ವಿದ್ಯಾರ್ಥಿಗಳ ಶ್ರೇಯಸ್ಸು, ಅಭಿವೃದ್ಧಿ ಧ್ಯೇಯ

jyothishmati
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿಯಲ್ಲಿ ನವೀಕೃತ ಶಿಕ್ಷಕರ ಕೊಠಡಿ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕ ಸಂಚಿಕೆ ಜ್ಯೋತಿಷ್ಮತಿ ಲೋಕಾರ್ಪಣೆ ನಡೆಯಿತು
Published on

ಗಂಗೊಳ್ಳಿ: ಶಿಕ್ಷಕರು ತಮ್ಮ ಕರ್ತವ್ಯವನ್ನು ಜವಾಬ್ದಾರಿ ಶ್ರದ್ಧೆಯಿಂದ ನಿಭಾಯಿಸಿರುವುದು ಶಿಕ್ಷಕ ಹಾಗೂ ಆಡಳಿತ ಮಂಡಳಿಗೆ ಗೌರವ ತೋರಿಸುತ್ತಿದೆ. ಸಮಾಜ ಒಪ್ಪುವಂತೆ, ಅಂಜದೆ, ಸಮಾಜಕ್ಕೆ ಅನುಕೂಲವಾಗುವಂತೆ ಜವಾಬ್ದಾರಿ ನಿಭಾಯಿಸುವುದು ಶಿಕ್ಷಕರ ಕರ್ತವ್ಯ ಎಂದು ಹೈಕೋರ್ಟ್ ಹಿರಿಯ ವಕೀಲ ಎಸ್.ರಾಜಶೇಖರ ಹೇಳಿದರು.

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ನವೀಕೃತ ಶಿಕ್ಷಕರ ಕೊಠಡಿ ಉದ್ಘಾಟನೆ ಹಾಗೂ ಶಾಲೆ ವಾರ್ಷಿಕ ಸಂಚಿಕೆ ಜ್ಯೋತಿಷ್ಮತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕರಿಗೆ ಉತ್ತಮ ಸೌಕರ್ಯ ಒದಗಿಸಿರುವುದು ಪ್ರಶಂಸನಾರ್ಹ. ವಿದ್ಯಾರ್ಥಿಗಳ ಶ್ರೇಯಸ್ಸು, ಅಭಿವೃದ್ಧಿ ಸಂಸ್ಥೆಯ ಮೂಲಧ್ಯೇಯವಾಗಿ ಸಾಗಲಿ ಎಂದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿಯ ಎಸ್.ಕೆ.ಆರ್ಟ್ಸ್ ಮತ್ತು ಎಚ್.ಎಸ್.ಕೆ ವಿಜ್ಞಾನ ಸಂಸ್ಥೆಯಲ್ಲಿನ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜಿ.ಪಿ.ಸಿದ್ದಾಪುರ್ ಶುಭಾಶಂಸನೆಗೈದರು. ಕಳೆದ ವರ್ಷ ಗಿನ್ನಿಸ್ ದಾಖಲೆಗಾಗಿ ಬಳಸಿದ್ದ ರೂಬಿಕ್ ಕ್ಯೂಬ್‌ಗಳನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಟ್ಟಿಯಂಗಡಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೂಡ್ಲು ಕನ್ಯಾನ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಲ್ಲೂರು, ಸರ್ಕಾರಿ ಪ್ರೌಢಶಾಲೆ ತಲ್ಲೂರು, ಸರ್ಕಾರಿ ಪ್ರೌಢಶಾಲೆ ಉಪ್ಪಿನಕುದ್ರು, ಶ್ರೀ ಮೂಕಾಂಬಿಕಾ ಪ್ರೌಢಶಾಲೆ ಮಾವಿನಕಟ್ಟೆ ಮೊದಲಾದ ಶಾಲೆಗಳಿಗೆ ಹಸ್ತಾಂತರಿಸಲಾಯಿತು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಉಪಾಧ್ಯಕ್ಷ ಬಾಲಚಂದ್ರ ಭಟ್, ಟ್ರಸ್ಟಿ ಪ್ರೊ.ಎಸ್.ನಾರಾಯಣ ರಾವ್, ಹಿರಿಯ ವಕೀಲ ರಾಜೇಶ್ ಸಿದ್ದಾಪುರ್, ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಉಪ ಪ್ರಾಂಶುಪಾಲ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಸುಜಾತಾ ಸದಾರಾಮ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದೀಪ್ತಿ ಟಿ. ಸ್ವಾಗತಿಸಿ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಶರಣ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಶ್ರೇಯಾ ಸೈದಾಪುರ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಪಲ್ಲವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net