

ಬೆಂಗಳೂರು: ದೇಶದಲ್ಲಿ ಮಹಾಮಾರಿ ಕರೊನಾ ವೈರಸ್ ಎರಡನೇ ಅಲೆ ಹೆಚ್ಚಾಗಿದ್ದು, ದಿನೇದಿನೆ ಸೋಂಕಿತ ಪ್ರಕರಣಗಳ ಜತೆಗೆ ಸಾವಿನ ಸಂಖ್ಯೆಯು ಏರುಗತಿಯಲ್ಲಿ ಇರುವುದರಿಂದ ಸರ್ಕಾರ ಕಠಿಣ ತೆಗೆದುಕೊಳ್ಳುವ ಸ್ಪಷ್ಟ ಲಕ್ಷಣಗಳು ಕಾಣುತ್ತಿವೆ.
ಮತ್ತೊಮ್ಮೆ ಲಾಕ್ಡೌನ್ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಲಾಕ್ಡೌನ್ನಿಂದ ಸಾಕಷ್ಟು ಮಂದಿ ನೊಂದಿರುವುದರಿಂದ ಸರ್ಕಾರ ಕರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಲಾಕ್ಡೌನ್ ಹೇರುವ ಪ್ರಮೇಯವೇ ಬರುವುದಿಲ್ಲ ಎಂದಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಕೆ. ಸುಧಾಕರ್ ಜನರು ಅನುಸರಿಸಬೇಕಾದ ನಿಯಮಗಳ ಬಗ್ಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮಾಸ್ಕ್ ಧರಿಸುವುದು, ಭೌತಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಕೈಗಳನ್ನು ಶುಚಿಗೊಳಿಸುವ ಈ ಮೂರು ನಿಯಮಗಳನ್ನು ಚಾಚೂ ತಪ್ಪದೇ ಅನುಸರಿಸಿದರೆ, ಕರೊನಾ ವಿರುದ್ಧ ಜಯ ನಮ್ಮದೆ. ಒಂದು ವೇಳೆ ನಿರ್ಲಕ್ಷಿಸಿದರೆ, ಈ ಸಲ ತಪ್ಪು ನಮ್ಮದೆ. ಹೀಗಾಗಿ ಶಿಸ್ತು, ಸಂಯಮ ಹಾಗೂ ಸ್ವಯಂ ನಿಯಂತ್ರಣ ಪಾಲಿಸೋಣ ಮತ್ತು ಕೊರೊನಾ ಎರಡನೇ ಅಲೆಯನ್ನು ಹಿಮ್ಮೆಟ್ಟಿಸೋಣ ಎಂದಿದ್ದಾರೆ.