ವಾಹನ ಚಾಲಕರೇ ಎಚ್ಚರ: ಕಲಬುರಗಿಯಲ್ಲಿನ್ನು ಸಿಸಿ ನಿಗಾದಲ್ಲಿ ಸಂಚಾರ: ದಂಡ ನಿಶ್ಚಿತ

ITMS kalaburagi city police
ITMS kalaburagi city police
Published on
ಕಲಬುರಗಿ: ನಗರ ಪೊಲೀಸ್​ ಆಯುಕ್ತಾಲಯದಿಂದ ಸಂಚಾರ ನಿಯಂತ್ರಣ, ಸಂಚಾರ ನಿಯಮಗಳ ಪಾಲನೆ, ಅಪಘಾತಗಳ ತಡೆಗಾಗಿ ಅಳವಡಿಸಿರುವ ಸಿಸಿ ಕ್ಯಾಮೆರಾ, ಎಐ ಕ್ಯಾಮೆರಾ ಆಧಾರಿತ ಸ್ವಯಂ ಚಾಲಿತ ನಿಯಮ ನಿಗಾ ತಂತ್ರಾಂಶದಲ್ಲಿ ನಗರದಲ್ಲಿ ಒಂದೇ ದಿನ (ಏ.29ರಂದು) 30 ಸಾವಿರ ಸಂಚಾರ ನಿಯಮ ಉಲ್ಲಂನೆ ಕೇಸ್​ ಪತ್ತೆಯಾಗಿದ್ದು, ದಂಡ ನಿಶ್ಚಿತ ಎಂದು ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ ತಿಳಿಸಿದರು.
ನಗರದ 58 ಸ್ಥಳದಲ್ಲಿ 180 ಕ್ಯಾಮೆರಾಗಳನ್ನು ಅಳವಡಿಸಿದ್ದು, ಎಐ ಆಧಾರಿತ ಕ್ಯಾಮೆರಾ ಅಳವಡಿಸಿದ್ದು, ಏ.29ರಂದು ಪ್ರಾಯೋಗಿಕ ಚಾಲನೆ ನೀಡಿದ್ದು, ಒಂದೇ ದಿನ 30 ಸಾವಿರ ಸಂಚಾರಿ ನಿಯಮ ಉಲ್ಲಂನೆಯ ಕೇಸ್​ ಪತ್ತೆಯಾಗಿವೆ. ಸೀಟ್​ ಬೆಲ್ಟ್​ ಇಲ್ಲದೇ ಪ್ರಯಾಣದ 6323 ಕೇಸ್​, ಮೊಬೈಲ್​ನಲ್ಲಿ ಮಾತನಾಡುತ್ತ ಚಾಲನೆ 11 ಕೇಸ್​, ಹೆಲ್ಮೆಟ್​ ಇಲ್ಲದೆ ಸಂಚಾರ 25,526, ಬೈಕ್​ ಮೇಲೆ ಮೂವರ ಸಂಚಾರ 158 ಕೇಸ್​ ಪತ್ತೆಯಾಗಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಐಟಿಎಂಎಸ್​ ತಂತ್ರಜ್ಞಾನ ಆಧಾರಿತ ಸಂಚಾರ ನಿಯಂತ್ರಣ ವ್ಯವಸ್ಥೆಯಾಗಿದ್ದು, ಹೆಲ್ಮೆಟ್​ ಧರಿಸದಿರುವುದು, ಟ್ರಿಪಲ್​ ರೈಡಿಂಗ್​, ಚಾಲನೆ ವೇಳೆ ಮೊಬೈಲ್​ ಬಳಕೆ, ಸೀಟ್​ ಬೆಲ್ಟ್​ ಧರಿಸದಿರುವುದು, ನೋ ಪಾರ್ಕಿಂಗ್​, ಎನ್​ಪಿಆರ್​, ಮುಖ ಗುರುತಿಸುವಿಕೆ, ಲೈನ್​ ಕ್ರಾಸಿಂಗ್​ ಸೇರಿ ನಿಯಮ ಉಲ್ಲಂಘಿಸಿದರಿಗೆ ದಂಡ ನಿಶ್ಚಿತವಾಗಿ ಬೀಳಲಿದೆ ಎಂದು ಹೇಳಿದರು.
ಅಪರಾಧ ತಡೆಗೆ ಬಲ: ಐಟಿಎಂಎಸ್​ನಲ್ಲಿ ಮುಖ ಗುರುತಿಸುವಿಕೆ ತಂತ್ರಜ್ಞಾನ ಅಳವಡಿಸಿದ್ದು, ನಗರದಲ್ಲಿನ ರೂಢಿಗತ ಅಪರಾಧಿಗಳು, ರೌಡಿ ಶೀಟರ್​ಗಳು, ಕಳ್ಳರ ಚಲನವಲನಗಳ ಮೇಲೆ ಎ್​ಆರ್​ಎಸ್​ ತಂತ್ರಜ್ಞಾನ ನಿಗಾ ಇಡಲಿದ್ದು, ಅವರು ಕ್ಯಾಮೆರಾಕ್ಕೆ ಸೆರೆ ಸಿಕ್ಕರೆ ಅವರ ಇಡೀ ಮಾಹಿತಿ, ಸಂಚಾರದ ಸಮಯವನ್ನು ತಿಳಿಸಿ, ಎಚ್ಚರಿಕೆ ನೀಡುತ್ತದೆ. ತಕ್ಷಣ ಇದರಿಂದ ಪೊಲೀಸರಿಗೆ ಆತನ ಮೇಲೆ ನಿಗಾ ಇಡಲು, ಬಂಧಿಸಲು ಸಹಕಾರಿ ಆಗಲಿದೆ. ನಾಪತ್ತೆಯಾದವರು, ಅಪರಾಧಿಗಳು ತಲೆ ಮರೆಸಿಕೊಂಡಾಗ, ತನಿಖೆಯ ದಕ್ಷತೆ ಹೆಚ್ಚಿಸಲು ಇದು ಪೂರಕವಾಗಲಿದೆ ಎಂದರು.
ಡಿಸಿಪಿ ಪ್ರವಿಣ ನಾಯಕ, ಎಸಿಪಿ ಶರಣಪ್ಪ ಸುಬೇದಾರ, ಪಿಐ ಗುರು ಪಾಟೀಲ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net