ಗ್ರಾಮೀಣ ಕಲೆ ಉಳಿಸಿ, ಬೆಳೆಸುವುದು ಜರೂರಿ

ಕಲಬುರಗಿಯಲ್ಲಿ ಆಯೋಜಿಸಿದ್ದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಶಾಸಕ ಅಲ್ಲಮಪ್ರಭು ಪಾಟೀಲ್, ಡಾ.ಹನುಮಂತರಾವ್ ದೊಡ್ಡಮನಿ, ಡಾ.ಎಸ್.ಬಾಲಾಜಿ, ಎಂ.ಬಿ.ನಿAಗಪ್ಪ ಇತರರಿದ್ದರು.
ಕಲಬುರಗಿಯಲ್ಲಿ ಆಯೋಜಿಸಿದ್ದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಶಾಸಕ ಅಲ್ಲಮಪ್ರಭು ಪಾಟೀಲ್, ಡಾ.ಹನುಮಂತರಾವ್ ದೊಡ್ಡಮನಿ, ಡಾ.ಎಸ್.ಬಾಲಾಜಿ, ಎಂ.ಬಿ.ನಿAಗಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಲ್ಲಮಪ್ರಭು ಪಾಟೀಲ್ ಕಳಕಳಿ
  • ಕನ್ನಡ ಜಾನಪದ ಪರಿಷತ್ ದಶಮಾನೋತ್ಸವ
ಕಲಬುರಗಿ: ಇಂದಿನ ಕಂಪ್ಯೂಟರ್ ಯುಗದಲ್ಲಿ ಜಾನಪದ ಕಲೆ ಉಳಿಸಿ, ಬೆಳೆಸಬೇಕಾದ ಅಗತ್ಯವಿದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲï ಹೇಳಿದರು.
ಕನ್ನಡ ಭವನದಲ್ಲಿ ಕನ್ನಡ ಜಾನಪದ ಪರಿಷತ್‌ನಿಂದ ಗುರುವಾರ ಆಯೋಜಿಸಿದ್ದ ದಶಮಾನೋತ್ಸವ ಸಂಭ್ರಮ, ಪ್ರಶಸ್ತಿ ಪ್ರದಾನ, ಪದಾಧಿಕಾರಿಗಳ ಪದ ಪ್ರದಾನ ಹಾಗೂ ಕಲಾವಿದರಿಂದ ಸಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಕಲೆ ನಮ್ಮ ಸಂಸ್ಕೃತಿಯ ಬೇರು, ಇದನ್ನು ಉಳಿಸಿ ಬೆಳೆಸುವುದು ಇಂದಿನ ತುರ್ತು ಅಗತ್ಯ. ಮೊಬೈಲï ಮತ್ತು ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ಜಾನಪದ ಗೀತೆ, ನಾಟಕ, ಬಯಲಾಟ, ತೊಗಲುಗೊಂಬೆ, ಸುಗ್ಗಿ ಕುಣಿತಗಳಂತಹ ಕಲೆಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕಿದೆ ಎಂದರು.
ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮ ಉಡುಗೆ-ತೊಡುಗೆ, ಮಾತುಕತೆ, ಜನಪದ ಕಲೆ ಮತ್ತು ಸಾಹಿತ್ಯ ಪ್ರೀತಿಸಿ ಗೌರವಿಸಬೇಕು. ಜಾನಪದ ಕಲೆಯು ನಮ್ಮ ನಾಡಿನ ಆತ್ಮವಾಗಿದ್ದು, ಅದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಸ್.ಬಾಲಾಜಿ ಮಾತನಾಡಿ, ಅಶ್ಲೀಲ ಶಬ್ದಗಳ ಬಳಕೆಯ ಮೂಲಕ ಮೂಲ ಜಾನಪದಕ್ಕೆ ಧಕ್ಕೆ ಬರಬಾರದು. ಜಾನಪದ ಕಲಾವಿದರಿಗೆ 5 ಸಾವಿರ ರೂ.ಮಾಸಾಶನ ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು. ಜಿ¯್ಲÁ ಘಟಕದಿಂದ ಸಮ್ಮೇಳನ ನಡೆಸಬೇಕು ಎಂದು ಸೂಚನೆ ನೀಡಿದರು.
ಪ್ರಮುಖರಾದ ಅಲ್ಲಮಪ್ರಭು ದೇಶಮುಖ, ಪ್ರಭವ ಕೆ.ಪಟ್ಟಣಕರ್, ಮಲ್ಲಿಕಾರ್ಜುನ ತಳವಾರ, ಎಚ್.ಬಿ.ಪಾಟೀಲï, ಶರಣಪ್ಪ ತೋರಣಕಲï ಇತರರಿದ್ದರು. ಜಾನಪದ ತಜ್ಞ ಡಾ.ಹನುಮಂತರಾವ ದೊಡ್ಡಮನಿ ಜಾಪನದ ಕಲೆ ಅಳಿವು-ಉಳಿವು ಕುರಿತು ಉಪನ್ಯಾಸ ನೀಡಿದರು. ಜಿ¯್ಲÁಧ್ಯP್ಷÀ ಎಂ.ಬಿ.ನಿAಗಪ್ಪ ಅಧ್ಯP್ಷÀತೆ ವಹಿಸಿದ್ದರು.

ಸಾಧಕರಿಗೆ ಪ್ರಶಸ್ತಿ

ವಿವಿಧ ಕ್ಷೇತ್ರದ ಸಾಧಕರಾದ ಎ.ಕೆ.ರಾಮೇಶ್ವರ, ಡಾ.ಸ್ವಾಮಿರಾವ ಕುಲಕರ್ಣಿ, ಡಾ.ಶ್ರೀಶೈಲ ನಾಗರಾಳ, ಡಾ.ಚಿ.ಸಿ.ಲಿಂಗಣ್ಣ, ಪ್ರೊ.ಶೋಭಾದೇವಿ ಚೆಕ್ಕಿ, ಡಾ.ವಾಸುದೇವ ಸೇಡಂ, ಮಕ್ಸೂದ್ ಅಫಜಲï ಜಾಹಾಗೀರ್‌ದಾರ್, ಡಾ.ಶರಣಪ್ಪ ಮಾಳಗೆ ಅವರಿಗೆ ದಶಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಂದ್ರಕಾAತ ಗದಗಿ, ಬಸವರಾಜ ಕೋನೆಕ, ಡಾ.ಚನ್ನವೀರ ಪಾಟೀಲï, ಸುಭಾಷಚಂದ್ರ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net