ದೊಡ್ಡಪ್ಪ ಅಪ್ಪ ಸ್ಕಾಲರ್‌ಶಿಪ್‌ಗೆ ಸಿಇಟಿ

ಕಲಬುರಗಿ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ (ಎಸ್.ಬಿ.ಆರ್)ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷಕ್ಕಾಗಿ ಪ್ರವೇಶ ಬಯಸುವ ಹತ್ತನೇ ತರಗತಿ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಭಾನುವಾರ ಆಯೋಜಿಸಿದ್ದ ಪ್ರವೇಶ ಪರೀಕ್ಷೆ ಬರೆಯಲು ಸೇರಿರುವ ವಿದ್ಯಾರ್ಥಿಗಳ ದಂಡು.
ಕಲಬುರಗಿ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ (ಎಸ್.ಬಿ.ಆರ್)ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷಕ್ಕಾಗಿ ಪ್ರವೇಶ ಬಯಸುವ ಹತ್ತನೇ ತರಗತಿ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಭಾನುವಾರ ಆಯೋಜಿಸಿದ್ದ ಪ್ರವೇಶ ಪರೀಕ್ಷೆ ಬರೆಯಲು ಸೇರಿರುವ ವಿದ್ಯಾರ್ಥಿಗಳ ದಂಡು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಬಿಆರ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಜರು
ಕಲಬುರಗಿ: ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ (ಎಸ್.ಬಿ.ಆರ್)ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷಕ್ಕಾಗಿ ಪ್ರವೇಶ ಬಯಸುವ ಹತ್ತನೇ ತರಗತಿಯ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಭಾನುವಾರ ಮಧ್ಯಾಹ್ನ ಪ್ರವೇಶ ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ೨೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.
ಈ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ೯ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಶ್ರೀದೊಡ್ಡಪ್ಪ ಅಪ್ಪ ಅವರ ಹೆಸರಲ್ಲಿ ಸ್ಕಾಲರ್‌ಶಿಪ್ ರೂಪದಲ್ಲಿ ೫ ಕೋಟಿ ರೂಪಾಯಿ ನೀಡಲಾಗುತ್ತದೆ. ಈ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಎಸ್.ಬಿ.ಆರ್. ಪಿ.ಯು ಕಾಲೇಜು ಮತ್ತು ಎಸ್.ಬಿ.ಆರ್ ಪಬ್ಲಿಕ್ ಶಾಲೆಯಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಸ್ವಚ್ಛತೆ, ಶಾಂತತೆÀ ಹಾಗೂ ಪರಿಶುದ್ಧ ವಾತಾವರಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ತದೇಕ ಚಿತ್ತದಿಂದ ಪರೀಕ್ಷೆ ಬರೆದರು.
೧೦ನೇ ತರಗತಿಯ ವಿಜ್ಞಾನ ಮತ್ತು ಗಣಿತ ವಿಷಯ ಆಧಾರವಾಗಿಟ್ಟುಕೊಂಡು ಪ್ರಶ್ನೆ-ಪತ್ರಿಕೆ ಸಿದ್ಧಪಡಿಸಲಾಗಿತ್ತು. ಪ್ರಶ್ನೆ ಪತ್ರಿಕೆಯು ೧೬ ವರ್ಷನ್‌ಗಳಿಂದ ಕೂಡಿದ್ದು, ಪಾರದರ್ಶಕ ಪ್ರವೇಶ ಪರೀಕ್ಷೆ ನಡೆಸಲಾಯಿತು. ಎಸ್.ಬಿ.ಆರ್ ಕಾಲೇಜಿನ ಗುಣಮಟ್ಟದ ಶಿಕ್ಷಣ ಮತ್ತು ಗುರು-ವೃಂದದ ಪರಿಶ್ರಮಕ್ಕೆ ಹಿಡಿದ ಕನ್ನಡಿಯಾಗಿದೆ.
ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಸಲಹೆ-ಸಹಕಾರ ಹಾಗೂ ಮಾರ್ಗದರ್ಶನಕ್ಕಾಗಿ ಹೆಲ್ಪ್ಡೆಸ್ಕ್ ವ್ಯವಸ್ಥೆ ಮಾಡಲಾಗಿತ್ತು. ಮುಂಚಿತವಾಗಿ ಆನ್-ಲೈನ್ ರಿಜಿಸ್ಟೆçÃಶನ್ ಮಾಡಿಸದೇ ಬಂದ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು.
ಕಾಲೇಜಿನ ಪ್ರಾಚಾರ್ಯ ಎನ್.ಎಸ್.ದೇವರಕಲ್ ಮಾರ್ಗದರ್ಶನದಲ್ಲಿ ಗುರುವೃಂದದವರ ಹಾಗೂ ಸಿಬ್ಬಂದಿ ಒಗ್ಗಟ್ಟಿನಿಂದ ಇಂದಿನ ಪರೀಕ್ಷೆ ವ್ಯವಸ್ಥಿತವಾಗಿ ನಡೆಯಿತು. ಮುಂದಿನ ಫಲಿತಾಂಶ ಹಾಗೂ ಇತರೆ ಮಾಹಿತಿಗಾಗಿ ಪಾಲಕರು ಪ್ರಶ್ನೆ ಪತ್ರಿಕೆಯ ಕೊನೆಯ ಪುಟದಲ್ಲಿರುವ ಕ್ಯೂ ಆರ್ ಕೋಡ್ ಮೂಲಕ ಟೆಲಿಗ್ರಾಮ್ ಗುಂಪಿಗೆ ಸೇರಬೇಕು.
ಇಂದು ನಡೆದ ಪ್ರವೇಶ ಪರೀಕ್ಷೆಯ ಫಲಿತಾಂಶವು ಟೆಲಿಗ್ರಾಮ್‌ನಲ್ಲಿ ಪ್ರಕಟಗೊಳ್ಳಲಿದೆ. ಮುಂದಿನ ಪ್ರವೇಶ ಪರೀಕ್ಷೆಗಳು ಏಪ್ರಿಲ್ ೫ ರಂದು ಐಸಿಎಸ್‌ಇ ವಿದ್ಯಾರ್ಥಿಗಳಿಗೆ, ಏಪ್ರಿಲ್ ೧೨ ರಂದು ಕರ್ನಾಟಕ ಸ್ಟೇಟ್ ಬೋರ್ಡ್ ವಿದ್ಯಾರ್ಥಿಗಳಿಗೆ ನಡೆಯಲಿವೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net