ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಯೋಗದಲ್ಲಿ ಎಂಎಸ್ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಸಭಾಂಗಣದಲ್ಲಿ ಪರಿಸರ, ಸಾಮಾಜಿಕ ನಿರ್ವಹಣೆ ಜಾಗೃತಿ ಕಾರ್ಯಾಗಾರಕ್ಕೆ ಜಿಪಂ ಸಿಇಒ ಭಂವರ್ಸಿಂಗ್ ಮೀನಾ ಚಾಲನೆ ನೀಡಿದರು. ಅಬ್ದುಲ್ ಅಜೀಂ, ರವಿಗೌಡ ಇತರರಿದ್ದರು.
ಕಲಬುರಗಿ: ಮೈಕ್ರೋ ಸ್ಮಾಲ್ ಆ್ಯಂಡ್ ಮೀಡಿಯಂ ಎಂಟರಪೆಸಸ್ ಎಂಎಸ್ಎಂಇಗಳ ಸುಸ್ಥಿರ ಸಾಮಾಜಿಕ ಬೆಳವಣಿಗೆಗೆ ಪರಿಸರ ಮತ್ತು ನಿರ್ವಹಣೆ ಅನಿವಾರ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರಸಿಂಗ್ ಮೀನಾ ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಯೋಗದಲ್ಲಿ ಎಂಎಸ್ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಸಭಾಂಗಣದಲ್ಲಿ ವಿಶ್ವ ಬ್ಯಾಂಕ್ ನೆರವಿನ ಯೋಜನೆಯಡಿ ಒಂದು ದಿನದ ಪರಿಸರ ಮತ್ತು ಸಾಮಾಜಿಕ ನಿರ್ವಹಣೆ ಜಾಗೃತಿ ಕಾರ್ಯಾಗಾರಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಎಂಎಸ್ಎಂಇಗಳ ಸ್ಪರ್ಧಾತ್ಮಕತೆ ಹೆಚ್ಚಿಸುವ ಮೂಲಕ, ಮಾರುಕಟ್ಟೆ ಅವಕಾಶ ಮತ್ತು ಸಾಲದ ಪ್ರವೇಶ ಸುಧಾರಿಸುವ, ನಾವೀನ್ಯತೆ ಬೆಳೆಸುವ, ಹೊಸ ತಂತ್ರಜ್ಞಾನ ಅಳವಡಿಕೆ ಉತ್ತೇಜಿಸುವ ಮೂಲಕ ಬಲಪಡಿಸುವುದಾಗಿದೆ. ಎಂಎಸ್ಎಂಇಗಳು ಎದುರಿಸುತ್ತಿರುವ ಸವಾಲು ಪರಿಹರಿಸಲು ಮತ್ತು ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಅವುಗಳ ಏಕೀಕರಣ ಬೆಂಬಲಿಸಲು ಪ್ರಯತ್ನಿಸುತ್ತದೆ ಎಂದರು.
ಈ ಕಾರ್ಯಕ್ರಮವು ಎಂಎಸ್ಎಂಇಗಳಿಗೆ ಮಾರ್ಗದರ್ಶನ, ನೆಟ್ವರ್ಕಿಂಗ್ ಮತ್ತು ಬಂಡವಾಳ ನೆರವು ನೀಡುತ್ತದೆ. ಈ ಕಾರ್ಯಾಗಾರವನ್ನು ಮಹಿಳಾ ಉದ್ದಿಮೆದಾರರು ಮತ್ತು ಮಹತ್ವಾಕಾಂ ಉದ್ದಿಮೆದಾರರಿಗೆ ಪರಿಸರ ಮತ್ತು ಸಾಮಾಜಿಕ ನಿರ್ವಹಣೆ ಅಂಶಗಳ ಕುರಿತು ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಲಬುರಗಿಯ ಎಸ್ಬಿಐ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ರವಿಗೌಡ ಮಾತನಾಡಿ, ಪ್ರಸ್ತುತ ಸಮಾಜವನ್ನು ದೆಹಲಿಯ ರೀತಿಯಲ್ಲಿ ಅನೈರ್ಮಲ್ಯ ಮಾಡದೇ ಕಸವನ್ನು ಹಸಿ, ಒಣ ಕಸವಾಗಿ ಬೇರ್ಪಡಿಸುವುದರಿಂದ ಅದನ್ನು ಟ್ರೀಟ್ಮೆಂಟ್ ನೀಡಿ ರಿಸೈಕಲಿಂಗ್ ಮಾಡುವುದರಿಂದ ಸ್ವಚ್ಛತೆ, ಮಾಲಿನ್ಯ ಹಾಗೂ ಪರಿಸರ ಉಳಿಸಲು ಸಹಕಾರಿಯಾಗುವುದು ಎಂದರು.
ನೀವು ಮಾಡುವ ಉದ್ಯೋಗ ಪರಿಸರಸ್ನೇಹಿಯಾಗಿರಬೇಕು. ಎಲೆಕ್ಟ್ರಿಕಲ್ ವಾಹನ ಹೆಚ್ಚಾಗಿ ಬಳಸಬೇಕು, ಇದಕ್ಕೆ ಸರ್ಕಾರ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಂ ಮಾತನಾಡಿದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಶಾರದಾ ಬಿ.ಎಚ್ ಮಾತನಾಡಿ, ಕೈಗಾರಿಕಾ ಪ್ರಗತಿ ಎಂದರೆ ಕೇವಲ ಯಂತ್ರಗಳ ಸ್ಥಾಪನೆಯಲ್ಲ. ಪ್ರಕೃತಿ ಮತ್ತು ಸಮಾಜದೊಂದಿಗೆ ಹೊಂದಾಣಿಕೆಯಿಂದ ಇರಬೇಕು. ಪರಿಸರ ಜವಾಬ್ದಾರಿ ನೈಸರ್ಗಿಕ ಸಂಪನ್ಮೂಲ ಬಳಕೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು. ಸಾಮಾಜಿಕ ಕಳಕಳಿ ಅರಿವತು ಕಾರ್ಮಿಕರ ಸುರಕ್ಷತೆ ಬಗ್ಗೆ ಕೆಲಸದ ಉತ್ತಮ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬ ಉದ್ಯಮಿಯ ಕರ್ತವ್ಯ ಎಂದು ಹೇಳಿದರು.
ದೇವರಾಜ ಆಹಾರ ಸುರಕ್ಷತೆ ಬಗ್ಗೆ, ಶಾರದಾ ಬಿ.ಹೆಚ್ ಪರಿಸರ ಮಾಲಿನ್ಯ ತಡೆಗಟ್ಟುವಿಕೆ ಬಗ್ಗೆ ಉಪನ್ಯಾಸ ನೀಡಿದರು. ಬಿ.ಎಸ್. ಜವಳಗಿ, ರೇಖಾ ಮ್ಯಾಗೇರಿ, ಸಯ್ಯದ್ ಅಶ್ಫಾಕ್ ಅಹ್ಮದ್, ಜಾಫರ್ ಖಾಸಿಮ್ ಅನ್ಸಾರಿ ಸೇರಿ ಸುಮಾರು 120 ಎಂಎಸ್ಎಂಇ ಉದ್ದಿಮೆದಾರರು ಹಾಜರಿದ್ದರು.
"
ಗೃಹ ಉದ್ಯೋಗ, ಮೈಕ್ರೊ ಇಂಡಸ್ಟ್ರೀಸ್ ಯಾವುದೇ ಮಾಡಿದರೂ ನಮ್ಮ ಪರಿಸರ ಕಾಪಾಡಿಕೊಂಡು, ನೀರು ಮಿತವಾಗಿ ಬಳಸಿ, ಮಾಲಿನ್ಯ ಕಾಪಾಡಿಕೊಳ್ಳಬೇಕು. ಜನರಿಗೆ ತೊಂದರೆಯಾಗದಂತೆ ಕೈಗಾರಿಕೆ ನಡೆಸಬೇಕು.