8.28 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

jewellery stolen
jewellery stolen
Published on
ಕಲಬುರಗಿ: ಗೋದುತಾಯಿ ನಗರದಲ್ಲಿ ಹಗಲು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಕೀಲಿ ಮುರಿದು ೮.೨೮ ಲಕ್ಷ ರೂ. ಮೌಲ್ಯದ ಕಳ್ಳತನ ಮಾಡಿದ ಟನೆ ಜೂ.೨೫ರಂದು ನಡೆದಿದೆ.
ಗೋದುತಾಯಿ ನಗರದ ಲತಾ ನಾಗೇಶ ಯಾದಗಿರ ಅವರ ಮನೆ ಕಳ್ಳತನವಾಗಿದೆ. ಜೂ.೨೫ರಂದು ಮಧ್ಯಾಹ್ನ ೧೨ ಗಂಟೆಗೆ ಮನೆಗೆ ಬೀಗ ಹಾಕಿ ಗೆಳತಿಯ ಮನೆಗೆ ಹೋಗಿದ್ದರು. ಸಂಜೆ ೪ಕ್ಕೆ ಮರಳಿದಾಗ ಬಾಗಿಲಿನ ಕೊಂಡಿ ಮುರಿದಿರುವುದು ಕಂಡುಬಂದಿದೆ. ಒಳಗೆ ಬಂದು ನೋಡಿದಾಗ ಬೆಡ್​ ರೂಮ್​ನ ಅಲ್ಮೇರಾ ಹಾಗೂ ಅದರ ಸೇಫ್ಟಿ ಲಾಕರ್​ ಮುರಿದು ೮,೨೮,೫೦೦ ರೂ. ಮೌಲ್ಯದ ೫೦ ಗ್ರಾಂ ಚಿನ್ನದ ಮಂಗಳಸೂತ್ರ, ೫೦ ಗ್ರಾಂ ಚಿನ್ನದ ಬಳೆಗಳು, ಚಿನ್ನದ ನೆಕ್ಲೇಸ್​ಗಳು, ಚೈನ್​, ಉಂಗುರಗಳು, ಕಿವಿಯೋಲೆಗಳು ಹಾಗೂ ಬೆಳ್ಳಿಯ ಆಭರಣಗಳ ಜತೆಗೆ ೯,೫೦೦ ರೂ. ನಗದು ಹಣ ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಶೋಕ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net