ಆರೋಗ್ಯವೇ ನಿಜವಾದ ಭಾಗ್ಯ

ಕಲಬುರಗಿ ಗೋದುತಾಯಿ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರದಲ್ಲಿ ಡಾ.ಶರಣಗೌಡ ಪಾಟೀಲ ದೀಪ ಬೆಳಗಿಸಿದರು. ಡಾ.ಅಲ್ಲಮಪ್ರಭು ದೇಶಮುಖ, ಡಾ.ಮಲ್ಲಿಕಾರ್ಜುನ ತೆಗನೂರ, ಡಾ.ಸುನೀಲ ದೇಶಮುಖ, ಡಾ.ವೀರೆಂದ್ರ ಪಾಟೀಲ, ಡಾ.ನೀಲಾಂಬಿಕಾ ಶೇರಿಕಾರ, ಡಾ.ಸೀಮಾ ಪಾಟೀಲ, ಡಾ.ಎಂ.ಆರ್.ಹುಗ್ಗಿ ಇತರರಿದ್ದರು.
ಕಲಬುರಗಿ ಗೋದುತಾಯಿ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರದಲ್ಲಿ ಡಾ.ಶರಣಗೌಡ ಪಾಟೀಲ ದೀಪ ಬೆಳಗಿಸಿದರು. ಡಾ.ಅಲ್ಲಮಪ್ರಭು ದೇಶಮುಖ, ಡಾ.ಮಲ್ಲಿಕಾರ್ಜುನ ತೆಗನೂರ, ಡಾ.ಸುನೀಲ ದೇಶಮುಖ, ಡಾ.ವೀರೆಂದ್ರ ಪಾಟೀಲ, ಡಾ.ನೀಲಾಂಬಿಕಾ ಶೇರಿಕಾರ, ಡಾ.ಸೀಮಾ ಪಾಟೀಲ, ಡಾ.ಎಂ.ಆರ್.ಹುಗ್ಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಅಲ್ಲಮಪ್ರಭು ದೇಶಮುಖ ಹೇಳಿಕೆ
  • ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಪುಣ್ಯಸ್ಮರಣೆ ನಿಮಿತ್ತ ಆರೋಗ್ಯಭಾಗ್ಯ
ಕಲಬುರಗಿ: ಉತ್ತಮ ಆರೋಗ್ಯವಿದ್ದಾಗ ಮಾತ್ರ ವ್ಯಕ್ತಿ, ಕುಟುಂಬ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ. ಆರೋಗ್ಯವೇ ಮನುಷ್ಯನ ನಿಜವಾದ ಸಂಪತ್ತು ಎಂದು ಶರಣಬಸವೇಶ್ವರ ಸಂಸ್ಥಾನದ ಆಡಳಿತಾಧಿಕಾರಿ ಡಾ.ಅಲ್ಲಮಪ್ರಭು ದೇಶಮುಖ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಲಿಂ.ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಶರಣಬಸವೇಶ್ವರ ದೇವಸ್ಥಾನ ಅವರಣದ ಶಾಲಾ-ಕಾಲೇಜುಗಳು, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆ ಹಾಗೂ ಎಸ್.ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ೧೫ ದಿನಗಳವರೆಗೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಗುರುವಾರ ಆಯೋಜಿಸಿದ್ದ ಉಚಿತ ಆರೋಗ್ಯಭಾಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಧಾವಂತದ ಜೀವನಶೈಲಿಯಲ್ಲಿ ಅನೇಕರು ತಮ್ಮ ಆರೋಗ್ಯ ಕಡೆಗಣಿಸುತ್ತಿದ್ದಾರೆ. ಆದರೆ ಸಣ್ಣ ಸಮಸ್ಯೆಗಳನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಕಾಯಿಲೆ ತಡೆಗಟ್ಟಬಹುದು. ಆದ್ದರಿಂದ ಇಂತಹ ಆರೋಗ್ಯ ತಪಾಸಣೆ ಶಿಬಿರಗಳು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಹಿರಿಯ ವೈದ್ಯ ಡಾ.ಶರಣಗೌಡ ಪಾಟೀಲ್ ಮಾತನಾಡಿ, ಈ ಶಿಬಿರದಲ್ಲಿ ಎಲ್ಲರೂ ತಮ್ಮ ಆರೋಗ್ಯದ ಸ್ಥಿತಿಯನ್ನು ತಿಳಿದುಕೊಂಡು ಸೂಕ್ತ ವೈದ್ಯಕೀಯ ಸಲಹೆ ಪಡೆಯಬೇಕು. ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಯೋಗ, ಸ್ವಚ್ಛತೆ ಹಾಗೂ ಮಾನಸಿಕ ಆರೋಗ್ಯದ ಕಡೆಗೂ ಸಮಾನ ಗಮನ ನೀಡಬೇಕು ಎಂದು ಹೇಳಿದರು.
ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ್ ಮಾತನಾಡಿದರು. ಹಿರಿಯ ವೈದ್ಯರಾದ ಡಾ.ಮಲ್ಲಿಕಾರ್ಜುನ ತೆಗನೂರ, ಡಾ.ಸುನೀಲ ದೇಶಮುಖ, ಡಾ.ವೀರೆಂದ್ರ ಪಾಟೀಲ, ಪ್ರಾಚಾರ್ಯೆ ಡಾ.ಸೀಮಾ ಪಾಟೀಲ, ಡಾ.ಎಂ.ಆರ್.ಹುಗ್ಗಿ, ಡಾ.ಅಮ್ರಪಾಲಿ ಇತರರಿದ್ದರು.
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂಆರ್‌ಎAಸಿ ಕಾಲೇಜಿನ ವೈದ್ಯರು ಮತ್ತು ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ಸಿಬ್ಬಂದಿ ಪಾಲ್ಗೊಂಡಿದ್ದರು.
ಡಾ.ರಾಜಲಕ್ಷಿö್ಮÃ ಡಿ. ಸ್ವಾಗತಿಸಿದರು, ಡಾ.ಸಂತೋಷಕುಮಾರ ನಗಲಾಪೂರ ಪ್ರಾಸ್ತಾವಿಕ ಮಾತನಾಡಿದರು, ಪ್ರಸಾದ ಅಷ್ಟಗೀಕರ್ ನಿರೂಪಣೆ ಮಾಡಿದರು. ಡಾ.ಶ್ವೇತಾ ಗೋಪನೆ ವಂದಿಸಿದರು. ನಂತರ ಗೋದುತಾಯಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಯ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು
"

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಆರೋಗ್ಯವಂತ ಸಮಾಜವೇ ಸದೃಢ ರಾಷ್ಟç ನಿರ್ಮಾಣಕ್ಕೆ ಆಧಾರ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಕುಟುಂಬದವರನ್ನು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಪ್ರೇರೇಪಿಸಬೇಕು.ಡಾ.ಅಲ್ಲಮಪ್ರಭು ದೇಶಮುಖ,ಆಡಳಿತಾಧಿಕಾರಿ, ಶರಣಬಸವೇಶ್ವರ ಸಂಸ್ಥಾನ.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net