೆಂಬಲ ಹಾಗೂ ನಿರ್ಮಾಣವಾಗುತ್ತಿರುವ ಮೂಲಸೌಕರ್ಯದ ಮಾಹಿತಿ ನೀಡಿದರು.
ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಎಂ.ಪಪ್ಪ ಮಾತನಾಡಿದರು. ಜಿಲ್ಲಾಧಿಕಾರಿ ಬಿ.ಫೌಜಿಯಾ ತರನುಮ್ ಮಾತನಾಡಿ, ಸ್ಟಾರ್ಟ್ಅಪ್‌ಗಳಿಂದ ಕಂಡುಬAದ ಉತ್ತಮ ಪ್ರತಿಕ್ರಿಯೆ ಶ್ಲಾಘಿಸಿ, ಈ ಪ್ರದೇಶವನ್ನು ನವೋದ್ಯಮ ಕೇಂದ್ರವನ್ನಾಗಿ ರೂಪಿಸಲು ಜಿಲ್ಲಾಡಳಿತ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲï ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಅಗತ್ಯ ಒತ್ತಿ ಹೇಳಿ, ಸಹಕಾರ ಮತ್ತು ಉದ್ಯಮ ಅಭಿವೃದ್ಧಿಯೇ ದೀರ್ಘಕಾಲಿಕ ಪ್ರಾದೇಶಿಕ ಬೆಳವಣಿಗೆಗೆ ಆಧಾರ ಎಂದರು.
೧೨೦ಕ್ಕೂ ಹೆಚ್ಚು ಆರಂಭಿಕ ಹಂತದ ಸ್ಟಾರ್ಟ್ಅಪ್ ಸ್ಥಾಪಕರು ಭಾಗವಹಿಸಿದ್ದರು. ಕಾಲೇಜುಗಳಲ್ಲಿ ಉದ್ಯಮಶೀಲತೆ ಬೆಳೆಸುತ್ತಿರುವ ಶಿP್ಷÀಕರು, ಎಕೋಸಿಸ್ಟಮï ಸಹಾಯಕರು ಹಾಗೂ ೨ ಕೋಟಿಗೂ ಹೆಚ್ಚು ವ್ಯವಹಾರ ಮಾಡಿದ ೫೬ ಪ್ರಮುಖ ಎಫ್‌ಪಿಒಗಳು ಭಾಗವಹಿಸಿದ್ದರು. ಈ ಸಮಾರಂಭವು ನವೀನತೆ, ಸಹಕಾರ ಮತ್ತು ಉದ್ಯಮಶೀಲ ಚಟುವಟಿಕೆಗಳಿಗೆ ಸಶಕ್ತ ವೇದಿಕೆಯಾಗಿ ಪರಿಣಮಿಸಿತು.
ಆಯ್ಕೆಯಾದ ಸ್ಟಾರ್ಟ್ಅಪ್‌ಗಳಿಗೆ ತಮ್ಮ ಆಲೋಚನೆಗಳನ್ನು ನೇರವಾಗಿ ಮಂಡಿಸಿ, ಮಾರ್ಗದರ್ಶನ, ಸಹಭಾಗಿತ್ವ ಹಾಗೂ ಬೆಳವಣಿಗೆಗೆ ಅವಕಾಶ ಕಲ್ಪಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ಮಾತನಾಡಿ, ಈ ರೀತಿಯ ಉದ್ಯಮಶೀಲತೆ ಬಲಪಡಿಸುವ ಕಾರ್ಯಕ್ರಮಗಳಿಗೆ ಸಂಸ್ಥೆ ಬೆಂಬಲ ನೀಡುತ್ತ ಬಂದಿದೆ ಎಂದರು.
"
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿಕಲ್ಪದ ಆರಂಭ ಉತ್ತಮ ಬೆಳವಣಿಗೆ. ಈ ತೆರನಾದ ಕಾರ್ಯಕ್ರಮಗಳು ಸ್ಥಳೀಯ ಎಕೋಸಿಸ್ಟಮ್‌ಗೆ ಮಹತ್ವದ ಬದಲಾವಣೆ ತರುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಹೆಚ್ಚು ಮುತುವರ್ಜಿ ವಹಿಸಿದೆ.ಶರಣಬಸಪ್ಪ ಪಪ್ಪ,ಅಧ್ಯಕ್ಷ, ಕೆಕೆಸಿಸಿಐ ಕಲಬುರಗಿ.