ಹಳೆಯ ಜಾತಿಗಣತಿ ವರದಿಯಿಂದ ನ್ಯಾಯ ಸಿಗಲ್ಲ: ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿಕೆ

swamiji12
Published on

ಬೆಂಗಳೂರು: ರಾಜ್ಯ ಸರ್ಕಾರ ಹಠಕ್ಕೆ ಬಿದ್ದು ಜಾತಿ ಜನಗಣತಿ ಜಾರಿಗೆ ತರಬಾರದು. ಈಗಾಗಲೇ ಕಾಂತರಾಜ ಆಯೋಗ ಸಿದ್ದಪಡಿಸಿರುವ ವರದಿ ಜಾರಿಯಿಂದ ಲಿಂಗಾಯತರಿಗೆ, ಹಿಂದುಳಿದ ವರ್ಗದವರಿಗೆ ಮತ್ತು ಒಕ್ಕಲಿಗರಿಗೆ ನ್ಯಾಯ ನೀಡಲು ಸಾಧ್ಯವಿಲ್ಲ ಎಂದು ಸ್ಫಟಿಕಪುರಿ ಮಹಾ ಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.

ಈ ಬಗ್ಗೆ ಸರ್ಕಾರ ಯೋಚನೆ ಮಾಡಬೇಕು. ಗಣತಿ ಸಿದ್ಧಪಡಿಸಿ 10 ವರ್ಷ ಕಳೆದಿದೆ. ಅದನ್ನು ಜಾರಿಗೆ ತರಬೇಕು ಎಂದು ಏಕೆ ಹಠ ಮಾಡುತ್ತಿದ್ದೀರಿ. ಈಗಾಗಲೇ 180 ಕೋಟಿ ರೂ. ಖರ್ಚು ಮಾಡಿದ್ದೀರಿ, ಇನ್ನೂ 250 ಕೋಟಿ ರೂ. ಖರ್ಚು ಮಾಡಿ ಹೊಸ ಗಣತಿ ತಯಾರಿಸಿ. ಗಣತಿ ವಿಚಾರವಾಗಿ ಈಗಾಗಲೇ ಹಲವು ಸಚಿವರುಗಳೇ ನಮ್ಮ ಮನಗೆ ಭೇಟಿ ನೀಡಿಲ್ಲ ಎಂದು ಹೇಳಿದ್ದಾರೆ. ಸಂವಿಧಾನದ ರೀತಿಯಲ್ಲಿ ಸರ್ಕಾರ ನಡೆಯಬೇಕು. ಹಳೆಯದಾಗಿರುವ ಗಣತಿಯನ್ನು ಜಾರಿಗೆ ತರಲು ನೀವು ಏಕೆ ಹಠ ಮಾಡುತ್ತಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸದೆ ಪರೋವಾಗಿ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.

ಗಣತಿ ಜಾರಿಯಿಂದ ಸಣ್ಣ ಸಣ್ಣ ಜಾತಿಗಳಿಗೂ ನ್ಯಾಯ ಸಿಗಬೇಕು. ಲಿಂಗಾಯತರು ಕೂಡ ಕಾಂತರಾಜ ಆಯೋಗದ ಸಾಮಾಜಿ ಮತ್ತು ಶೈಣಿಕ ವರದಿ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಗಣತಿಯಲ್ಲಿ ಹಲವು ರೀತಿಯ ಗೊಂದಲ ಇವೆ. 3 ಲಕ್ಷ ಕೋಟಿ ರೂ. ಬಜೆಟ್​ ಮಾಡಿದವರಿಗೆ 250 ಕೋಟಿ ರೂ. ಬಹಳ ದೊಡ್ಡದಲ್ಲ. ಜತಿಗಣತಿ ಬಗ್ಗೆ ನಿಯಮ ರೂಪಿಸಿ ಹೊಸದಾಗಿ ಸಿದ್ದಪಡಿಸಿ. ಇದು ಕೇವಲ ಒಕ್ಕಲಿಗರ ಸಮುದಾಯದ ಬೇಡಿಕೆ ಅಷ್ಟೇ ಅಲ್ಲ. ನಾಡಿನ ಸಮಸ್ತ ಎಲ್ಲ ಜನರ ಬೇಡಿಕೆ ಆಗಿದೆ ಎಂದ ಶ್ರೀಗಳು, ವಸ್ತುನಿಷ್ಠವಾಗಿ, ವೈಜ್ಷಾನಿಕವಾಗಿ ಗಣತಿ ಸಿದ್ಧಪಡಿಸಬೇಕು. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಒಕ್ಕಲಿಗ ಸಮುದಾಯ ವಿರೋಧ ವ್ಯಕ್ತಪಡಿಸುವುದಿಲ್ಲ. ಇಲ್ಲವೆ ಒಕ್ಕಲಿಗರಿಗೂ ಎಸ್ಟಿ ಸ್ಥಾನ ಮಾನ ನೀಡಿ ಎಂದು ಬೇಡಿಕೆ ಸಲ್ಲಿಸುತ್ತಿಲ್ಲ. ಆದರೆ, ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವುದಿಲ್ಲ ಎಂದರೆ ಹೇಗೆ?. ನಮ್ಮ ಸಮುದಾಯದ ಮಕ್ಕಳ ಭವಿಷ್ಯತ್ತಿನ ಸ್ಥಿತಿ ಏನಾಗಬೇಕು?. ಒಕ್ಕಲಿಗರಲ್ಲೂ ಬಡ ಬೋರೇಗೌಡರು ಇದ್ದಾರೆ ಎಂಬುವುದನ್ನು ಸರ್ಕಾರ ಮರೆಯಬಾರದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net