ಚಿಂಚೋಳಿ: ತಾಲೂಕಿನ ಹೂಡದಳ್ಳಿ ಗ್ರಾಮದ ಜನ ಹಾಗೂ ರೈತರ ಜೀವನಾಡಿಯಾಗಿರುವ ಹೂಡದಳ್ಳಿ ಕೆರೆ ಈಗ ತೀವ್ರ ನಿರ್ಲಕ್ಷಕ್ಕೆ ಒಳಗಾಗಿದ್ದು, ದಿನೇ ದಿನೇ ಅಪಾಯದ ಮುನ್ಸೂಚನೆ ನೀಡುತ್ತಿದೆ. ಕೆರೆಯ ಏರಿ ( ಬಂಡ) ಕೆಳಭಾಗದಲ್ಲಿ ಬೃಹತ್ ಕಂದಕ ಬಿದ್ದಿದ್ದು, ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಸೋರಿಕೆಯಾಗುತ್ತಿದೆ. ಕೆರೆಯ ಏರಿಯುದ್ದಕ್ಕೂ ಬೃಹತ್ ಗಿಡಗಂಟಿಗಳು ಬೆಳೆದು ನಿಂತಿದ್ದು, ಕೆರೆಯ ಅಸ್ಥಿತ್ವಕ್ಕೆ ಧಕ್ಕೆ ತರುತ್ತಿದೆ.