VIDEO| ದೋಸೆ, ಇಡ್ಲಿ ಮಾಡ್ಕಂಡು ಉಣ್ಣದು ಕಲಿತುಕೊಳ್ಳಿ: ಹಳ್ಳಿ ಸೊಗಡಿನಲ್ಲಿ ಕರೊನಾ ಎಚ್ಚರಿಕೆ ನೀಡಿದ ಶಾಸಕ ಶಿವಲಿಂಗೇಗೌಡ

Shivalinge Gowda
Published on

ಹಾಸನ: ಹಳ್ಳಿ ಸೊಗಡಿನಲ್ಲಿ ಮಹಾಮಾರಿ ಕರೊನಾ ವೈರಸ್​ ಬಗ್ಗೆ ಹೇಳಿ ಹಳ್ಳಿ ರೈತರಿಗೆ ಅರಸಿಕೆರೆ ಜೆಡಿಎಸ್​ ಶಾಸಕ ಶಿವಲಿಂಗೇಗೌಡ ಎಚ್ಚರಿಕೆ ನೀಡಿದ ಪ್ರಸಂಗವೊಂದು ಜರುಗಿದೆ.

ಚೀನಾ ದೇಶದವರು ಹೇಳಿದ ಮಾತಿಗೆ ಟ್ರಂಪ್ ಉದಾಸಿನಾ ಮಾಡಿದ. ಈಗ ಏನಾಗಿದೆ ಅಮೆರಿಕದಲ್ಲಿ? 50 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಇಟಲಿಯಲ್ಲಿ ರಜೆ ಕೊಟ್ರೆ ಜನ ಬಾರಿಗೆ ಹೋಗಿ ಮಜಾಮಾಡಿದರು. ಅಲ್ಲಿಯೂ ಸರಿಯಾಗಿ ಲಾಕ್​ಡೌನ್​ ಮಾಡಲಿಲ್ಲ. ಹೀಗಾಗಿ 25 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಇಂಡಿಯಾದಲ್ಲಿ ಲಾಕ್​ಡೌನ್ ಮಾಡಿದರಿಂದ ಸಾವಿನ ಸಂಖ್ಯೆ ಸಾವಿರ ಮಾತ್ರ ದಾಟಿದೆ. ಲಾಕ್​ಡೌನ್​ ಕೆಲಸ ಮಾಡಿದೆ ಎಂಬುದು ಸಾಬೀತಾಗಿದೆ ಎಂದರು.

ಇದನೆಲ್ಲವನ್ನು ಬಿಟ್ಟು ಬಸ್ ಬಿಡಿ ,ಟ್ರೈನ್ ಬಿಡಿ, ವಿಮಾನ ಬಿಡಿ ಎಂದು ಸರ್ಕಾರಕ್ಕೆ ಹೇಳೋಕೆ ಆಗುತ್ತಾ? ಎಂದು ರೈತರನ್ನು ಪ್ರಶ್ನಿಸಿ ಲಾಕ್​ಡೌನ್ ಮಾಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರಮವನ್ನು ಸರ್ಮರ್ಥಿಸಿಕೊಂಡರು.

ನಿಮಗೆಲ್ಲ ಏನಾಗಿದೆ? ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಅದರ ಜತೆ ನಾವು ಇರಬೇಕು. ಸರ್ಕಾರ ಅಕ್ಕಿ ಕೊಟ್ಟಿದೆ. ಒಂದು ಮನೆಗೆ 50 ಕೆಜಿ ಅಕ್ಕಿ ಸಿಗುತ್ತದೆ. ನಮ್ಮ ಕೈಲಾಗಿದ್ದು ತಂದು ಕೊಡುತ್ತೇವೆ. ಅಚ್ಚುಕ್ಕಟ್ಟಾಗಿ ದೋಸೆ ಬಿಡ್ಕಂಡು, ಇಡ್ಲಿ ಮಾಡ್ಕಂಡು, ಅನ್ನ ಮಾಡ್ಕೊಂಡು ಉಣ್ಣದು ಕಲಿತುಕೊಳ್ಳಿ ಎಂದು ಗ್ರಾಮೀಣ ಶೈಲಿಯಲ್ಲೇ ಹಳ್ಳಿಗಳಿಗೆ ಹೋಗಿ ಶಿವಲಿಂಗೇಗೌಡರು ಜಾಗೃತಿ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net