ಡ್ರಗ್ಸ್​ ನಿರ್ಮೂಲನೆ ಸರ್ವರ ಜವಾಬ್ದಾರಿ

drug free kalaburagi
drug free kalaburagi
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಶರಣಪ್ಪ ಎಸ್​.ಡಿ. ಹೇಳಿಕೆ
  • ಮಾದಕ ವಿರೋಧಿ ದಿನ, ಬೃಹತ್​ ವಾಕ್​ಥಾನ್​
ಕಲಬುರಗಿ: ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ದೇಹ ಮಾತ್ರವಲ್ಲ, ಆತನ ಕುಟುಂಬ, ಸಮಾಜ, ರಾಷ್ಟ್ರದ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದರ ವಿರುದ್ಧ ಹೋರಾಟವೂ ಪ್ರತಿಯೊಬ್ಬರ ಜವಾಬ್ದಾರಿ ಎಂದು ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ.ಹೇಳಿದರು.
ವಿಶ್ವ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಮಾದಕ ವಸ್ತು ಕಳ್ಳ ಸಾಗಣೆ ವಿರೋಧಿ ದಿನದ ನಿಮಿತ್ತ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಬೃಹತ್​ ವಾಕ್​ಥಾನ್​ಗೆ ಚಾಲನೆ ನೀಡಿ ಮಾತನಾಡಿ, ಹಿಂದೆ ಡ್ರಗ್ಸ್​, ಗಾಂಜಾ ಮಾರಾಟಗಾರರ ವಿರುದ್ಧ ಮಾತ್ರ ಕೇಸ್​ ದಾಖಲಿಸಲಾಗುತ್ತಿತ್ತು. ಪ್ರಸ್ತುತ ಡ್ರಗ್ಸ್​, ಗಾಂಜಾ ಸೇವಿಸಿದರೂ ಕೇಸ್​ ದಾಖಲಿಸಲಾಗುತ್ತಿದೆ ಎಂದರು.
ಮಾದಕ ನಿಯಂತ್ರಣವೂ ಕೇವಲ ಪೊಲೀಸರ ಜವಾಬ್ದಾರಿಯಲ್ಲ. ಪೂರ್ಣ ನಿಮೂರ್ಲನೆಗೆ ಶಿಕ್ಷಕರು, ಸಮಾಜ ಸೇವಕರು, ಸಂಟಕರು, ಮಾಧ್ಯಮದವರು ಸೇರಿ ಎಲ್ಲರೂ ಕೈ ಜೋಡಿಸಿ, ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಪರಿವರ್ತನೆ ಸಾಧ್ಯ. ಅನುಮಾನಾಸ್ಪದ ಮಾರಾಟ, ಸೇವನೆ ಕಂಡು ಬಂದ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು ಎಂದು ಹೇಳಿದರು.
ಡಿಸಿಪಿ ಶಾಲೂ ಮಾತನಾಡಿ, ಮಾದಕ ಸೇವನೆಯಿಂದ ಮನಸ್ಸು, ದೇಹದ ಆರೋಗ್ಯ ಹದಗೆಡುತ್ತದೆ. ಪೊಲೀಸರಿಂದ ತಡೆ ಮಾತ್ರವಲ್ಲ ಜಾಗೃತಿ ಮೂಡಿಸಲಾಗುತ್ತಿದೆ. ಜಾಗೃತಿಗಾಗಿ ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಾದಕದಿಂದ ಕುಟುಂಬದ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಅಪರಾಧಗಳು ಹೆಚ್ಚುತ್ತವೆ. ನಿಯಂತ್ರಣದಲ್ಲಿ ಇರಬೇಕು ಎಂದರು.
ಎಸ್​ಪಿ ಅಡ್ಡೂರು ಶ್ರೀನಿವಾಸುಲು ಮಾತನಾಡಿದರು. ಡಿಸಿಪಿ ಪ್ರವಿಣ ನಾಯಕ, ಎಎಸ್​ಪಿ ಮಹೇಶ ಮೇಣ್ಣನವರ, ಎಸಿಪಿಗಳಾದ ಶರಣಪ್ಪ ಸುಬೇದಾರ, ಬಸವೇಶ್ವರ ಹೀರಾ, ಜೇಮ್ಸ್​ ಮಿನೇಜಸ್​, ಸುಧಾ ಹಾದಿ, ಎಚ್​.ಎಂ.ಡಿ.ಸರ್ದಾರ್​, ಚನ್ನಬಸವ, ಅಧಿಕಾರಿಗಳಾದ ಗುರುಪಾಟೀಲ್​, ಮಹಾಂತೇಶ ಪಾಟೀಲ್​, ಸುಶೀಲಕುಮಾರ, ನಟರಾಜ ಲಾಡೆ, ಚಂದ್ರಶೇಖರ ತಿಗಡಿ, ಅರುಣಕುಮಾರ, ಕುಬೇರ ರಾಯಮಾನೆ, ಹುಸೇನ ಭಾಷಾ, ಖಾಜಾ ಹುಸೇನ್​, ಶಕೀಲ ಅಂಗಡಿ, ಮಹಾದೇವ ಪಾಟೀಲ್​, ಸತೀಶ ಕಣಮೇಶ್ವರ, ಮಲ್ಲಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net