ಅಕ್ರಮ ಗಣಿಗಾರಿಕೆಗೆ ಬಾಲಕ ಬಲಿ: ವಾಡಿ ಬಳಿಯ ಡಿಗ್ಗಿ ತಾಂಡಾದಲ್ಲಿ ಅಕ್ರಮ ಗಣಿಗಾರಿಕೆಗಾಗಿ ತೋಡಿದ್ದ ಹೊಂಡದಲ್ಲಿ ಬಿದ್ದು, ಯುವಕ ಮೃತಪಟ್ಟಿದ್ದಾನೆ. ತಹಸೀಲ್ದಾರ್, ಪೊಲೀಸರು ಅಕ್ರಮ ಗಣಿಗಾರಿಕೆ ದಾಖಲೆ ನೀಡುತ್ತಿಲ್ಲ. ಅಕ್ರಮ ಗಣಿಗಾರಿಕೆ ತಡೆಯಿರಿ ಎಂದು ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದ ಜಿಲ್ಲಾಧಿಕಾರಿ, ತಹಸೀಲ್ದಾರ್, ಪೊಲೀಸರೇ ಸಾವಿಗೆ ಕಾರಣರಾಗಿದ್ದು, ಅವರ ವಿರುದ್ಧವೇ ಎ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು. ಬಾಲಕನ ಸಾವಿನ ನಂತರ ಪೊಲೀಸರು ಮನುಷ್ಯತ್ವ ಮೀರಿ ವರ್ತಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಮಮತಾ ಮಾದರಿಯಲ್ಲಿ ಚಿತ್ತಾಪುರದಲ್ಲಿ ಅಂಧಾ ದರ್ಬಾರ್, ದೌರ್ಜನ್ಯ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಬೀಳಲಿದೆ ಎಂದರು.