ಕಾಲಭೈರವೇಶ್ವರ ಬಸಪ್ಪನ ಪವಾಡ: ಮಾತು ಕೇಳಿದವನಿಗೆ ಪಾಠ ಕಲಿಸಿ, ಅರ್ಚಕನಾಗಿ ನೇಮಕ ಮಾಡಿದ ಬಸಪ್ಪ!

Kalabairaweshwara
Published on

ಮಂಡ್ಯ: ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಕಾಲಭೈರವೇಶ್ವರಸ್ವಾಮಿ ಬಸಪ್ಪ, ಈರೇಗೌಡನದೊಡ್ಡಿಯಲ್ಲಿ ಅರ್ಚಕನನ್ನು ನೇಮಿಸಿ ಮತ್ತೊಂದು ಪವಾಡ ಮೆರೆದಿದೆ.

ಈರೇಗೌಡನದೊಡ್ಡಿಯ ಮಾರಮ್ಮ ದೇವಸ್ಥಾನಕ್ಕೆ ಅರ್ಚಕನನ್ನು ನೇಮಕ ಮಾಡಲು ಗ್ರಾಮಸ್ಥರಲ್ಲಿದ್ದ ಗೊಂದಲ ಉಂಟಾಗಿತ್ತು. ಹೀಗಾಗಿ ಗೊಂದಲ‌ ಬಗೆಹರಿಸಿಕೊಳ್ಳಲು ಗ್ರಾಮಸ್ಥರು ಕಾಲಭೈರವೇಶ್ವರಸ್ವಾಮಿ ಬಸಪ್ಪನ ಮೊರೆ ಹೋಗಿದ್ದರು.

ಈ ವೇಳೆ ಬಸಪ್ಪ ಈರೇಗೌಡನದೊಡ್ಡಿಯ ಕೃಷ್ಣ ಎಂಬುವವರನ್ನು ಅರ್ಚಕರನ್ನಾಗಿ ಆಯ್ಕೆ ಮಾಡಿದೆ. ಆದರೆ, ಆರಂಭದಲ್ಲಿ ಕೃಷ್ಣ, ಬಸಪ್ಪನ ಆಯ್ಕೆಯನ್ನು ತಿರಸ್ಕರಿಸಿದದ್ದ. ನನಗೆ ಸಾಕಷ್ಟು ಕಷ್ಟಗಳು ಇವೆ. ನಾನು ಅರ್ಚಕ ಆಗಲ್ಲ ಎಂದಿದ್ದ. ಇದಕ್ಕೆ‌ ಕೋಪಗೊಂಡ ಬಸಪ್ಪ, ಕೆಳಕ್ಕೆ ನೂಕಿ ಕೃಷ್ಣನಿಗೆ ಪಾಠ ಕಲಿಸಿತು. ಅಂತಿಮವಾಗಿ ಕೃಷ್ಣ ಬಸಪ್ಪನ ತೀರ್ಪು ಒಪ್ಪಿಕೊಂಡ.

ಇದಾದ ಬಳಿಕ ಕೃಷ್ಣನನ್ನು ಗ್ರಾಮದ ಕಲ್ಯಾಣಿಗೆ ನೂಕಿ ಅರ್ಚಕ ಎಂದು ಬಸಪ್ಪ ನೇಮಕ‌ ಮಾಡಿತು. ಬಸಪ್ಪನ ಪವಾಡ ನೋಡಿ ಗ್ರಾಮಸ್ಥರು ಪೂಜೆ ಮಾಡಿ ಗೌರವ ಸಲ್ಲಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net