ನಂತರ ಹಂತ ಹಂತವಾಗಿ ಬ್ಯಾಂಕ್ ಖಾತೆಗಳ ಮೂಲಕ 4,40,000 ರೂ. ಪಡೆದಿದ್ದಾಳೆ. ನಂತರ ಮನೆಯಲ್ಲಿ ಮದುವೆ ಬಗ್ಗೆ ಮಾತನಾಡಿದ್ದು, ದೊಡ್ಡ ಮೊತ್ತದ ಟ್ರೇಡಿಂಗ್ ಮಾಡೋಣ ಎಂದು ಹೇಳಿ, 50 ಲಕ್ಷ ರೂ. ಹೂಡಿಕೆ ಮಾಡಿ, ಲಾಭ ಮಾಡಿಕೊಂಡು ಮದುವೆ ಆಗೋಣ ಎಂದಿದ್ದಾಳೆ. ಅಷ್ಟು ದೊಡ್ಡ ಮೊತ್ತ ಇಲ್ಲ ಎಂದಾಗ ಕನಿಷ್ಠ 10 ಲಕ್ಷ ರೂ. ಬೇಡಿಕೆ ಇಟ್ಟು ಬೇರೆ ಬೇರೆ ಖಾತೆಗಳಿಂದ 11,00,000 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾಳೆ. ಟ್ರೇಡಿಂಗ್ ಅಕೌಂಟ್ನಲ್ಲಿ 10,583 ಕ್ರಿಪ್ಟೋ ಕರೆನ್ಸಿ ತೋರಿಸಿದ್ದಾರೆ. ನಂತರ ವೆಬ್ಸೈಟ್ಗಳು ಬಂದ್ ಆಗಿದ್ದು, ಶ್ರೀಷಾ ಶರ್ಮಾ ಮೊಬೈಲ್ ಕೂಡ ಸ್ವಿಚ್ ಆ್ ಆಗಿದ್ದು, ಮೋಸ ಹೋಗಿರುವುದು ತಿಳಿದು ಬಂದಿದೆ ಎಂದು ಸೈಬರ್ ಕ್ರೆೃಮ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.