ಕಳಪೆ ಬೀಜ ಪೂರೈಕೆ, ಆಗ್ರೋ ಏಜನ್ಸಿ ಪರವಾನಿಗೆ ರದ್ದತಿಗೆ ಆಗ್ರಹ

ಕಳಪೆ ಬೀಜ ವಿತರಿಸಿ ಆಗ್ರೋ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಚಿಂಚೋಳಿಯಲ್ಲಿ ಕೃಷಿ ಇಲಾಖೆ ಚಿಮ್ಮನಚೋಡ ವಲಯ ಅಧಿಕಾರಿಗೆ ಮನವಿಪತ್ರ ಸಲ್ಲಿಸಲಾಯಿತು.
ಕಳಪೆ ಬೀಜ ವಿತರಿಸಿ ಆಗ್ರೋ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಚಿಂಚೋಳಿಯಲ್ಲಿ ಕೃಷಿ ಇಲಾಖೆ ಚಿಮ್ಮನಚೋಡ ವಲಯ ಅಧಿಕಾರಿಗೆ ಮನವಿಪತ್ರ ಸಲ್ಲಿಸಲಾಯಿತು.
Published on
ವಿಜಯವಾಣಿ ಸುದ್ದಿಜಾಲ ಚಿಂಚೋಳಿ

ಕಲ್ಯಾಣ ಕರ್ನಾಟಕ ಕಸ್ಕೋಟಾ ನಿರ್ಮೂಲನೆ ಹೋರಾಟ ಸಮಿತಿ ಅಧ್ಯಕ್ಷ ಗೋಪಾಲ ಎಂ.ಪಿ ಗಾರಂಪಳ್ಳಿ ದೂರಿದರು.

ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತ ಗುಂಡಪ್ಪ ಕಲ್ಲಪ್ಪ ಕಳಪೆ ಬೀಜದಿಂದಾಗಿ ತೀವ್ರ ಕಂಗಾಲಾಗಿದ್ದಾರೆ.

ತಾಲೂಕಿನಾದ್ಯಂತ ರೈತರಿಗೆ ಕಳಪೆ ಮಟ್ಟದ ಬಿತ್ತನೆ ಬೀಜ ಪೂರೈಕೆಯಾಗುತ್ತಿದ್ದು, ಇಂತಹ ವಂಚಕ ಆಗ್ರೋ ಏಜನ್ಸಿಗಳ ಪರವಾನಿಗೆ ತಕ್ಷಣ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ಕೂಡಲೇ ಕಳಪೆ ಬೀಜ ಪೂರೈಸಿ ರೈತನಿಗೆ ವಂಚಿಸಿದ ಆಗ್ರೋ ಏಜನ್ಸಿಯ ಪರವಾನಿಗೆಯನ್ನು ತಕ್ಷಣ ರದ್ದುಗೊಳಿಸಬೇಕು. ನಷ್ಟಕ್ಕೊಳಗಾದ ರೈತ ಗುಂಡಪ್ಪಾ ಜಾಡರ್ ಅವರಿಗೆ ಸೂಕ್ತ ಪರಿಹಾರ ಒದಗಿಸಬೇಕು. ದುಬಾರಿ ಬೆಲೆಗೆ ಮಾರಾಟ ಮಾಡುವ ಏಜನ್ಸಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಬೀಜ ಮೊಳಕೆಯೊಡೆಯದೆ ನಷ್ಟ ಅನುಭವಿಸುತ್ತಿರುವ ತಾಲೂಕಿನ ರೈತರ ಹಿತರಕ್ಷಣೆಗೆ ಕೃಷಿ ಇಲಾಖೆ ಕೂಡಲೇ ಜಾಗೃತಗೊಂಡು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಚಿಮ್ಮನಚೋಡ ಕೃಷಿ ಅಧಿಕಾರಿ ಅಭಿಲಾಷ್ ಸುಬೇದಾರ ಮನವಿಪತ್ರ ಸ್ವೀಕರಿಸಿದರು.

ರೈತ ಗುಂಡಪ್ಪ ಜಾಡರ್, ಓಂಕಾರ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net