More

    ಹಕ್ಕಿ ಜ್ವರದ ಎಫೆಕ್ಟ್​ ಚಿಕನ್​ ಬೆಲೆಯಲ್ಲಿ ಕುಸಿತ: ಬಾಯ್ಲರ್​ ಕೋಳಿ ಕೆಜಿಗೆ 15 ರೂ.!

    ದೆಹಲಿ: ದೇಶವು ಕರೊನಾದಿಂದ ಮುಕ್ತವಾಗುತ್ತಿರುವ ಸಮಯದಲ್ಲೇ ಕೆಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ಆತಂಕಕ್ಕೀಡುಮಾಡಿದೆ. ಹಕ್ಕಿ ಜ್ವರವು ಕೋಳಿ ಉದ್ಯಮದ ಮೇಲೆ ಭಾರಿ ಪರಿಣಾಮ ಬೀರಿದ್ದು, ಬೆಲೆ ಕುಸಿತವಾಗಿ ಭಾರಿ ನಷ್ಟ ಅನುಭವಿಸುವಂತಾಗಿದೆ.

    ಚಿಕನ್​ ಅನ್ನು ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ಸೋಂಕು ಅಥವಾ ರೋಗ ಹರಡುವುದಿಲ್ಲ ಎಂದು ವೈದ್ಯರು ಹೇಳಿದರೂ ಹಕ್ಕಿ ಜ್ವರದ ಭೀತಿಯಿಂದ ಬಹುತೇಕರು ಚಿಕನ್​ ತಿನ್ನುವುದಕ್ಕೆ ಹಿಂಜರಿಯುತ್ತಿದ್ದಾರೆ. ಹೀಗಾಗಿ ಕೋಳಿ ಮಾಂಸದ ಬೆಲೆಯಲ್ಲಿ ತೀವ್ರ ಕುಸಿತ ಕಂಡಿದೆ. ಮಾರಾಟಕ್ಕೆಂದು ಪ್ರತಿನಿತ್ಯ ಹರಿಯಾಣದ ಜಿಂದ್​ ಜಿಲ್ಲೆಯಿಂದ 4 ಲಕ್ಷ ಕೋಳಿಗಳನ್ನು ಕಳುಹಿಸಲಾಗುತ್ತದೆ. ಆದರೆ, ಕೋಳಿ ಮಾಂಸವನ್ನು ತೆಗೆದುಕೊಳ್ಳುವವರ ಇಲ್ಲದಿರುವುದರಿಂದ ಬೆಲೆ ಕೆ.ಜಿ ಗೆ 15 ರೂಪಾಯಿಗೆ ಕುಸಿದಿದೆ. ಇದರಿಂದಾಗಿ ದಿನವೊಂದಕ್ಕೆ ಸುಮಾರು 1. 20 ಕೋಟಿ ರೂ. ನಷ್ಟವಾಗುತ್ತಿದೆ.

    ಇದನ್ನೂ ಓದಿ: ನಿಮ್ಮನ್ನು ಭೇಟಿಯಾಗಬೇಕು ಎನ್ನುತ್ತಲೇ ಗೇಟ್​ ಹಾರಿ ನಟಿ ಮನೆಗೆ ನುಗ್ಗಿದ ಯುವಕ: ಮುಂದೇನಾಯ್ತು?!

    ಹರಿಯಾಣದ ಜಿಂದ್​ ಜಿಲ್ಲೆ ಕೋಳಿ ಉದ್ಯಮದ ಕೇಂದ್ರವಾಗಿದೆ. ಇದೊಂದೆ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಕೋಳಿ ಫಾರಂಗಳಿವೆ​ ಮತ್ತು 80ಕ್ಕೂ ಹೆಚ್ಚು ಮೊಟ್ಟೆ ಕೇಂದ್ರಗಳಿವೆ. ಪ್ರತಿನಿತ್ಯ ದೆಹಲಿಗೆ 4 ಲಕ್ಷ ಕೋಳಿಗಳನ್ನು ರೈಲುಗಳಲ್ಲಿ ಸಾಗಿಸಲಾಗುತ್ತದೆ. ಕೋಳಿಗಳು ಸುಮಾರು 8 ಲಕ್ಷ ಕೆ.ಜಿ ತೂಗುತ್ತದೆ. ಕೆ.ಜಿಗೆ 90 ರೂ.ನಂತೆ ದೆಹಲಿಯಲ್ಲಿ ಮಾರಾಟವಾಗುತ್ತದೆ. ಸುಮಾರು 7 ಕೋಟಿ ರೂ.ವರೆಗೂ ವ್ಯವಹಾರವಾಗುತ್ತಿತ್ತು. ಆದರೆ, ಹಕ್ಕಿ ಜ್ವರದಿಂದ ದೊಡ್ಡ ಹೊಡೆತ ಬಿದ್ದಂತಾಗಿದೆ.

    ಬೇಯಿಸಿದ ಚಿಕನ್​ ಸಂಪೂರ್ಣ ಸುರಕ್ಷಿತ
    ಭಾರತೀಯ ಜನರು ಬೇಯಿಸಿದ ಚಿಕನ್​ ಮಾತ್ರ ಸೇವಿಸುತ್ತಾರೆ. ಹೀಗಾಗಿ ಸುಮಾರು 70 ಡಿಗ್ರಿ ಸೆಲ್ಸಿಯಸ್​ನಲ್ಲಿ ಕೋಳಿ ಮಾಂಸವನ್ನು ಬೇಯಿಸುವುದರಿಂದ ಎಲ್ಲ ರೀತಿಯ ವೈರಸ್​ಗಳು ಸಾಯುತ್ತವೆ. ಹೀಗಾಗಿ ಯಾವುದೇ ಅಪಾಯ ಸಂಭವಿಸುವುದಿಲ್ಲ. ಹೀಗಾಗಿ ಜನರಿಗೆ ಮನವರಿಕೆ ಮಾಡುವ ಕೆಲಸಗಳು ಸಹ ನಡೆಯುತ್ತಿದೆ. ಆದರೂ ಜನರಿಗೆ ಭಯ ಕಡಿಮೆಯಾಗುತ್ತಿಲ್ಲ. ಯಾರೂ ಭಯಪಡಬೇಡಿ ಎಂದು ಜಿಂದ್​ನ ಪಶುಸಂಗೋಪನಾ ಇಲಾಖೆಯ ಹಿರಿಯ ವೈದ್ಯರಾದ ಡಾ. ರಾಜು ಶರ್ಮಾ ತಿಳಿಸಿದ್ದಾರೆ.

    ಇದನ್ನೂ ಓದಿ: ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ!

    ಅಂದಹಾಗೆ ರಾಜಸ್ಥಾನ, ಕೇರಳ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ದಾಖಲಾಗಲಾರಂಭಿಸಿದ್ದು, ಜನರು ಚಿಕನ್​ ತಿನ್ನಲು ಹಿಂದೇಟು ಹಾಕುವಂತಾಗಿದೆ. ಕರ್ನಾಟಕದಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. (ಏಜೆನ್ಸೀಸ್​)

    ಹೆಚ್ಚಾಯ್ತು ಹಕ್ಕಿ ಜ್ವರದ ಭೀತಿ! ಚಿಕನ್​ ತಿಂದ್ರೆ ನಮಗೂ ಕಾಯಿಲೆ ಬರುತ್ತಾ?

    ಬಳಸಿದ ಕಾಂಡೋಮ್​ ಒಳಗೆ ವಿಲವಿಲ ಒದ್ದಾಡಿದ ವಿಷಕಾರಕ ಹಾವು! 

    ಸರ್ಕಾರಿ ನೌಕರನೆಂದು ಮದ್ವೆಯಾದವಳಿಗೆ ನಿತ್ಯ ನರಕ ದರ್ಶನ: ಗಂಡನ ಮೊಬೈಲ್​ ನೋಡಿ ಪತ್ನಿಗೆ ಶಾಕ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts