ಹೃದಯಾಘಾತ ಶ್ವಾನ ಸಾವು

ಕಲಬುರಗಿ ಜೇವರ್ಗಿ ಕಾಲನಿ ರಾಮು ಕುಲಕರ್ಣಿಯವರ ಶ್ವಾನ ಹೃದಯಾಘಾತಕ್ಕೆ ಒಳಗಾದ ಹಿನ್ನೆಲೆಯಲ್ಲಿ ಶುಕ್ರವಾರ ಅಂತ್ಯಕ್ರಿಯೆ ನಡೆಸಿ ಶ್ವಾನ ರಾಖಿ ನೆನಪಿಗಾಗಿ ಈ ಸ್ಥಳದಲ್ಲಿ ಸಸಿ ನೆಟ್ಟರು.
ಕಲಬುರಗಿ ಜೇವರ್ಗಿ ಕಾಲನಿ ರಾಮು ಕುಲಕರ್ಣಿಯವರ ಶ್ವಾನ ಹೃದಯಾಘಾತಕ್ಕೆ ಒಳಗಾದ ಹಿನ್ನೆಲೆಯಲ್ಲಿ ಶುಕ್ರವಾರ ಅಂತ್ಯಕ್ರಿಯೆ ನಡೆಸಿ ಶ್ವಾನ ರಾಖಿ ನೆನಪಿಗಾಗಿ ಈ ಸ್ಥಳದಲ್ಲಿ ಸಸಿ ನೆಟ್ಟರು.
Published on
ಕಲಬುರಗಿ:ನಾಯಿ ಅಂದರೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ಇತ್ತೀಚೆಗೆ ಚಾರ್ಲಿ ಸಿನಿಮಾ ನೋಡಿ ಕೆಲವರು ಕಣ್ಣೀರು ಇಟ್ಟಿದ್ದು, ಇದೀಗ ಕಲಬುರಗಿಯಲ್ಲಿ ಒಂದು ಕುಟುಂಬ ತಮ್ಮ ನೆಚ್ಚಿನ ಶ್ವಾನ ಕಳೆದುಕೊಂಡು ಇಡೀ ಕುಟುಂಬ ಕಣ್ಣೀರು ಹಾಕಿz್ದÁರೆ.
ನಗರದ ಜೇವರ್ಗಿ ಕಾಲನಿಯಲ್ಲಿ ಮನೆಯ ಸದಸ್ಯನಂತಿದ್ದ ಪ್ರೀತಿಯ ಶ್ವಾನ ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಕಳೆದ ಏಳು ವರ್ಷಗಳಿಂದ ಅಪಾರ ಪ್ರೀತಿಯಿಂದ ಸಾಕಿದ್ದ ರಾಖಿ ಎಂಬ ಶ್ವಾನದ ಸಾವು ಕುಟುಂಬಸ್ಥರ ಕಣ್ಣೀರು ಹರಿಸಿತು.
ರಾಮು ಕುಲಕರ್ಣಿ ಹಾಗೂ ಸಂಗೀತ ಕುಲಕರ್ಣಿ ದಂಪತಿ ಸಾಕಿದ್ದ ರಾಖಿ ಅಸ್ವಸ್ಥಗೊಂಡ ಬಳಿಕ ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗಿತ್ತಾದರೂ ಅದು ಫಲಕಾರಿಯಾಗಲಿಲ್ಲ. ಹೃದಯಾಘಾತದಿಂದ ರಾಖಿ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿz್ದÁರೆ. ಮನೆಯಲ್ಲಿ ಮಗನಂತಿದ್ದ ಶ್ವಾನದ ಅಗಲುವಿಕೆ ಕುಟುಂಬಕ್ಕೆ ಆಘಾತ ತಂದಿದೆ.
ಶ್ವಾನದ ಅಂತ್ಯಕ್ರಿಯೆಯನ್ನು ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು. ರಾಖಿಯ ಸ್ಮರಣಾರ್ಥವಾಗಿ ಅಂತ್ಯಕ್ರಿಯೆ ಸ್ಥಳದಲ್ಲಿ ಸಸಿ ನೆಟ್ಟು, ಪ್ರೀತಿಯ ಶ್ವಾನಕ್ಕೆ ಕಣ್ಣೀರ ವಿದಾಯ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net