ಸಿಇಟಿ ಉಚಿತ ತರಬೇತಿ ಸದ್ಬಳಕೆ ಮಾಡಿಕೊಳ್ಳಿ

ಕಲಬುರಗಿ ಪಿಡಿಎ ಇಂಜಿನಿಯರಿAಗ್ ಕಾಲೇಜಿನಲ್ಲಿ ಎಬಿವಿಪಿ ಬುಧವಾರ ಆಯೋಜಿಸಿದ್ದ ಸಿಇಟಿ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಡಾ.ಸದಾಶಿವ ಜಿಡಗೇಕರ್, ಮನೋಜ ಪಾಟೀಲ್, ಕವಿರಾಜ ಪಾಟೀಲ್, ಪ್ರಮೋದ್, ಕೈಲಾಸ ಪಾಟೀಲ್, ಹೇಮಂತ ಅರಳಿ, ಹನುಮಂತ ಬಗಲಿ, ಅವಿನಾಶ ಗುತ್ತೇದಾರ್, ಅಭಿಷೇಕ್ ಪಾಟೀಲ್, ಶಾಂತೇಶ ಚಕ್ಕಡಿ ಇತರರಿದ್ದರು.
ಕಲಬುರಗಿ ಪಿಡಿಎ ಇಂಜಿನಿಯರಿAಗ್ ಕಾಲೇಜಿನಲ್ಲಿ ಎಬಿವಿಪಿ ಬುಧವಾರ ಆಯೋಜಿಸಿದ್ದ ಸಿಇಟಿ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಡಾ.ಸದಾಶಿವ ಜಿಡಗೇಕರ್, ಮನೋಜ ಪಾಟೀಲ್, ಕವಿರಾಜ ಪಾಟೀಲ್, ಪ್ರಮೋದ್, ಕೈಲಾಸ ಪಾಟೀಲ್, ಹೇಮಂತ ಅರಳಿ, ಹನುಮಂತ ಬಗಲಿ, ಅವಿನಾಶ ಗುತ್ತೇದಾರ್, ಅಭಿಷೇಕ್ ಪಾಟೀಲ್, ಶಾಂತೇಶ ಚಕ್ಕಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಿಡಿಎ ಇಂಜಿನಿಯರಿAಗ್ ಕಾಲೇಜಿನಲ್ಲಿ ಎಬಿವಿಪಿ ಆಯೋಜನೆ
ಕಲಬುರಗಿ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಎಬಿವಿಪಿ ಆಯೋಜಿಸಿರುವ ಸಿಇಟಿ ಉಚಿತ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ವೈದ್ಯ ಡಾ.ಸದಾಶಿವ ಜಿಡಗೇಕರ್ ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದ ಪಿ.ಡಿ.ಎ. ಇಂಜನಿಯರಿAಗ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಿಇಟಿ ಉಚಿತ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿP್ಷÀಣ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿಇಟಿ ತರಗತಿಗಳು ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಅನೂಕುಲವಾಗಲಿದೆ. ಇದನ್ನು ಪ್ರತಿವರ್ಷ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಎಬಿವಿಪಿಯ ಎಸ್.ಎಫ್.ಡಿ ಪ್ರಮುಖ ಮನೋಜ ಪಾಟೀಲ್ ಮಾತನಾಡಿ, ಪ್ರತಿ ವರ್ಷವೂ ಉಚಿತ ತರಬೇತಿಯ ಆಯೋಜಿಸಲಾಗುತ್ತಿದೆ. ಜತೆಗೆ ವಿದ್ಯಾರ್ಥಿ ಪರಿಷತ್ತು ರಚನಾತ್ಮಕ ಕಾರ್ಯಗಳನ್ನು ನಿರಂತರ ಮಾಡುತ್ತಿದೆ ಎಂದರು.
ಎಬಿವಿಪಿ ನಗರ ಅಧ್ಯP್ಷÀ ಕವಿರಾಜ ಪಾಟೀಲ್ ಮಾತನಾಡಿ, ಇಡಿ ದೇಶದಲ್ಲಿ ವಿದ್ಯಾರ್ಥಿಗಳ ಹಿತಕ್ಕಾಗಿ ಹೋರಾಟ ಮಾಡುವುದರ ಜತೆಗೆ ಅನೇಕ ದೇಶಭಕ್ತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಎಬಿವಿಪಿ ವ್ಯವಸ್ಥೆ ಪ್ರಮುಖ ಪ್ರಮೋದ ನಾಗುರಿಕರ್ ಮಾತನಾಡಿ, ತರಬೇತಿ ಪ್ರಾರಂಭವಾಗಿದ್ದು, ನುರಿತ ಉಪನ್ಯಾಸಕರಿಂದ ನಿತ್ಯ ಆರು ಗಂಟೆಗಳ ಕಾಲ ತರಗತಿ ನಡೆಸಲಾಗುತ್ತದೆ. ಹೊಸ ಪಠ್ಯಕ್ರಮದ ಪ್ರಕಾರ ಅಧ್ಯಯನ ಸಾಮಗ್ರಿ ಮತ್ತು ಮುದ್ರಿತ ಟಿಪ್ಪಣಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು. ಜತೆಗೆ ತರಬೇತಿಗಳ ನಡುವೆ ಪರೀಕ್ಷೆಗಳನ್ನೂ ನಡೆಸಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿ ಪರಿಷತ್ತಿನ ಹಿರಿಯ ಕಾರ್ಯಕರ್ತರಾದ ಕೈಲಾಸ ಪಾಟೀಲ್, ವಿಭಾಗ ಸಂಘಟನ ಕಾರ್ಯದರ್ಶಿ ಹೇಮಂತ ಅರಳಿ ,ವಿಭಾಗ ಸಂಚಾಲಕ ಹನುಮಂತ ಬಗಲಿ, ಸಿಇಟಿ ಸಹ ಸಂಚಾಲಕರಾದ ಅವಿನಾಶ ಗುತ್ತೇದಾರ್, ಅಭಿಷೇಕ್ ಪಾಟೀಲ್, ಶಾಂತೇಶ ಚಕ್ಕಡಿ ಸೇರಿ ಪರಿಷತ್ತಿನ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net