ಕಲಬುರಗಿ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತರಲ್ಲಿ ಪಂಚಮಸಾಲಿ ಸಮಾಜ ದೊಡ್ಡದ್ದಾಗಿದ್ದು, ಮೂವರು ಶಾಸಕರಿದ್ದರೂ ಒಬ್ಬರಿಗೂ ಸ್ಥಾನ, ಮಾನ ದೊರೆಯದಿರುವುದು ಖೇದಕರ. ಕಾಂಗ್ರೆಸ್ಗೆ ಸಮಾಜದ ಕೊಡುಗೆ ಅಪಾರ ಇದೆ. ಎಸ್ಕೆ ಕಾಂತಾ, ವೈಜನಾಥ ಪಾಟೀಲ್ ನಂತರ ಸಮಾಜಕ್ಕೆ ಯಾರೂ ಪ್ರಾತಿನಿಧ್ಯ ನೀಡಿಲ್ಲ. ಈಗಲಾದರೂ ಸ್ಪಂದಿಸಿ, ಸಚಿವ ಸ್ಥಾನ ನೀಡಬೇಕು.