ಹಣದ ವ್ಯವಹಾರ ನಿರ್ವಹಣೆ ಅರ್ಥೈಸಿಕೊಳ್ಳಿ

ಗುಲ್ಬರ್ಗ ವಿವಿ ವಾಣಿಜ್ಯಶಾಸ್ತç ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಹಣಕಾಸು ಶಿಕ್ಷಣ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಸಂಪನ್ಮೂಲ ವ್ಯಕ್ತಿ ಡಾ.ಸಿ.ವಿಜಯನ್ ಅವರನ್ನು ವಿಭಾಗದ ಮುಖ್ಯಸ್ಥ ಪ್ರೊ.ರಾಜನಾಳಕರ್ ಲಕ್ಷö್ಮಣ ಸತ್ಕರಿಸಿದರು.
ಗುಲ್ಬರ್ಗ ವಿವಿ ವಾಣಿಜ್ಯಶಾಸ್ತç ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಹಣಕಾಸು ಶಿಕ್ಷಣ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಸಂಪನ್ಮೂಲ ವ್ಯಕ್ತಿ ಡಾ.ಸಿ.ವಿಜಯನ್ ಅವರನ್ನು ವಿಭಾಗದ ಮುಖ್ಯಸ್ಥ ಪ್ರೊ.ರಾಜನಾಳಕರ್ ಲಕ್ಷö್ಮಣ ಸತ್ಕರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಪನ್ಮೂಲ ವ್ಯಕ್ತಿ ಡಾ.ಸಿ.ವಿಜಯನ್ ಸಲಹೆ
  • ಗುಲ್ಬರ್ಗ ವಿವಿಯಲ್ಲಿ ಹಣಕಾಸು ಶಿಕ್ಷಣ ಕಾರ್ಯಾಗಾರ
ಕಲಬುರಗಿ: ಪ್ರಸ್ತುತ ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರದ ಅಗತ್ಯತೆ ಬೇಡಿಕೆ ಸೃಷ್ಠಿಸುತ್ತಿದೆ. ವಾಣಿಜ್ಯ ಮತ್ತು ಹಣಕಾಸು ಶಿಕ್ಷಣ ಸರಿಯಾಗಿ ಅರ್ಥೈಸಿಕೊಳ್ಳಬೇಕು. ವಾಸ್ತವವಾಗಿ ಯುವ ನಾಗರಿಕರು ಕ್ರೆಡಿಟ್ ಕಾರ್ಡ್ ಅತಿಯಾಗಿ ಬಳಕೆ ಮಾಡುತ್ತಿದ್ದು ಸಾಲ ಮತ್ತು ಬಡ್ಡಿ ವ್ಯವಹಾರ ಸರಿಯಾಗಿ ಖಚಿತಪಡಿಸಿಕೊಂಡು ಎಚ್ಚರಿಕೆಯಿಂದ ಮುನ್ನಡೆಯಬೇಕು ಎಂದು ರಾಷ್ಟಿçÃಯ ತರಬೇತಿದಾರ ಹಾಗೂ ಸಂಪನ್ಮೂಲ ವ್ಯಕ್ತಿ ಡಾ.ಸಿ.ವಿಜಯರಾವ್ ಸಲಹೆ ನೀಡಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತç ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಹಾಗೂ ರಾಷ್ಟಿçÃಯ ಷೇರು ಮಾರುಕಟ್ಟೆ ಸಂಸ್ಥೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಯುವ ನಾಗರಿಕರಿಗಾಗಿ ಹಣಕಾಸು ಶಿಕ್ಷಣ ಕುರಿತು ಎರಡು ದಿನಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕ್ರೆಡಿಟ್ ಕಾರ್ಡ್ ಬಳಕೆ ಮಾಹಿತಿ ಜತೆಗೆ ಹಣಕಾಸು ಸಾಲ ಒದಗಿಸುವ ಸಂಸ್ಥೆಗಳು ವ್ಯವಹಾರ ತಿಳಿವಳಿಕೆ ಅಗತ್ಯವಿದೆ. ಸಮಯವೆಂಬುದು ಯುವ ಸಮೂಹದ ದೊಡ್ಡ ಆಸ್ತಿ. ನಿಮ್ಮ ಹಣ ಉಳಿತಾಯ, ಷೇರು ಹಣದ ಸಂಯುಕ್ತ ಬಡ್ಡಿಯ ಸಣ್ಣ ಮೊತ್ತ ದೊಡ್ಡ ಮೊತ್ತವಾಗಿ ಬದುಕಿಗೆ ಆಸರೆಯಾಗಲಿದೆ. ಕೆಲ ಸಂಸ್ಥೆಗಳು ಯುವಕರನ್ನು ಆಕರ್ಷಿಸಿ ಸಾಲ ಒದಗಿಸಿ ಹೆಚ್ಚಿನ ಬಡ್ಡಿಯ ವಿಧಿಸುತ್ತಿವೆ. ಸುರಕ್ಷಿತ ಮತ್ತು ಮಾಹಿತಿಯುಕ್ತ ಹೂಡಿಕೆಗಳ ಒಳನೋಟ ವಿವರಿಸಿದರು. 
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ರಾಜನಾಳ್ಕರ್ ಲಕ್ಷö್ಮಣ್ ಪ್ರಾಸ್ತಾವಿಕ ಮಾತನಾಡಿ ಯುವ ನಾಗರಿಕರಿಗಾಗಿ, ಹಣದ ಶಿಕ್ಷಣ, ಹಣದ ನಿರ್ವಹಣೆ ಮತ್ತು ತರಬೇತಿಗಳಿಂದ ವರ್ತಮಾನದ ಹಣಕಾಸು ಮಾರುಕಟ್ಟೆ ಕುರಿತು ತಿಳಿವಳಿಕೆ ಮೂಡಿಸಿ ಭವಿಷ್ಯದ ಜೀವನಕ್ಕೆ ಮಾರ್ಗಸೂಚಿ ನೀಡುತ್ತವೆ. ಆರಂಭಿಕ ಬಜೆಟ್ ಮೂಲಕ ಉಳಿತಾಯ ಮಾಡುವುದು ಹೇಗೆ ಎಂಬುದನ್ನು ಕಲಿಯುವ ಮೂಲಕ ಹೆಚ್ಚಿನ ಬಡ್ಡಿ ಸಾಲದ ಹೊರೆ ಹೆಚ್ಚಾಗಿ ವೈಯಕ್ತಿಕ ಬೆಳವಣಿಗೆ ಸ್ಥಗಿತಗೊಳಿಸುತ್ತದೆ. ಜತೆಗೆ ಸಂಯುಕ್ತ ಬಡ್ಡಿಯ ಪ್ರಮುಖ ಪರಿಕಲ್ಪನೆಯನ್ನು ಕಲಿಸಿ ಯೌವನ ಕಾಲದಲ್ಲಿ ಮಾಡಿದ ಸಣ್ಣ ಮತ್ತು ಸ್ಥಿರ ಹೂಡಿಕೆ ಕಾಲಾನಂತರದಲ್ಲಿ ಹೇಗೆ ಘಾತೀಯವಾಗಿ ಬೆಳೆಯುತ್ತವೆ ಎಂದರು.
ಸAಶೋಧನಾ ವಿದ್ಯಾರ್ಥಿಗಳಾದ ಬಸವರಾಜ, ವಿಜಯಲಕ್ಷಿö್ಮÃ, ಪ್ರೇಮ್‌ಸಿಂಗ್, ಶಿವಾನಂದ್, ಮಹಾಂತೇಶ್, ಅನುತಾಮಸ್, ಶ್ರದ್ಧಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ವೈಷ್ಣವಿ, ದೌಲತ್ರಾಯ, ತೇಜಶ್ವಿನಿ ಮತ್ತು ಸಾಯಿರಾಜ ಪ್ರತಿಕ್ರಿಯಿಸಿದರು. ಅತಿಥಿ ಉಪನ್ಯಾಸಕಿ ಡಾ.ರೂಪಶ್ರೀ ಸ್ವಾಗತಿಸಿ, ವಂದಿಸಿದರು. ವಿಜಯಲಕ್ಷಿö್ಮÃ ನಿರೂಪಿಸಿದರು.
"

ಷೇರು ಮಾರುಕಟ್ಟೆ ಮಾಹಿತಿ ಮತ್ತು ಹಣದ ನಿರ್ವಹಣೆ ಜ್ಞಾನವು ಜೀವನದ ತುರ್ತು ಪರಿಸ್ಥಿತಿ ನಿಭಾಯಿಸಲು, ಸಕಾಲದಲ್ಲಿ ತಿಳಿವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳಲು ಅಗತ್ಯ ಆತ್ಮವಿಶ್ವಾಸ ಬೆಳೆಸಿ ದೀರ್ಘಾವಧಿಯ ಸ್ಥಿರತೆ ಮತ್ತು ಸ್ವಾತಂತ್ರÈ ಖಚಿತಪಡಿಸುತ್ತದೆ. 

ಪ್ರೊ.ರಾಜನಾಳಕರ್ ಲಕ್ಷö್ಮಣ,ಮುಖ್ಯಸ್ಥ, ವಾಣಿಜ್ಯಶಾಸ್ತç ವಿಭಾಗ, ಗುಲ್ಬರ್ಗ ವಿವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net