ಸಾಧನೆಗೆ ಉತ್ತಮ ಹವ್ಯಾಸ ರೂಢಿಸಿಕೊಳ್ಳಿ

ಕಲಬುರಗಿ ಎನ್​ವಿ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸತಿಕ ಉತ್ಸವದಲ್ಲಿ ಖ್ಯಾತ ಗಾಯಕಿ ಬಿ.ಆರ್​.ಛಾಯಾ ಮತ್ತು ಅವರ ಪತಿ ಪದ್ಮಪಾಣಿ ಅವರನ್ನು ಸತ್ಕರಿಸಲಾಯಿತು. ಡಾ.ಗೌತಮ ಜಹಾಗೀರದಾರ್​, ಅಭಿಜಿತ್​ ದೇಶಮುಖ, ಬಿ.ಜಿ.ದೇಶಪಾಂಡೆ, ಸುಹಾಸ ಖಣಗೆ, ಸುಧಾ ಕುಲಕರ್ಣಿ ಕರಲಗಿಕರ್​, ಆನಂದ ಪಪ್ಪು ಇತರರಿದ್ದರು.
ಕಲಬುರಗಿ ಎನ್​ವಿ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸತಿಕ ಉತ್ಸವದಲ್ಲಿ ಖ್ಯಾತ ಗಾಯಕಿ ಬಿ.ಆರ್​.ಛಾಯಾ ಮತ್ತು ಅವರ ಪತಿ ಪದ್ಮಪಾಣಿ ಅವರನ್ನು ಸತ್ಕರಿಸಲಾಯಿತು. ಡಾ.ಗೌತಮ ಜಹಾಗೀರದಾರ್​, ಅಭಿಜಿತ್​ ದೇಶಮುಖ, ಬಿ.ಜಿ.ದೇಶಪಾಂಡೆ, ಸುಹಾಸ ಖಣಗೆ, ಸುಧಾ ಕುಲಕರ್ಣಿ ಕರಲಗಿಕರ್​, ಆನಂದ ಪಪ್ಪು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಖ್ಯಾತ ಗಾಯಕಿ ಬಿ.ಆರ್​.ಛಾಯಾ ಸಲಹೆ
  • ನೂತನ ವಿದ್ಯಾಲಯ ಸಂಸ್ಥೆ ಸಾಂಸತಿಕ ಉತ್ಸವ
ಕಲಬುರಗಿ: ಮಕ್ಕಳು ಪಾಠದೊಂದಿಗೆ ಗಾಯನ, ಸಂಸತಿ, ಸಂಗೀತ, ಕಲೆ ಹೀಗೆ ಯಾವುದಾದರೂ ಒಂದು ವಿಷಯದಲ್ಲಿ ಸಾಧನೆ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಖ್ಯಾತ ಗಾಯಕಿ ಬಿ.ಆರ್​. ಛಾಯಾ ಹೇಳಿದರು.
ನೂತನ ವಿದ್ಯಾಲಯ ಸಂಸ್ಥೆಯ ಶ್ರೀ ಸತ್ಯಪ್ರಮೋದ ತೀರ್ಥ ಸಭಾಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಸ್ಥೆಯ ಸಾಂಸತಿಕ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಆಸಕ್ತಿಗೆ ತಕ್ಕಂತೆ ಶಿಕ್ಷಕರು ಮಾರ್ಗದರ್ಶನ ಮಾಡಬೇಕು. ಪಾಠದೊಂದಿಗೆ ಇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ಗಮನಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ಕಾರ್ಯದರ್ಶಿ ಅಭಿಜಿತ್​ ದೇಶಮುಖ ಪ್ರಾಸ್ತಾವಿಕ ಮಾತನಾಡಿ, ನೂತನ ವಿದ್ಯಾಲಯ ಸಂಸ್ಥೆ 1907ರಲ್ಲಿ ಶುರುವಾದ ನೂತನ ವಿದ್ಯಾಲಯ ಸಂಸ್ಥೆಯ ಸುದೀರ್ 119 ವರ್ಷದಲ್ಲಿ ಅಧ್ಯಯನ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಇಂದು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಡಾ.ಗೌತಮ ಜಹಾಗೀರದಾರ್​ ಮಾತನಾಡಿ, ಭಾರತೀಯ ಸಂಸತಿ ಉಳಿಸಿ ಬೆಳೆಸುವುದು ಇಂದಿನ ಅಗತ್ಯ. ಸಾಂಸತಿಕ ಉತ್ಸವಗಳಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸಂಸತಿ ಜತೆಗೆ ಭಾರತೀಯ ಪ್ರಜ್ಞೆ ಮೂಡಿಸಲಿವೆ. ಖ್ಯಾತ ಗಾಯಕಿ ಬಿ.ಆರ್​.ಛಾಯಾ ಆಗಮಿಸಿ ಮೆರುಗು ತಂದುಕೊಟ್ಟಿದ್ದಾರೆ ಎಂದು ಹೇಳಿದರು.
ಗಾಯಕಿ ಛಾಯಾ ಪತಿ ಪದ್ಮಪಾಣಿ ಮಾತನಾಡಿ, ಎನ್​ವಿ ಸಂಸ್ಥೆಯಲ್ಲಿ ತಾವು ಕಲಿತ ದಿನಗಳನ್ನು ಸ್ಮರಿಸಿದರು. ಎನ್​ವಿ ವಿಶ್ವಸ್ಥ ಮಂಡಳಿ ಅಧ್ಯ ಎಸ್​.ಬಿ. ಜಾಜಿ, ಪ್ರಮುಖರಾದ ರವೀಂದ್ರ ತೇಂಗಳಿ, ಸುಧಾ ಕುಲಕರ್ಣಿ ಕರಲಗಿರಕರ್​, ಡಾ.ಎಸ್​.ಎಸ್​. ಸಿದ್ಧಾಪುರಕರ್​, ಬಿ.ಜಿ. ದೇಶಪಾಂಡೆ, ವಿಕ್ರಮ ಚಂಡ್ರಿಕಿ, ಉದಯ ಹೊನಗುಂಟಿಕರ್​, ಮೀನಾ ಪತಕಿ, ಸುಹಾಸ ಖಣಗೆ, ಭರತ್​ ಕುಲಕರ್ಣಿ ಇತರರಿದ್ದರು.
ಗೌತಮಿ, ತನುಜಾ ನಿರೂಪಣೆ ಮಾಡಿದರು. 65 ವಿದ್ಯಾರ್ಥಿಗಳ ತಂಡ ಪ್ರಾರ್ಥನೆಗೀತೆ ಹಾಡಿತು. ಉತ್ಸವ ಸಮಿತಿ ಉಪಾಧ್ಯ ಆನಂದ ಪಪ್ಪು ಸ್ವಾಗತಿಸಿದರು. ಬಿ.ಇಡಿ ಕಾಲೇಜು ಪ್ರಾಚಾರ್ಯ ಡಾ.ವಿಜಯಕುಮಾರ ಗೋತಗಿಕರ್​ ವಂದಿಸಿದರು.

ಛಾಯಾ ಸುಶ್ರಾವ್ಯ ಗಾಯನ

ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು... ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ ಆ ಚಂದ್ರನ ಆಗಮನ.. ಭೂತಾಯಿಯ ಋತುಗಾನ ನಮ್ಮಿಬ್ಬರ ಈ ಮಿಲನ.. ಬಾನಂಚಿನ ಹೊಸಗಾನ ನೀ ನನಗೆ ನಾ ನಿನಗೆ ಜೀವನ ನಗುತಲಿದೆ.. ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ ನೀನೇ ನನ್ನ ಜೀವ ನೀನೇ ನನ್ನ ಪ್ರಾಣ ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು ಹೀಗೆ ಮೊದಲಾದ ಹಾಡುಗಳನ್ನು ಖ್ಯಾತ ಗಾಯಕಿ ಬಿ.ಆರ್​.ಛಾಯಾ ಹಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು.

ವೇಷಭೂಷಣದಲ್ಲಿ ಮಿಂಚಿದ ಪುಟಾಣಿಗಳು

ಸ್ವಾಮಿ ವಿವೇಕಾನಂದ, ಡಾ.ಸಿ.ವಿ. ರಾಮನ್​, ಸರ್​ ಎಂ.ವಿಶ್ವೇಶ್ವರಯ್ಯ, ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್​ ಕಲಾಂ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್​, ಸರ್ದಾರ್​ ವಲ್ಲಭಭಾಯಿ ಪಟೇಲ್​, ಲಾಲ್​ ಬಹಾದ್ದೂರ್​ ಶಾಸಿ, ಪೊಲೀಸ್​ ಹೀಗೆ ವಿವಿಧ ವೇಷಭೂಷಣದಲ್ಲಿ ಪುಟಾಣಿಗಳು ಮಿಂಚಿದರು. ವಿಶೇಷವಾಗಿ 8 ಮತ್ತು 9ನೇ ತರಗತಿ ಮಕ್ಕಳು ದಶಾವತಾರ ವೇಷದಲ್ಲಿ ಕುಣಿದು ಕುಪ್ಪಳಿಸಿ ಸಭಿಕರ ಗಮನಸೆಳೆದರು.
"

ಕೇವಲ ಓದು ನಿಮ್ಮ ಬದುಕಿಗೆ ಬಾರದು. ಉತ್ತಮ ಹವ್ಯಾಸ ಉತ್ತುಂಗಕ್ಕೆ ಕರೆದೊಯ್ಯಲು ಪೂರಕವಾಗುತ್ತದೆ ಎಂಬುದುನ್ನು ಅರಿಯಬೇಕು. ಆ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು.

> ಬಿ.ಆರ್​.ಛಾಯಾಖ್ಯಾತ ಗಾಯಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net