ಗೃಹ ಸಚಿವ ಪ್ರಿಯಾಂಕ್​ ತವರಲ್ಲೇ ಲಂಚ ಪಡೆಯುತ್ತಿದ್ದ ಪೊಲೀಸ್​ ಲೋಕಾ ಬಲೆಗೆ?

lokayukth trap
lokayukth trap
Published on
ಕಲಬುರಗಿ: ಗೃಹ ಸಚಿವರಾಗಿ ಪ್ರಿಯಾಂಕ್​ ರ್ಖಗೆ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅವರದ್ದೇ ಸ್ವಜಿಲ್ಲೆಯ ಕಲಬುರಗಿ ನಗರದ ವ್ಯಾಪ್ತಿಯ ಸ್ಟೇಷನ್​ ಬಜಾರ್​ ಠಾಣೆಯಲ್ಲಿ ಪೋಕ್ಸೋ ಕೇಸ್​ನ್ನು ನಿಮ್ಮ ಪರವಾಗಿ ಆಗುವಂತೆ ನೋಡಿಕೊಳ್ಳುತ್ತೇವೆ ಎಂದು ಹಣಕ್ಕೆ ಬೇಡಿಕೆ ಇಟ್ಟ, ಪೇದೆಯೂ ಲೋಕಾಯುಕ್ತ ಬಲೆಗೆ ಬಿದ್ದ ಟನೆ ನಡೆದಿದೆ.
ಸ್ಟೇಷನ್​ ಬಜಾರ್​ ಠಾಣೆಯ ಕಾನ್ಸ್​ಟೇಬಲ್​ ಜ್ಯೋತಿ ಲೋಕಾಯುಕ್ತ ಬಲೆಗೆ ಬಿದ್ದ ಪೇದೆ. ಚಿಂದಿ ಆಯುವ ಮಹಿಳೆಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಲೈಂಗಿಕ ದೌರ್ಜನ್ಯ ಪೇಪರ್​ ಆಯುವ ಮಹಿಳೆಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಈ ಕುರಿತು ಸ್ಟೇಷನ್​ ಬಜಾರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಚಾರ್ಜ್​ಶೀಟ್​ ದಾಖಲಿಸುತ್ತಿದ್ದು, ಕೇಸ್​ ನಿಮ್ಮ ಪರವಾಗುವಂತೆ ಮಾಡಿಕೊಡುತ್ತೇವೆ ಎಂದು ಹಣಕ್ಕೆ ಪೊಲೀಸ್​ ಪೇದೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ಹಣ ಪಡೆಯುತ್ತಿದ್ದ ವೇಳೆ ಪೇದೆ ಜ್ಯೋತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಎಎಸ್​ಐ ಒಬ್ಬರು ಸ್ಟೇಷನ್​ನಿಂದ ಪರಾರಿಯಾಗಿದ್ದಾರೆ. ಲೋಕಾಯುಕ್ತ ಇನ್ಸ್​ಪೆಕ್ಟರ್​ ಅರುಣ ಮುರಗುಂಡಿ ತಂಡದಿಂದ ದಾಳಿ ನಡೆಸಿದ್ದು, ಪರಾರಿಯಾಗಿರುವ ಎಎಸ್​ಐಗಾಗಿ ಲೋಕಾಯುಕ್ತ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net