ನೂರಾರು ಕಾರ್​ಗಳ ಬೃಹತ್​ ರ‍್ಯಾಲಿ: ಬಸವ ಮಿತ್ರ ಮಂಡಳಿ ಆಯೋಜನೆ

basava mitra mandalli
basava mitra mandalli
Published on
ಕಲಬುರಗಿ: ನಗರದಲ್ಲಿ ಬಸವ ಜಯಂತಿ ನಿಮಿತ್ತ ಬಸವ ಮಿತ್ರ ಮಂಡಳದಿಂದ ೧೨ನೇ ರ‍್ಷದ ಬೃಹತ್​ ಕಾರ್​ ರ‍್ಯಾಲಿ ಭಾನುವಾರ ಅದ್ದೂರಿಯಾಗಿ, ಸಡಗರ ಸಂಭ್ರಮದಿಂದ ನಡೆಯಿತು. ನಗರದ ಶ್ರೀ ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಪೂಜ್ಯ ಡಾ.ದೊಡ್ಡಪ್ಪ ಅಪ್ಪ ಚಾಲನೆ ನೀಡಿದರು. ೮೦೦ಕ್ಕೂ ಹೆಚ್ಚು ಕಾರ್​ಗಳು, ಜಿಪ್ಸಿಗಳು ಭಾಗವಹಿಸಿದ್ದವು.
ಶರಣಬಸವೇಶ್ವರ ದೇವಸ್ಥಾನದಿಂದ ಆರಂಭವಾದ ರ‍್ಯಾಲಿಯೂ ಆನಂದ ಹೊಟೇಲ್​ ವೃತ್ತ, ರ‍್ದಾರ್​ ವಲ್ಲಭಬಾಯಿ ಪಟೇಲ್​ ವೃತ್ತ, ಅನ್ನಪರ‍್ಣ ವೃತ್ತ ಮರ‍್ಗವಾಗಿ ಜಗತ್​ ವೃತ್ತ ತಲುಪಿತು. ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಮಾಲರ‍್ಪಣೆ ಮಾಡುವ ಮೂಲಕ ರ‍್ಯಾಲಿ ಸಂಪನ್ನಗೊಂಡಿತು. ಬಸವ ಮಿತ್ರ ಮಂಡಳದ ಷಟಸ್ಥಲದ ಚಿತ್ರ ಇರುವ, ಬಸವಣ್ಣನವರ ಭಾವಚಿತ್ರ ಇರುವ ಧ್ವಜಗಳನ್ನು, ಪೋಸ್ಟರ್​ಗಳನ್ನು ಅಳವಡಿಸಿದ ಕಾರ್​ಗಳಲ್ಲಿ ಕುಳಿತ ಯುವಕರು ಬಸವೇಶ್ವರರಿಗೆ ಜೈಕಾರ ಮೊಳಗಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net