ಸಾವಿನಲ್ಲೂ ಸಾರ್ಥಕ್ಯ, ಅಣವೀರಪ್ಪ ಸಿ ಬಳ್ಳಾ ನಿಧನ, ಎಂಆರ್ ಎಂಸಿಗೆ ದೇಹದಾನ
Body doner
Published on:
Copied
Follow Us
ಕಲಬುರಗಿ: ನಗರದ ಲಾಲ್ ಗೇರಿ ಕ್ರಾಸ್ ಸಮೀಪದ ಕಲ್ಯಾಣ ನಗರದ ನಿವಾಸಿ, ನಿವೃತ್ತ ಉಪ ತಹಸೀಲ್ದಾರ್ ಅಣವೀರಪ್ಪ ಬಳ್ಳಾ (84) ಬುಧವಾರ ನಿಧನ ಹೊಂದಿದರು. ಮೃತರ ನಿರ್ಧಾರದಂತೆ ಎಂಆರ್ ಎಂಸಿ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಕುಟುಂಬಸ್ಥರು ನಿರ್ಣಯಿಸಿದ್ದಾರೆ.
ವಿಜಯವಾಣಿ ಜಾಹೀರಾತು ಅಸಿಸ್ಟೆಂಟ್ ಮ್ಯಾನೇಜರ್ ರಮೇಶ ಬಳ್ಳಾ ಸೇರಿದಂತೆ ಇಬ್ಬರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಳಗ ಅಗಲಿದ್ದಾರೆ.
ಗುರುವಾರ ಮಧ್ಯಾಹ್ನ 1ಗಂಟೆ ನಂತರ ಎಂಆರ್ ಎಂಸಿ ಕಾಲೇಜಿಗೆ ದೇಹ ಹಸ್ತಾಂತರ ಪ್ರಕ್ರಿಯೆ ನಡೆಯಲಿದ್ದು, ಮೃತರ ಸ್ವಗ್ರಹದಲ್ಲಿ ಗುರುವಾರ ಮಧ್ಯಾಹ್ನ 1ಗಂಟೆವರೆಗೆ ಪಾರ್ಥೀವ ಶರೀರದ ದರ್ಶನ ಇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.