ಬ್ರಹ್ಮಪುರ ಪೊಲೀಸ್ ಠಾಣೆಯ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಂದಿನ ಇನ್ಸ್‌ಪೆಕ್ಟರ್ ಸೋಮಲಿಂಗ್ ಕಿರದಳ್ಳಿ (ಪ್ರಸ್ತುತ ಡಿಎಸ್‌ಪಿ) ಅವರು ಮೂವರು ಆರೋಪಿಗಳ ವಿರುದ್ಧ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಸುಳ್ಳು ನೆಪವೊಡ್ಡಿ ಜಾಮೀನು ರದ್ಧತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪೊಲೀಸರ ಸುಳ್ಳನ್ನು ಬಯಲು ಮಾಡಿದೆ. ತಪ್ಪಿತಸ್ಥ ಅಧಿಕಾರಿ ಸೋಮಲಿಂಗ್ ಕಿರದಳ್ಳಿ ಅವರು ಸಂತ್ರಸ್ತರಿಗೆ ತಲಾ 50 ಸಾವಿರ ರೂ. ದಂಡ ಪಾವತಿಸಬೇಕು ಮತ್ತು ಅವರ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದು ನ್ಯಾಯಾಧೀಶರಾದ ಮಹಮ್ಮದ್ ಮುಜೀರ್ ಉಲ್ಲಾ ಆದೇಶಿಸಿದ್ದಾರೆ ಎಂದು ಶ್ರೀಗಳು ವಿವರಿಸಿದರು.