ಪರಸ್ಪರ ಇಬ್ಬರು 15 ವರ್ಷದಿಂದ ಪರಿಚಯರಿದ್ದಾರೆ. 2023 ಅ.20ರಂದು ಅಬ್ದುಲ್ ಸತ್ತಾರ ಮನೆಗೆ ಬಂದಿದ್ದ ಸೈಯದ್, ಶಮಿದಾಬಾನು ಅವರು ನಮಗೆ ಕೂಡಾದಲ್ಲಿ ಪರಿಚಯದ ಅಧಿಕಾರಿಗಳಿದ್ದು, ಸರ್ದಾರ್ ವಲ್ಲಭಬಾಯಿ ಪಟೇಲ್ ಯೋಜನೆ ಹಂತ&1ರ ಸರ್ವೇ 126ರಲ್ಲಿ 35 ಲಕ್ಷ ರೂ.ಗೆ ನಿವೇಶನ ಕೊಡಿಸುವುದಾಗಿ ನಂಬಿಸಿದ್ದಾರೆ. ನಂತರ ಹಂತ ಹಂತವಾಗಿ 2023ರಿಂದ 2025ರವರೆಗೆ ಚೆಕ್, ಆರ್ಟಿಜಿಎಸ್ ಮೂಲಕ 35 ಲಕ್ಷ ರೂ. ನೀಡಿದ್ದಾರೆ. ಹಣ ನೀಡಿದ ನಂತರ ನಿವೇಶನ ಕೊಡಿಸಿ ಎಂದು ಕೇಳಿದಾಗ ಇಂದು, ನಾಳೆ ಎಂದು ದಿನದೂಡಿದ್ದಾರೆ. ಈ ಮಧ್ಯೆ ಕೂಡಾ ಕಚೇರಿಗೆ ಭೇಟಿ ನೀಡಿ 126ರಲ್ಲಿ ನಿವೇಶನದ ಬಗ್ಗೆ ಪರಿಶೀಲಿಸಿದಾಗ ಅಲ್ಲಿ ಯಾವುದೇ ನಿವೇಶನವಿಲ್ಲ ಎಂದು ತಿಳಿದು ಬಂದಿದ್ದು, ಮೋಸಕ್ಕೆ ಈಡಾಗಿದ್ದು ಗೊತ್ತಾಗಿದೆ ಎಂದು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.